Kiccha Sudeep: ಒಂದೇ ದಿನ ಒಟಿಟಿಯಲ್ಲೂ, ಟಿವಿಯಲ್ಲೂ ರಿಲೀಸ್ ಆಗ್ತಿರೋ ಕಿಚ್ಚ ಸುದೀಪ್ Max Movie; ಯಾವಾಗ?
ನಟ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಈಗಾಗಲೇ ಚಿತ್ರಮಂದಿರದಲ್ಲಿ ತೆರೆ ಕಂಡು, ಮ್ಯಾಕ್ಸಿಮಮ್ ಹಿಟ್ ಆಗಿದೆ. ಈಗ ಈ ಸಿನಿಮಾ ಒಂದೇ ದಿನ ಒಟಿಟಿಯಲ್ಲಿ, ಟಿವಿಯಲ್ಲಿ ಬರ್ತಿದೆಯಂತೆ. ಯಾವಾಗ?

ನಟ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ‘ಮ್ಯಾಕ್ಸ್’ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ಫಿಕ್ಸ್ ಆಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸಿಮಮ್ ಮನರಂಜನೆ ಕೊಟ್ಟಿರೋ ‘ಮ್ಯಾಕ್ಸ್’ ಸಿನಿಮಾ. ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಸಿನಿಮಾ ಕನ್ನಡ ಮಾತ್ರವಲ್ಲದೇ, ತೆಲುಗು ಭಾಷೆಯಲ್ಲೂ ರಿಲೀಸ್ ಆಗಿತ್ತು. ಮ್ಯಾಕ್ಸ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದರು. ಈಗ ಒಟಿಟಿ ರಿಲೀಸ್ ದಿನಾಂಕದ ಜೊತೆಗೆ ಟಿವಿಯಲ್ಲಿ ಒಂದೇ ದಿನ ಪ್ರಸಾರ ಆಗಲಿದೆ.
ಈ ಸಿನಿಮಾ ಒಟಿಟಿಯಲ್ಲಿ, ವಾಹಿನಿಯಲ್ಲಿ ರಿಲೀಸ್ ಆಗೋದು ಯಾವಾಗ?
ಜೀ ಕನ್ನಡ ವಾಹಿನಿಯಲ್ಲಿ ‘ಮ್ಯಾಕ್ಸ್’ ಸಿನಿಮಾ ಫೆಬ್ರವರಿ 15ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜೀ ಕನ್ನಡ ವಾಹಿನಿಯು ಈ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿತ್ತು. ‘ಮ್ಯಾಕ್ಸ್’ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಫೆಬ್ರವರಿ 15ಕ್ಕೆ ಜೀ5 ಒಟಿಟಿಯಲ್ಲಿ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಮ್ಯಾಕ್ಸ್ ಸಿನಿಮಾವನ್ನು ಫೆ 15ಕ್ಕೆ ರಾತ್ರಿ 7.50ಕ್ಕೆ ವೀಕ್ಷಕರು ನೋಡಬಹುದು.
ಕಿಚ್ಚ ಸುದೀಪ್ ಬದಲು ಹುಚ್ಚ ಸುದೀಪ್ ಎಂದುಬಿಟ್ಟ ಕೆ.ಮಂಜು; ಪ್ಯಾಚಪ್ ಮಾಡಿದ್ದು ಹೇಗೆ ನೋಡಿ....
ಈ ಸಿನಿಮಾ ಕತೆ ಏನು?
ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಅವರು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಒಂದು ಪ್ರಕರಣವನ್ನು ಬೇಧಿಸುವುದರ ಜೊತೆಗೆ ಮಾಡಿದ ತಪ್ಪಿಗೆ ಶಿಕ್ಷೆ ಕೊಡಿಸುವ ಕೆಲಸವೂ ಇದಾಗಿದೆ. ಅನ್ಯಾಯದ ವಿರುದ್ಧ ದನಿಯೆತ್ತುವ ಮ್ಯಾಕ್ಸ್ ಪದೇ ಪದೇ ಅಮಾನತು ಆಗುತ್ತಾನೆ. ಆದರೂ ಬುದ್ಧಿವಂತಿಕೆಯಿಂದ ಪ್ರಕರಣ ಬೇಧಿಸಿ ರೌಡಿಗಳ ಮಟ್ಟ ಹಾಕುತ್ತಾನೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದೆ. ಅಮಾನತಿನಲ್ಲಿದ್ದ ಅರ್ಜುನ್ ಮಹಾಕ್ಷಯ್ ಅವರು ಒಂದು ರಾತ್ರಿಯಲ್ಲಿ ಏನೆಲ್ಲ ಮಾಡಲಿದ್ದಾರೆ ಎನ್ನೋದನ್ನು ಸಿನಿಮಾದಲ್ಲಿ ನೋಡಿದರೆ ಚೆಂದ.
ಸಾನ್ವಿ ಸುದೀಪ್‌ಗೆ ಬೇಸರ ಮಾಡಿದ ಬಿಗ್ ಬಾಸ್ ರಜತ್ ಕಿಶನ್; ಕಿರಿಕ್ ಎಂದು ವಿಡಿಯೋ ವೈರಲ್
ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿದ್ದಾರೆ?
ತಮಿಳಿನ ಕಲೈಪುಲಿ ಎಸ್ ಧಾನು ಅವರು 'ಮ್ಯಾಕ್ಸ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಈ ಚಿತ್ರದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, 'ಉಗ್ರಂ' ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್, ಅರ್ಜುನ್ ಆದಿದೇವ್ ಮುಂತಾದವರು ನಟಿಸಿದ್ದರು. ಬಹುತೇಕ ಇವರೆಲ್ಲರೂ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. 2024ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಮ್ಯಾಕ್ಸ್ ಸಿನಿಮಾ ಚಿತ್ರಮಂದಿರಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ ಕಮಾಲ್ ಮಾಡಿದ್ದ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಾಹಣ ಈ ಸಿನಿಮಾಕ್ಕಿದೆ.
CCLಗೆ ಕಿಚ್ಚ ಸುದೀಪ್ ಫುಲ್ ಪ್ರಾಕ್ಟೀಸ್ | Celebrity Cricket League 2025 | Suvarna News | Kannada News
ಎರಡೂವರೆ ವರ್ಷಗಳ ಬಳಿಕ ತೆರೆ ಮೇಲೆ ಎಂಟ್ರಿ!
ಕಿಚ್ಚ ಸುದೀಪ್ ಅವರು ಕೊನೆಯದಾಗಿ ತೆರೆ ಮೇಲೆ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ತೆರೆ ಕಾಣಿಸಿದ್ದರು. ಇದಾಗಿ ಎರಡೂವರೆ ವರ್ಷಗಳ ಬಳಿಕ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹೀರೋಯಿಸಂ ಕೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸಾರ ಹೊಂದಿರುವ ‘ಮ್ಯಾಕ್ಸ್’ ಸಿನಿಮಾ ಮ್ಯಾಕ್ಸಿಮಮ್ ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಕಿಚ್ಚ ಸುದೀಪ್ ನಟಿಸಿದ ಸಿನಿಮಾಗಳಲ್ಲಿ ಈ ಚಿತ್ರ ವಿಭಿನ್ನವಾಗಿ ಎದ್ದು ಕಾಣುತ್ತದೆ. ಅದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಬಹುದು.