ಸ್ಕ್ರಿಪ್ಟ್ ಪ್ರಕಾರವೇ ನಡೆಯುತ್ತಾ ಕಪಿಲ್ ಶರ್ಮಾ ಶೋ? ರಹಸ್ಯ ಬಹಿರಂಗಪಡಿಸಿದ ಸುಮೋನಾ
ಕಪಿಲ್ ಶರ್ಮಾ ಕಾಮಿಡಿ ಶೋ ಎಲ್ಲರನ್ನು ನಕ್ಕು ನಗಿಸುತ್ತದೆ. ಆದರೆ ಈ ಶೋ ಸಂಪೂರ್ಣ ಸ್ಕ್ರಿಪ್ಟ್ ಪ್ರಕಾರವೇ ನಡೆಯುತ್ತಾ? ಕಾಮಿಡಿ ಶೋನಲ್ಲಿ ಹಾಸ್ಯ ಚಟಾಕಿ ಮೊದಲೇ ಬರೆದು ಕಂಠಪಾಠ ಮಾಡಲಾಗುತ್ತಾ? ಈ ಕುರಿತ ಹಲವು ಸೀಕ್ರೆಟ್‌ಳನ್ನು ಸುಮೋನಾ ಚರ್ಕವರ್ತಿ ಬಹಿರಂಗಪಡಿಸಿದ್ದಾರೆ.

ಮುಂಬೈ(ಫೆ.13) ಭಾರತದ ಅತ್ಯಂತ ಜನಪ್ರಿಯ ಶೋ ಪಟ್ಟಿಯಲ್ಲಿ ಕಪಿಲ್ ಶರ್ಮಾ ಶೋ ಮುಂಚೂಣಿಯಲ್ಲಿದೆ. ಕಾಮಿಡಿ ಮೂಲಕ ಜನರನ್ನು ನಕ್ಕು ನಗಿಸುವ ಈ ಶೋ ಹಲವರು ಅಚ್ಚು ಮೆಚ್ಚು. ಒಬ್ಬರನ್ನೊಬ್ಬರು ಕಾಲೆಳೆಯುವ ರೀತಿ, ಹಾಸ್ಯ ಚಟಾಕಿಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಆದರೆ ಇಡೀ ಕಾಮಿಡಿ ಶೋ ಸ್ಕ್ರಿಪ್ಟ್ ಪ್ರಕಾರವೇ ನಡೆಯತ್ತಾ? ಒಬ್ಬರನ್ನೊಬ್ಬರು ಕಾಲೆಳೆಯುವ ಕಾಮಿಡಿ ಸೇರಿದಂತೆ ಪ್ರತಿಯೊಂದು ಹಾಸ್ಯವನ್ನು ಮೊದಲೇ ಬರೆದು ಕಂಠಪಾಠ ಮಾಡಲಾಗುತ್ತಾ ಅನ್ನೋ ಪ್ರಶ್ನೆಗೆ ಹಾಸ್ಯ ಕಲಾವಿದೆ ಸುಮೋನಾ ಚಕ್ರವರ್ತಿ ಉತ್ತರಿಸಿದ್ದಾರೆ. ಕಪಿಲ್ ಶರ್ಮಾ ಶೋದ ಹಲವು ಸೀಕ್ರೆಟ್‌ಗಳನ್ನು ಸುಮೋನಾ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಕಪಿಲ್ ಶರ್ಮಾ ಕಾಪಿಡ್ ಶೋದಲ್ಲಿ ಸುಮೋನಾ ಚಕ್ರವವರ್ತಿ ಹಾಸ್ಯನಟ ಕಪಿಲ್ ಶರ್ಮಾ ಅವರ ಪತ್ನಿಯ ಪಾತ್ರವನ್ನು ನಿರ್ವಹಿಸುತ್ತಾರೆ. ಆದರೆ ಈಗ ಸುಮೋನಾ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನ ಭಾಗವಾಗಿಲ್ಲ. ಹೀಗಿರುವಾಗ, ಸುಮೋನಾ ಇತ್ತೀಚೆಗೆ ಶೋನ ಸ್ಕ್ರಿಪ್ಟ್ ತಮ್ಮ ಪಾತ್ರಕ್ಕಿಂತ ಭಿನ್ನವಾಗಿ ರಚಿಸಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.
