ವೀಕ್ಷಕರ ಮನಸ್ಸನ್ನು ಗೆದ್ದಿರುವ ಕೆಲ ಸಿನಿಮಾಗಳು ಈ ವಾರ ಒಟಿಟಿಗೆ ಕಾಲಿಟ್ಟಿವೆ, ಹಾಗಾದರೆ ಅವು ಯಾವುವು? ಲಿಸ್ಟ್‌ ಇಲ್ಲಿದೆ.  

ಚಿತ್ರಮಂದಿರದಲ್ಲಿ ಕಮಾಲ್‌ ಮಾಡಿದ ಹಾಗೂ ಜನರಿಗೆ ಕುತೂಹಲ ಮೂಡಿಸುವ ಸಿರೀಸ್‌ಗಳು ಒಟಿಟಿ ಅಂಗಳಕ್ಕೆ ಬಂದಿವೆ. ಹಾಗಾದರೆ ಯಾವ ಸಿನಿಮಾವನ್ನು ನೀವು ಎಲ್ಲಿ ನೋಡಬಹುದು? ಜನರ ಮನಸ್ಸನ್ನು ಗೆದ್ದಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. ನಿಮಗೆ ಇಷ್ಟವಾಗುವ ಜಾನರ್‌ನ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. 

ಧೂಮ್‌ ಧಾಮ್‌
ಯಾಮಿ ಗೌತಮ್‌, ಪ್ರತೀಕ್‌ ಗಾಂಧಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಿಷಬ್‌ ಸೇತ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್‌ನೈಟ್‌ ದಿನವೇ ನವಜೋಡಿಗಳನ್ನು ರೌಡಿಗಳು ಬೆನ್ನತ್ತಿದ ಕಥೆ ಇಲ್ಲಿದೆ. Netflix ನೋಡಿ..

ಬಾಬಿ ಔರ್‌ ರಿಷಿ ಕಿ ಲವ್‌ಸ್ಟೋರಿ 
ಕಾವೇರಿ ಕಪೂರ್‌, ವರ್ಧಾನ್‌ ಪುರಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿದೇಶದಲ್ಲಿ ಭೇಟಿಯಾದ ಬಾಬಿ, ರಿಷಿ ಅವರು ಪ್ರೀತಿಯಲ್ಲಿ ಬೀಳುತ್ತಾರೆ. ಕುನಾಲ್‌ ಕೊಹ್ಲಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಹಾಟ್‌ಸ್ಟಾರ್‌ ನೋಡಿ. 

ಪ್ಯಾರ್‌ ಟೆಸ್ಟಿಂಗ್‌
ಸತ್ಯಜಿತ್‌ ದುಬೇ, ಪ್ಲಬಿತಾ ಬೊರ್ಥಾಕೂರ್‌ ನಟನೆಯ ಈ ಸಿನಿಮಾದಲ್ಲಿ ರಾಮ್-ಕಾಮಿಡಿಯಿದೆ. ಮದುವೆಯಾಗುವ ಮುನ್ನ ನಮ್ಮಿಬ್ಬರ ನಡುವೆ ಎಷ್ಟು ಹೊಂದಾಣಿಕೆ ಇದೆ ಎಂದು ಅಮೃತಾ, ಧ್ರುವ ನಿರ್ಧಾರ ಮಾಡಲು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಇರುತ್ತಾರೆ. ಶಿವ ವರ್ಮ, ಸಪ್ತರಾಜ್‌ ಚಕ್ರವರ್ತಿ ಅವರು ಈ ಧಾರಾವಾಹಿ ನಿರ್ದೇಶಕರು. ಜೀ5 ವೀಕ್ಷಿಸಿ. 

Surviving Black Hawk Down
ಐತಿಹಾಸಿಕ ಕಥೆಯಿದು. 1993ರಲ್ಲಿ ಮೊಗದಿಶು, ಸೋಮಾಲಿಯಾದಲ್ಲಿ ನಡೆದ ಕಥೆಯಿದು. ಇದು ಮೂರು ಎಪಿಸೋಡ್‌ಗಳನ್ನು ಒಳಗೊಂಡಿದೆ. ನೆಟ್‌ಫ್ಲಿಕ್ಸ್‌ ನೋಡಿ. 


‘ಲವ್ವರ್‌ ಇಲ್ಲದಿದ್ದರೇನು? ನೋ ಪ್ರಾಬ್ಲಮ್’;‌ ಬ್ರೇಕಪ್‌ ಆದ್ಮೇಲೆ ದುಬಾರಿ ಕಾರ್‌ ಖರೀದಿಸಿದ ಮಾರಿಮುತ್ತು ಮೊಮ್ಮಗಳು Jayashree


ರೇಖಾಚಿತ್ರಂ 
ಮಲಯಾಳಂನಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಮಿಸ್ಟರಿ ಕ್ರೈಂ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಸೋನಿ ಲೈವ್‌ನಲ್ಲಿ ಪ್ರಸಾರ ಆಗಲಿದೆ.

ದಿ ಎಕ್ಸ್‌ಚೇಂಜ್‌ ಸೀಸನ್‌ 2
ಫರಿದಾ, ಮುನಿರಾ ಅವರು ಕುವೈತ್‌ನ ಸ್ಟಾಕ್‌ ಮಾರ್ಕೆಟ್‌ ಅನ್ವೇಷಣೆ ಮಾಡಲು ಹೊರಡುತ್ತಾರೆ. ಈ ಜರ್ನಿಯಲ್ಲಿ ಅವರು ಏನೆಲ್ಲ ಸವಾಲುಗಳನ್ನು ಎದುರಿಸುತ್ತಾರೆ ಎನ್ನೋದಿದೆ. ನೆಟ್‌ಫ್ಲಿಕ್ಸ್‌ ನೋಡಿ. 

