ದುಬಾರಿ ಕಾರ್ ಖರೀದಿಸಿದ ಮಾರಿಮುತ್ತು ಮೊಮ್ಮಗಳು Jayashree
ʼಬಿಗ್ ಬಾಸ್ ಕನ್ನಡ ಒಟಿಟಿʼ ಖ್ಯಾತಿಯ ಜಯಶ್ರೀ ಆರಾಧ್ಯ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ. ಪ್ರೇಮಿಗಳ ದಿನದಂದು ಈ ಸುದ್ದಿಯನ್ನು ಹಂಚಿಕೊಂಡ ಅವರು, ಬ್ರೇಕಪ್ ನಂತರ ತಮ್ಮ ಸಾಧನೆಯನ್ನು ಆಚರಿಸಿಕೊಂಡಿದ್ದಾರೆ.

ʼಬಿಗ್ ಬಾಸ್ ಕನ್ನಡ ಒಟಿಟಿʼ ಖ್ಯಾತಿಯ, ಮಾರಿಮುತ್ತು ಮಗಳು ಜಯಶ್ರೀ ಆರಾಧ್ಯ ಅವರು ದುಬಾರಿ ಕಾರ್ ಖರೀದಿಸಿದ್ದಾರೆ. ʼಪ್ರೇಮಿಗಳ ದಿನʼ ಅವರು ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಬ್ರೇಕಪ್ ಮಾಡಿಕೊಂಡಿರುವ ಅವರು ʼಪ್ರೇಮಿ ಇಲ್ಲದಿದ್ದರೇನಂತೆ, ನನಗೋಸ್ಕರ ನಾನು ಕಾರ್ ತಗೊಂಡೆʼ ಎಂದು ಹೇಳಿದ್ದರು.
ಜಯಶ್ರೀ ಆರಾಧ್ಯ ಅವರು “ಪ್ರೇಮಿ ಇಲ್ಲದಿದ್ದರೇನಂತೆ? ತೊಂದರೆ ಇಲ್ಲ. ಅರ್ಹತೆ ಇರೋದಿಕ್ಕೆ ನಾನು ಮರ್ಸಿಡಿಸ್ ತಗೊಂಡೆ. ಖುಷಿಗೆ ಅನಂದಬಾಷ್ಫದ ಜೊತೆಗೆ ಹೃದಯತುಂಬ ಹೆಮ್ಮೆಯಿದೆ. ಕೊನೆಗೂ ನಾನು ಇದನ್ನು ಸಾಧಿಸಿದೆ. ಯಾರೂ ನನ್ನನ್ನು ನಂಬದೇ ಇದ್ದಾಗ, ನಾನು ನನ್ನ ಮೇಲೆ ನಂಬಿಕೆ ಇಟ್ಟಿದ್ದೆ. ನಾನು ನಿರಂತರ ಕೆಲಸ ಮಾಡಿದೆ, ಕಷ್ಟಗಳ ವಿರುದ್ಧ ಹೋರಾಟ ಮಾಡಿದೆ, ತ್ಯಾಗವೂ ಮಾಡಿದೆ. ನನ್ನ ಶಕ್ತಿಯನ್ನು ನಾನು ಇಂದು ಆಚರಿಸುತ್ತಿದ್ದೇನೆ, ಇನ್ನೂ ಒಂದಷ್ಟು ಮೈಲಿಗಲ್ಲು ಸಾಧಿಸಬೇಕಿದೆ” ಎಂದು ಹೇಳಿದ್ದರು.
ಜಯಶ್ರೀ ಆರಾಧ್ಯ ಅವರು ಮಾರಿಮುತ್ತು ಮೊಮ್ಮಗಳು. ಸಿನಿಮಾಗಳಲ್ಲಿ ಕೂಡ ಅವರು ನಟಿಸಿ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಜಯಶ್ರೀ ಆರಾಧ್ಯ ಅವರು ಸದ್ಯ ಉದ್ಯಮದ ಕಡೆಗೆ ಮುಖ ಮಾಡಿದ್ದಾರೆ.
ಜಯಶ್ರೀ ಅವರು ತಮ್ಮ ಗ್ಲಾಮ್ ರೂಪ್ ಶಾಪ್‌ಗೆ ಆಗಮಿಸಿದ್ದ ಸ್ಟೀವನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಈ ಜೋಡಿಗೆ ಮದುವೆ ಆಗಬೇಕು ಎನ್ನುವ ಆಲೋಚನೆ ಇತ್ತು.
ಸ್ಟೀವನ್ ಜೊತೆಗೆ ಜಯಶ್ರೀ ಆರಾಧ್ಯ ಅವರು ‘ರಾಜ ರಾಣಿʼ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಆಗ ನಟಿ ತಾರಾ ಮುಂತಾದ ಜಡ್ಜ್ ಈ ಜೋಡಿಗೆ ಆದಷ್ಟು ಬೇಗ ಮದುವೆ ಆಗುವಂತೆ ಹೇಳಿತ್ತು. ಆದರೆ ಕಳೆದ ನವೆಂಬರ್‌ನಲ್ಲಿ ಜಯಶ್ರೀ ಅವರೇ ಬ್ರೇಕಪ್ ಆಗಿರುವ ವಿಷಯವನ್ನು ಹೇಳಿಕೊಂಡಿದ್ದಾರೆ.