ಖ್ಯಾತ ನಟಿ ಸುಧಾರಾಣಿ, 51 ವರ್ಷ ವಯಸ್ಸಾದರೂ ಯುವತಿಯಂತೆ ಕಾಣುತ್ತಾರೆ. ಪ್ರಸ್ತುತ ಜೀ ಕನ್ನಡದ "ಶ್ರೀರಸ್ತು ಶುಭಮಸ್ತು" ಧಾರಾವಾಹಿಯಲ್ಲಿ ತುಳಸಿಯಮ್ಮನಾಗಿ ನಟಿಸುತ್ತಿದ್ದಾರೆ. ಬಾಲ್ಯದಿಂದಲೂ ಸಿನಿಮಾಗಳಲ್ಲಿ ನಟಿಸಿರುವ ಇವರು, ಅನೇಕ ಚಿತ್ರಗಳಲ್ಲಿ 'ಮಾವ' ಎಂಬ ಪದವನ್ನು ಬಳಸಿದ್ದಾರೆ. ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆಯಾಗಿರುವ ಸುಧಾರಾಣಿ, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ.
ವಯಸ್ಸು 51 ಆದರೂ ನಟಿ ಸುಧಾರಾಣಿ ಇನ್ನೂ 21ರ ಯುವತಿಯೇ. ಅದೇ ಚೆಲುವು, ಅದೇ ಮೈಮಾಟವನ್ನು ಮೆಂಟೇನ್ ಮಾಡಿದ್ದಾರೆ ನಟಿ. ಅವರಿನ್ನೂ ಸಿಂಪಲ್ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. ರಿಯಲ್ ಲೈಫ್ನಲ್ಲಿ ಓರ್ವ ಮಗಳಿದ್ದರೆ, ಸೀರಿಯಲ್ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ. ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ಸದ್ಯ ಸೀರಿಯಲ್ನಲ್ಲಿ ಗರ್ಭಿಣಿಯಾಗುವ ಮೂಲಕ ಬಹುದೊಡ್ಡ ಪ್ರೇಕ್ಷಕ ವರ್ಗದಿಂದ ನಟಿ ಅಸಮಾಧಾನಕ್ಕೂ ಗುರಿಯಾಗಿದ್ದಾರೆ. ಈ ಅಸಮಾಧಾನದ ನಡುವೆಯೇ ಸೀರಿಯಲ್ನಲ್ಲಿ ಸೀಮಂತವನ್ನೂ ಮಾಡಿಸಿಕೊಂಡಿದ್ದಾರೆ.
ಇದೀಗ ನಟಿಗೂ ಮಾವಂಗೂ ಇರುವ ನಂಟಿನ ಒಂದು ಕುತೂಹಲದ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಸುಧಾರಾಣಿ ಅವರು ಬಾಲ್ಯದಲ್ಲಿಯೇ ಸಿನಿಮಾಕ್ಕೆ ಪರಿಚಿತರಾದವರು. ಆಗಿನಿಂದಲೂ ಅವರ ಸಿನಿಮಾಗಳಲ್ಲಿ ಮಾವ ಮಾವ ಎನ್ನುವ ಶಬ್ದವೇ ತುಂಬಿ ಹೋಗಿದೆ. 1981ರಲ್ಲಿ ಬಾಲನಟಿಯಾದ ಚಿತ್ರವೊಂದರಲ್ಲಿ ಮಾವ ಮಾವ ಎನ್ನುವ ಡೈಲಾಗ್ ವೈರಲ್ ಆಗಿದೆ. ಅಲ್ಲಿಂದ ಹಲವು ಸಿನಿಮಾಗಳಲ್ಲಿ ಮಾವ ಎಂದೇ ಹೇಳುವುದನ್ನು ನೋಡಬಹುದಾಗಿದೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿಯೂ ತುಳಸಿಯಾಗಿ ಮಾವನ ಮೇಲೆ ಆಕೆ ತೋರುವ ಅಪಾರ ಪ್ರೀತಿಯಿದೆ. ಅದರಲ್ಲಿಯೂ ಮಾವ ಮಾವ ಎನ್ನುವ ಡೈಲಾಗೇ ಹೆಚ್ಚಿದೆ. ಒಟ್ಟಿನಲ್ಲಿ ಸಿನಿಮಾದಿಂದ ಸೀರಿಯಲ್ಗೆ ಬಂದರೂ ನಟಿಗೆ ಮಾವ ಬೆನ್ನು ಬಿಡಲಿಲ್ಲ!
ಶಿವಣ್ಣ ಮಾಡಿದ್ದು ಇಷ್ಟ ಆಗ್ದೇ ರೀಶೂಟ್ ಮಾಡಿಸಿದ್ದ ಡಾ.ರಾಜ್! 'ಗೌರಮ್ಮಾ ನಿನ್ನ ಗಂಡ' ಹಾಡಿನ ಘಟನೆ ನೆನೆದ ಸುಧಾರಾಣಿ
ಇನ್ನು ಸುಧಾರಾಣಿ ಅವರ ಕುರಿತು ಹೇಳುವುದಾದರೆ, ಈಕೆ ಭರತನಾಟ್ಯ ಕಲಾವಿದೆ ಕೂಡ ಹೌದು. ಭರತನಾಟ್ಯ ಮಾತ್ರವಲ್ಲದೇ ಕೂಚುಪುಡಿ ಕಲಾವಿದೆ ಕೂಡ. ಇವರು ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ. 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿರುವ ಇವರು ಕೂಚಿಪುಡಿ ಹಾಗೂ ಭರತನಾಟ್ಯ ಕಲಾವಿದೆ. ತಮ್ಮ 13ನೇ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.
ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೇಯಾಗಿದ್ದಾರೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಸುಧಾರಾಣಿಯವರು ಮಗ ಅಭಿಗಾಗಿ ಡ್ರೈವಿಂಗ್, ನೃತ್ಯ, ಇಂಗ್ಲಿಷ್ ಎಲ್ಲಾ ಕಲಿತು ಸೀರಿಯಲ್ ಪ್ರೇಮಿಗಳ ಮನಸ್ಸನ್ನು ಕದಿಯುತ್ತಿದ್ದಾರೆ. ಇವೆಲ್ಲಕ್ಕೂ ಭೇಷ್ ಎಂದಿದ್ದ ಅಭಿಮಾನಿಗಳಿಗೆ ಗರ್ಭಿಣಿಯಾಗಿದ್ದು ಮಾತ್ರ ಸಹಿಸಿಕೊಳ್ಳಲು ಆಗ್ತಿಲ್ಲ.
ನೇರಪ್ರಸಾರದಲ್ಲಿ ಬಂದ ಸುಧಾರಾಣಿ ವೀಕ್ಷಕರಿಗೆ ಕೊಟ್ಟಿದ್ದಾರೆ ಬಿಗ್ ಆಫರ್! ಏನದು ನೋಡಿ...