ಲವ್‌ ಈಜ್‌ ಬ್ಲೈಂಡ್‌
ಲವ್‌ ಈಜ್‌ ಬ್ಲೈಂಡ್‌ ಸೀಸನ್‌ 2 ಪ್ರಸಾರ ಆಗಿದೆ. ಪ್ರೀತಿ ಕುರಿತು ಇದೆ ಕಥೆ ಇದೆ. ನೆಟ್‌ಫ್ಲಿಕ್ಸ್‌ ನೋಡಿ. Paramount+ with Showtime ನೋಡಿ. 

ಸ್ಕ್ರಿಪ್ಟ್ ಪ್ರಕಾರವೇ ನಡೆಯುತ್ತಾ ಕಪಿಲ್ ಶರ್ಮಾ ಶೋ? ರಹಸ್ಯ ಬಹಿರಂಗಪಡಿಸಿದ ಸುಮೋನಾ

Yellowjackets Season 3
ಪ್ಲ್ಯಾನ್‌ ಕ್ರ್ಯಾಶ್‌ ಆದಾಗ ಉಳಿದ ಹೈಸ್ಕೂಲ್‌ ವಿದ್ಯಾರ್ಥಿಗಳು ಹೇಗೆ ಉಳಿಯುತ್ತಾರೆ ಎನ್ನುವ ಕಥೆ ಇದೆ. ನೆಟ್‌ಫ್ಲಿಕ್ಸ್‌ ನೋಡಿ. 

Valeria Season 4 
ಲವ್‌, ಜೀವನ, ಕರಿಯರ್‌ ಕುರಿತ ಸಿರೀಸ್‌ ಇದಾಗಿದೆ. ನೆಟ್‌ಫ್ಲಿಕ್ಸ್‌ ನೋಡಿ. 

Kadhalikka Neramillai
ರವಿ ಮೋಹನ್‌, ನಿತ್ಯಾ ಮೆನನ್‌ ನಟನೆಯ ಈ ಸಿನಿಮಾದಲ್ಲಿ ಪ್ರೀತಿ ಕಥೆ ಇದೆ. ನೆಟ್‌ಫ್ಲಿಕ್ಸ್‌ ವೀಕ್ಷಿಸಿ. 

ಮಾರ್ಕೋ
ಉನ್ನಿ ಮುಕುಂದನ್‌ ನಟನೆಯ ಈ ಸಿನಿಮಾದಲ್ಲಿ ಆಕ್ಷನ್‌ ಕಥೆಯಿದೆ. ಸೋನಿಲೈವ್‌ ವೀಕ್ಷಿಸಿ. 

Kiccha Sudeep: ಒಂದೇ ದಿನ ಒಟಿಟಿಯಲ್ಲೂ, ಟಿವಿಯಲ್ಲೂ ರಿಲೀಸ್ ಆಗ್ತಿರೋ ಕಿಚ್ಚ ಸುದೀಪ್ Max Movie; ಯಾವಾಗ?

ಮ್ಯಾಕ್ಸ್‌ ಸಿನಿಮಾ
ಕಿಚ್ಚ ಸುದೀಪ್‌ ನಟನೆಯ ಈ ಸಿನಿಮಾ ಜೀ5ನಲ್ಲಿದೆ. 

Manorajyam
ಉದ್ಯಮಿ ತನ್ನ ಪತ್ನಿಯನ್ನು ಪರೀಕ್ಷೆ ಮಾಡುವ ಕತೆ ಇದರಲ್ಲಿದೆ. ಮನೋರಮಾ ಮ್ಯಾಕ್ಸ್‌ನಲ್ಲಿ ಈ ಸಿನಿಮಾ ಸಿಗಲಿದೆ. 

ಲವ್‌ ಫಾರ್‌ ಸೇಲ್‌ 
ಮಲಯಾಳಂ ಭಾಷೆಯ ರೊಮ್ಯಾಂಟಿಕ್‌ ಲವ್‌ಸ್ಟೋರಿ ಇದು! ಅಮೆಜಾನ್‌ ಪ್ರೈಮ್‌ ನೋಡಿ. 

ಟು ಲೆಟ್‌ 
ತಮಿಳಿನ ಥ್ರಿಲ್ಲರ್‌ ಕಾಮಿಡಿ ಇದಾಗಿದೆ. ಅಮೆಜಾನ್‌ ಪ್ರೈಮ್‌ ವೀಕ್ಷಿಸಿ. 

ದಕ್ಷಿಣದ ವಿವಾದಾತ್ಮಕ ನಟ ಜಯಂ ರವಿ, ನಿತ್ಯ ಮೆನನ್ ಸಿನಿ ದಾಂಪತ್ಯ; ಒಟಿಟಿಯಲ್ಲಿ ಭಾರೀ ಸದ್ದು!

ಮೈ ಫಾಲ್ಟ್‌
ಬ್ರಿಟಿಷ್‌ ರೊಮ್ಯಾಂಟಿಕ್‌ ಡ್ರಾಮಾ ಸಿನಿಮಾ ಇದಾಗಿದೆ. ಅಮೆಜಾನ್‌ ಪ್ರೈಮ್‌ ವೀಕ್ಷಿಸಿ. 

ಭೈರತಿ ರಣಗಲ್‌
ಶಿವರಾಜ್‌ಕುಮಾರ್‌ ನಟನೆಯ ಈ ಕನ್ನಡ ಸಿನಿಮಾ ತೆಲುಗು ಭಾಷೆಯಲ್ಲಿ ಲಭ್ಯವಿದೆ.ಅಮೆಜಾನ್‌ ಪ್ರೈಮ್‌ನಲ್ಲಿ ನೋಡಿ.