Sumona Chakravarti: ನನ್ನ ತುಟಿಗಳ ಕುರಿತು ಕಪಿಲ್ ಶರ್ಮಾ ಅಸಹ್ಯ ಮಾತನಾಡಿದರು ಎನ್ನುತ್ತಾ ಭಾವುಕರಾದ ನಟಿ
'ದಿ ಕಪಿಲ್ ಶರ್ಮಾ ಶೋ'ದಲ್ಲಿ ಕೆಲಸ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡ ಸುಮೋನಾ ಚಕ್ರವರ್ತಿ, 'ನನ್ನದೇ ಆದ ವೈಯಕ್ತಿಕ ಹಾಸ್ಯಪ್ರಜ್ಞೆ ಇದೆ, ಆದರೆ ಕಪಿಲ್ ಶರ್ಮಾ ಶೋಗೆ ನನ್ನ ಹಾಸ್ಯಪ್ರಜ್ಞೆ ಸಾಕಾಗುವುದಿಲ್ಲ. ಆದ್ದರಿಂದ ನನಗೆ, ಇದು ನಿಜವಾಗಿಯೂ ಸಂಪೂರ್ಣ ನಟನೆಯಾಗಿತ್ತು. ಇದನ್ನು ಮಾಡಲು ಬಹಳ ಸಮಯ ಹಿಡಿಯುತ್ತಿತ್ತು. ನಮಗೆ ಸ್ಕ್ರಿಪ್ಟ್ ಸಿಕ್ಕಾಗ, ನಾನು ಪೆನ್ ಮತ್ತು ಪೇಪರ್‌ನೊಂದಿಗೆ ಕುಳಿತು, ಪಂಚ್‌ಲೈನ್‌ಗಳನ್ನು ಹೈಲೈಟ್ ಮಾಡಿ, ಓದಿ, ಪದಕ್ಕೆ ಪದ ನೆನಪಿಟ್ಟುಕೊಳ್ಳುತ್ತಿದ್ದೆ. ಇದಕ್ಕಿಂತ ಹೆಚ್ಚಾಗಿ, ನಾನು ಕಪಿಲ್‌ರ ಸಾಲುಗಳನ್ನು ಸಹ ನೆನಪಿಟ್ಟುಕೊಳ್ಳುತ್ತಿದ್ದೆ, ಏಕೆಂದರೆ ಸಮಯಪ್ರಜ್ಞೆ ಕೂಡ ಮುಖ್ಯವಾಗಿತ್ತು.' ಇದರೊಂದಿಗೆ, ಶೋ ಚಿತ್ರೀಕರಣದ ಸಮಯದಲ್ಲಿ ಅವರು ತಮ್ಮ ಸಾಲುಗಳನ್ನು ಮಾತ್ರವಲ್ಲದೆ ಕಪಿಲ್‌ರ ಸಾಲುಗಳನ್ನು ಸಹ ನೆನಪಿಟ್ಟುಕೊಂಡಿದ್ದರಿಂದ ಕಪಿಲ್ ಶರ್ಮಾ ಅವರ ಸಮರ್ಪಣೆಯನ್ನು ಹೇಗೆ ಶ್ಲಾಘಿಸುತ್ತಿದ್ದರು ಎಂಬುದನ್ನು ಸುಮೋನಾ ವಿವರಿಸಿದರು.
ದಿ ಕಪಿಲ್ ಶರ್ಮಾ ಶೋ'ನಲ್ಲಿ ಕೀಕು ಶಾರದಾ, ಚಂದನ್ ಪ್ರಭಾಕರ್, ಕೃಷ್ಣ ಅಭಿಷೇಕ್, ಭಾರತಿ ಸಿಂಗ್ ಮತ್ತು ರೋಶೆಲ್ ರಾವ್ ಕೂಡ ಇದ್ದರು. ವರ್ಷಗಳ ಕಾಲ ಹಾಸ್ಯ ಕಾರ್ಯಕ್ರಮದಲ್ಲಿ ಪ್ರಬಲ ಕಲಾವಿದರಾಗಿದ್ದರೂ, ಸುಮೋನಾ ಈ ಶೋವನ್ನು ತೊರೆದರು. ಸುಮೋನಾ ಚಕ್ರವರ್ತಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2024 ರಲ್ಲಿ ಪ್ರಥಮ ಪ್ರದರ್ಶನಗೊಂಡ ಖತ್ರೋಂ ಕೆ ಖಿಲಾಡಿ 14'ರಲ್ಲಿ ಕೂಡ ಕಾಣಿಸಿಕೊಂಡಿದ್ದರು. ಈ ಶೋವನ್ನು ಕರಣ್ ವೀರ್ ಮೆಹ್ರಾ ಗೆದ್ದಿದ್ದರು. ಈಗ ಅವರು ಶೀಘ್ರದಲ್ಲೇ ಹಲವಾರು ಒಟಿಟಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಟದ ಕಾರಣಕ್ಕೆ ಕಪಿಲ್ ಶರ್ಮಾ ಜೊತೆ ಜಗಳವಾಡಿದ್ದ ಅನ್‌ಸ್ಕ್ರೀನ್ ಪತ್ನಿ ಸುಮೋನಾ ಚಕ್ರವರ್ತಿ