1987ರ ಮನಮೆಚ್ಚಿದ ಹುಡುಗಿ ಚಿತ್ರದ 'ಗೌರಮ್ಮಾ ನಿನ್ನ ಗಂಡ ಯಾರಮ್ಮಾ' ಹಾಡಿನ ಚಿತ್ರೀಕರಣದ ಬಗ್ಗೆ ಸುಧಾರಾಣಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮೇಲುಕೋಟೆಯಲ್ಲಿ ಮೊದಲಿಗೆ ಚಿತ್ರೀಕರಣ ನಡೆದರೂ, ಡಾ. ರಾಜ್‌ಕುಮಾರ್‌ಗೆ ಇಷ್ಟವಾಗದ ಕಾರಣ ಮದ್ರಾಸ್‌ನಲ್ಲಿ ಸೆಟ್ ಹಾಕಿ ಮರುಚಿತ್ರೀಕರಣ ಮಾಡಲಾಯಿತು. ಈ ಹಾಡಿನಿಂದಾಗಿ ಸುಧಾರಾಣಿಗೆ ಪಾರ್ವತಿ ಪಾತ್ರಗಳು ಹೆಚ್ಚಾಗಿ ಸಿಕ್ಕವು.

1987ರಲ್ಲಿ ತೆರೆ ಕಂಡ ಮನಮೆಚ್ಚಿದ ಹುಡುಗಿ ಚಿತ್ರ ಸೂಪರ್​ ಹಿಟ್​ ಆಗಿತ್ತು. ಶಿವರಾಜ್​ಕುಮಾರ್​ ಮತ್ತು ಸುಧಾರಾಣಿ ಅಭಿನಯದ ಚಿತ್ರವದು. ಅದರಲ್ಲಿನ ಗೌರಮ್ಮಾ ನಿನ್ನ ಗಂಡ ಯಾರಮ್ಮಾ ಹಾಡು ಇಂದಿಗೂ ಜನಜನಿತ. ಈ ಹಾಡಿನಲ್ಲಿ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿಯ ಶಿವ-ಪಾರ್ವತಿಯ ಗೆಟಪ್​ ನೋಡಬಹುದು. ಆದರೆ ಈ ಹಾಡಿನ ಶೂಟಿಂಗ್​ನ ರೋಚಕ ಪಯಣವನ್ನು ತೆರೆದಿಟ್ಟಿದ್ದಾರೆ ನಟಿ ಸುಧಾರಾಣಿ. ನಿನ್ನೆ ಶಿವರಾತ್ರಿಯ ದಿನದಂದು ತಮ್ಮ ಈ ಹಾಡಿನ ಬಗ್ಗೆ ನೆನಪು ಮಾಡಿಕೊಂಡು ಮೆಲುಕು ಹಾಕಿದ್ದಾರೆ ನಟಿ. ಈ ಚಿತ್ರದ ಫೋಟೋ ಒಂದು ಅಂದಿನ ದಿನಪತ್ರಿಕೆಯಲ್ಲಿ ಪಬ್ಲಿಷ್​ ಆಗಿತ್ತು. ಅದನ್ನು ತಮ್ಮ ಹಿರಿಯ ಅಣ್ಣ ಕಟ್​ ಮಾಡಿ ಇಟ್ಟುಕೊಂಡಿದ್ದನ್ನು ಜೋಪಾನ ಮಾಡಿ ಇಟ್ಟುಕೊಂಡಿರುವ ಸುಧಾರಾಣಿ ಅದನ್ನು ತೋರಿಸುತ್ತಾ ಈ ಹಾಡಿನ ಶೂಟಿಂಗ್​ ಬಗ್ಗೆ ನೆನಪಿಸಿಕೊಂಡಿದ್ದಾರೆ.

ಈ ಹಾಡಿನ ಶೂಟಿಂಗ್​ ಹಿಂದೆ ದೊಡ್ಡ ಕಥೆಯಿದೆ. ಬಹುಶಃ ಯಾರೂ ಇದನ್ನು ಎಲ್ಲಿಯೂ ಹೇಳಿಲ್ಲ ಅನಿಸತ್ತೆ ಎನ್ನುತ್ತಲೇ ಅದನ್ನು ನೆನಪಿಸಿಕೊಂಡಿದ್ದಾರೆ. ಆಗೆಲ್ಲಾ ಹೆಚ್ಚಾಗಿ ಇನ್​ಡೋರ್​ ಶೂಟಿಂಗ್​ಗಳೇ ಇರುತ್ತಿದ್ದವು. ಬೇಕಾದ ದೃಶ್ಯಗಳನ್ನು ಸ್ಟುಡಿಯೋದಲ್ಲಿಯೇ ಸೆಟ್​ಅಪ್​ ಮಾಡಲಾಗುತ್ತಿತ್ತು. ಆದರೆ ಗೌರಮ್ಮಾ ನಿನ್ನ ಗಂಡ ಯಾರಮ್ಮಾ ಹಾಡಿಗೆ ಮೇಲುಕೋಟೆಯಲ್ಲಿ ಔಟ್​ಡೋರ್​ ಶೂಟಿಂಗ್​ ಮಾಡಲಾಗಿತ್ತು. ಅಲ್ಲಿ ನಾಯಕ ಮತ್ತು ನಾಯಕಿ ಶಿವ-ಪಾರ್ವತಿ ಡ್ರೆಸ್​ ಮಾಡಲಾಗಿತ್ತು. ಕೆಲ ದಿನಗಳು ಅಲ್ಲಿಯೇ ಎಲ್ಲಾ ಶೂಟಿಂಗ್​ ಆದ ಮೇಲೆ ಪ್ಯಾಕಪ್​ ಮಾಡಿಕೊಂಡು ಬೆಂಗಳೂರಿಗೆ ವಾಪಸ್​ ಆದಾಗ ಡಾ.ರಾಜ್​ಕುಮಾರ್​ ಅದನ್ನು ನೋಡಿದರಂತೆ. ಆದರೆ ಶಿವರಾಜ್​ ಕುಮಾರ್​ ಮತ್ತು ಪಾರ್ವತಮ್ಮ ಅವರಿಗೆ ಶಿವರಾಜ್​ ಕುಮಾರ್​ ಮಾಡಿದ್ದು ಇಷ್ಟ ಆಗಿಲ್ಲ ಎಂದ ಸುಧಾರಾಣಿ ಇದಕ್ಕೆ ತಮಗೆ ಕಾರಣ ನೆನಪಿಲ್ಲ. ಆದರೆ ಹೊಸದಾಗಿ ಶೂಟಿಂಗ್​ ಮಾಡುವಂತೆ ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ನೇರಪ್ರಸಾರದಲ್ಲಿ ಬಂದ ಸುಧಾರಾಣಿ ವೀಕ್ಷಕರಿಗೆ ಕೊಟ್ಟಿದ್ದಾರೆ ಬಿಗ್‌ ಆಫರ್! ಏನದು ನೋಡಿ...

