Asianet Suvarna News Asianet Suvarna News

6ನೇ ವಾರದ ಬಿಗ್ ಬಾಸ್​ ಮನೆಯಿಂದ ಹೊರಬಿದ್ದ ಸ್ಪರ್ಧಿ ಇವರೇ ಸ್ವಾಮಿ..!

ಬಿಗ್ ಬಾಸ್ ಸೀಜನ್ 7 ಮನೆಯಿಂದ ಈ ವಾರ ಯಾರು ಹೊರ ಬೀಳ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಹಾಗಾದ್ರೆ ದೊಡ್ಡ ಮನೆಯಿಂದ 6ನೇ ವಾರದಂದು ಹೊರಬಿದ್ದ 6 ಕಂಟೆಸ್ಟೆಂಟ್ ಯಾರು..? ಈ ಕೆಳಗಿನಂತಿದೆ ನೋಡಿ...

sujatha out from Kannada bigg boss season 7
Author
Bengaluru, First Published Nov 23, 2019, 10:06 PM IST

ಈಗಾಗಲೇ 5 ವಾರಗಳ ಕನ್ನಡ ಬಿಗ್ ಬಾಸ್ ಸೀಜನ್-7 ಮನೆಯಿಂದ 5 ಸ್ಪರ್ಧಿಗಳು ವಾರಕ್ಕೆ ಒಬ್ಬರಂತೆ ಹೊರಬಿದ್ದಿದ್ದಾರೆ. ಇದೀಗ 6ನೇ ವಾರದ ಎಲಿಮಿನೇಷನ್​ನಲ್ಲಿ ಕಾಣಿಸಿಕೊಂಡಿರುವ ಮತ್ತೋರ್ವ ಸ್ಪರ್ಧಿ ಸುಜಾತ ಬಿಗ್ ಮನೆಯಿಂದ ಹೊರಬಿದ್ದಿದ್ದಾರೆ.

ಹಾಕೋದು ಅತಿ ಚಿಕ್ಕ ಚಿಕ್ಕ ಬಟ್ಟೆಯಂತೆ, ಕಾರಣ ಕೊಟ್ರು ದೀಪಿಕಾ!

ಈ ವಾರದ  ಎಲಿಮಿನೇಷನ್ ಪಟ್ಟಿಯಲ್ಲಿ  ಕಿಶನ್, ದೀಪಿಕಾ ದಾಸ್, ಸುಜಾತಾ, ಚಂದನ್ ಆಚಾರ್ ಮತ್ತು ಕುರಿ ಪ್ರತಾಪ್ ಇದ್ದರು. ಇದ್ರಲ್ಲಿ ಯಾರು ಹೊರ ಹೋಗ್ತಾರೆ ಎನ್ನುವ ತೀವ್ರ ಕುತೂಹಲ ಮೂಡಿಸಿತ್ತು. 

ಆದ್ರೆ, ಕೊನೆಗಳಿಯಲ್ಲಿ ನಾಲ್ವರು ಸೇಫ್ ಆಗಿದ್ದು, ಸುಜಾತ ಔಟಾದರು. ಅಲ್ಲಿಗೆ ಬಿಗ್ ಬಾಸ್ ಸ್ಪರ್ಧೆಯಿಂದ  6 ಸ್ಪರ್ಧಿಗಳು ಹೊರಬಿದ್ದಂತಾಗಿದ್ದು, ಉಳಿದ  12 ಮಂದಿ ನಡುವೆ ಅಸಲಿ ಸ್ಪರ್ಧೆ ಏರ್ಪಡಲಿದೆ.

ಕಳೆದ ವಾರ ನಟ ಜೈ ಜಗದೀಶ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದನ್ನು ಇಲ್ಲಿ ಸ್ಮರಿಸಬಹದು.

Follow Us:
Download App:
  • android
  • ios