ನಾರಾಯಣ ಮೂರ್ತಿಯನ್ನು ಮೊದಲು 'ಯಾರಿದು ಅಂತಾರಾಷ್ಟ್ರೀಯ ಬಸ್ ಕಂಡ್ಟರ್' ಅಂದ್ಕೊಂಡಿದ್ರಂತೆ ಸುಧಾ ಮೂರ್ತಿ

ಸುಧಾ ಮೂರ್ತಿ ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಪಿಲ್ ಶರ್ಮ ಶೋನಲ್ಲಿ ಕಾಣಿಸಿಕೊಂಡಿದ್ದರು. 

Sudha Murty recalls first meeting with Narayana Murthy at The Kapil Sharma Show sgk

ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾ ನಾರಾಯಾಣ ಮೂರ್ತಿ ಭಾಗಿಯಾಗಿದ್ದರು. ಸುಧಾ ಮೂರ್ತಿ ಜೊತೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್, ಖ್ಯಾತ ನಿರ್ಮಾಪಕಿ ಗುನೀತ್ ಮೊಂಗಾ ಕೂಡ ಭಾಗಿಯಾಗಿದ್ದಾರೆ. ಸದ್ಯ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಪತಿ ನಾರಾಯಣ ಮೂರ್ತಿ ಅವರನ್ನು ಭೇಟಿಯಾಗಿದ ಇಂಟ್ರಸ್ಟಿಂಗ್ ವಿಚಾರ ಸುಧಾ ಮೂರ್ತಿ ಬಹಿರಂಗ ಪಡಿಸಿದ್ದಾರೆ. ಸುಧಾ ಮೂರ್ತಿ ಅವರ ಮಾತು ಕೇಳಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಜೋರಾಗಿ ನಕ್ಕಿದ್ದಾರೆ. 

ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾ ಮೂರ್ತಿ, 'ಪ್ರಸನ್ನ ಅಂತ ನನ್ನ ಸ್ನೇಹಿತ ಹಾಗೂ ಸಹೋದ್ಯೋಗಿ ಇದ್ದ. ಅವನು ಪ್ರತಿದಿನ ಪುಸ್ತಕ ತಂದುಕೊಡುತ್ತಿದ್ದ. ಅದರಲ್ಲಿ ನಾರಾಯಾಣ ಮೂರ್ತಿ ಹೆಸರು ಬರೆದು ಪುಸ್ತಕ ತಂದುಕೊಡುತ್ತಿದ್ದ. ನಾರಾಯಾಣ ಮೂರ್ತಿ ಹೆಸರು ಜೊತೆಗೆ ಅನೇಕ ಸ್ಥಳಗಳ ಹೆಸರು ಕೂಡ ಇರುತ್ತಿತ್ತು. ಹಾಗಾಗಿ ನಾನು ಯಾರಿದು, ಈ ವ್ಯಕ್ತಿ ಅಂತಾರಾಷ್ಟ್ರೀಯ ಬಸ್ ಕಂಡಕ್ಟರ್ ಅಂತ ಕೇಳಿದ್ದೆ' ಎಂದು ಹೇಳಿದರು. ಎಲ್ಲರೂ ಜೋರಾಗಿ ನಕ್ಕಿದರು.  ಬಳಿಕ ಮಾತು ಮುಂದುವರೆಸಿದ ಸುಧಾ ಮೂರ್ತಿ, ಮೊದಲು ಭೇಟಿ ಮಾಡಬೇಕು ಅಂದುಕೊಂಡಾಗ 'ಸಿನಿಮಾ ಹೀರೋ ತರ, ಹ್ಯಾಂಡ್ಸಮ್ ಮತ್ತು ಡ್ಯಾಶಿಂಗ್ ಆಗಿ ಇದ್ದಾರಾ ಅಂತ ಅಂದುಕೊಂಡೆ. ಆದರೆ ಬಾಗಿಲು ತೆರೆದು ಒಳ ಬಂದಾಗ ಯಾರಿದು ಪುಟ್ಟ ಮಗು ಅಂತ ಅಂದುಕೊಂಡೆ' ಎಂದು ಪತಿಯನ್ನು  ಮೊದಲ ಬಾರಿಗೆ ಭೇಟಿಯಾದ ಬಗ್ಗೆ ವಿವರಿಸಿದರು. 

ರಸ್ತೆ ಮೇಲೆ ಪೊಂಗಲ್​ ಮಾಡಿದ ಸುಧಾಮೂರ್ತಿ.. ಸರಳತೆಯೇ ಶಕ್ತಿ, ಸೇವೆಯೇ ಭಕ್ತಿ

ಸದ್ಯ ರಿಲೀಸ್ ಆಗಿರುವ ಪ್ರೋಮೋಗೆ ತರಹೇವಾರಿ ಕಾಮೆಂಟ್‌ಗಳು ಹರಿದು ಬಂದಿದೆ. ಈ ಸಂಚಿಕೆಯನ್ನು ಮಿಸ್ ಮಾಡಿಕೊಳ್ಳುವುದೇ ಇಲ್ಲ ನೋಡಲೇ ಬೇಕು ಎಂದು ಅನೇಕರು ಹೇಳುತ್ತಿದ್ದಾರೆ. ಇನ್ನು ಕೆಲವರು ನಗುವಿನ ಇಮೋಜಿ ಹಾಕುತ್ತಿದ್ದಾರೆ. ಸುಧಾ ಮೂರ್ತಿ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ಎಂದು ಹೇಳುತ್ತಿದ್ದಾರೆ. ಈ ಸಂಚಿಕೆಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಶಿಷ್ಟಾಚಾರ, ಭದ್ರತೆ ಬದಿಗೊತ್ತಿ ಕುಟುಂಬದ ಜೊತೆ ಕುಳಿತಿದ್ದ ಅಕ್ಷತಾ ಮೂರ್ತಿ, ಆಮೇಲೆ ಆಗಿದ್ದೇನು?

ಸುಧಾ ಮೂರ್ತಿ ಖ್ಯಾತ ಬರಹಗಾರ್ತಿ ಹಾಗೂ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಸಾಮಾಜಿಕ ಕಾರ್ಯಕ್ಕೆ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ. ಇನ್ನೂ ಸುಧಾ ಮೂರ್ತಿ ಜೊತೆ ಕಾಣಿಸಿಕೊಂಡ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಕೂಡ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದರು. ಗುನೀತ್ ಮೊಂಗಾ ಈ ಬಾರಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂವರು ಸಾಧರು ಈ ಬಾರಿ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.  

Latest Videos
Follow Us:
Download App:
  • android
  • ios