 ಆದರೆ ಔಟ್​ಡೋರ್​ನಲ್ಲಿ ಅದು ಸಾಧ್ಯವಾಗಿರಲಿಲ್ಲ. ಆಗೆಲ್ಲಾ ಸ್ಟುಡಿಯೋ ಶೂಟಿಂಗ್​ ಎಂದರೆ ಆಗಿನ ಮದ್ರಾನ್​ (ಚೆನ್ನೈ) ಸ್ಟುಡಿಯೋಕ್ಕೇ ಹೋಗುವ ಅನಿವಾರ್ಯತೆ ಇತ್ತು. ಅದರಂತೆಯೇ ಗೌರಮ್ಮಾ... ಹಾಡಿಗೂ ಅಲ್ಲೇ ಸೆಟ್​ ರೆಡಿ ಮಾಡಲಾಯಿತು ಎಂದಿದ್ದಾರೆ ಸುಧಾರಾಣಿ. ಮೊದಲು ತಾವು ಕೆಂಪು ಡ್ರೆಸ್​ ಹಾಕಿಕೊಂಡಿದ್ವಿ. ಆದರೆ ನಂತರ ಡ್ರೆಸ್​ ಕಲರ್​ ಕೂಡ ಚೇಂಜ್​ ಮಾಡಲಾಯಿತು. ಸಂಪೂರ್ಣ ಬದಲಾವಣೆ ಮಾಡಿದ ಮೇಲೆ ರೀಶೂಟ್​ ಮಾಡಲಾಯಿತು. ಈಗ ಚಿತ್ರದಲ್ಲಿ ನೀವೇನು ನೋಡಿದ್ದೀರೋ ಅದು ಬದಲಾದ ಮೇಲೆ ಮಾಡಿದ ಶೂಟಿಂಗ್​ ಎಂದಿದ್ದಾರೆ. ಆದರೆ ಒರಿಜಿನಲ್​ ಶೂಟಿಂಗ್ ಅಂದರೆ ಮೇಲುಕೋಟೆಯಲ್ಲಿ ಮಾಡಿದ ಶೂಟಿಂಗ್​ನ ಫೋಟೋ ಇನ್ನೂ ತಮ್ಮ ಬಳಿ ಜೋಪಾನ ಆಗಿ ಇರುವುದನ್ನು ತೋರಿಸಿದ್ದಾರೆ.

ಇದು ಸಿನಿಮಾದಲ್ಲಿ ಮೊದಲ ಬಾರಿಗೆ ಪಾರ್ವತಿ ರೂಪದಲ್ಲಿ ಕಾಣಿಸಿಕೊಂಡಿದ್ದು ಎಂದಿರುವ ಸುಧಾರಾಣಿ, ಅಲ್ಲಿಂದ ಹಲವಾರು ಚಿತ್ರಗಳಲ್ಲಿ ಪಾರ್ವತಿ ರೋಲ್​ ಸಿಕ್ಕಿತು. ಆದ್ದರಿಂದ ನನಗೆ ಇಂದಿಗೂ ಕೆಲವರು ಪರ್ಮನೆಂಟ್​ ಪಾರ್ವತಿ ಅಂತನೇ ಹೇಳ್ತಾರೆ. ಆಗ ತುಂಬಾ ಸಣ್ಣಗಿದ್ದೆ. ಆನಂದ್​, ವಿಜಯೋತ್ಸವ ಚಿತ್ರದ ಬಳಿಕ ಏಕಾಏಕಿ ಎತ್ತರ ಬೆಳೆದುಬಿಟ್ಟು ಕಡ್ಡಿಯಂತಾಗಿದ್ದೆ. ಅದಕ್ಕೇ ನಮ್ಮ ಮನೆಯವರೆಲ್ಲರೂ ಆಗ ಎನಿಮಿಕ್​ ಪಾರ್ವತಿ ಎಂದೇ ಕರೆಯುತ್ತಿದ್ದರು. ಒಟ್ಟಿನಲ್ಲಿ ಪಾರ್ವತಿ ಎನ್ನುವ ಹೆಸರು ನನಗೆ ಬಂದುಬಿಟ್ಟಿತ್ತು ಎಂದು ನೆನಪಿಸಿಕೊಂಡಿದ್ದಾರೆ. 

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

YouTube video player