Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತುಗೆ 300ರ ಸಂಭ್ರಮ: ತುಳಸಿ ಮಾಡಿದಳು ಆಣೆ- ಇಂದು ರಿವೀಲ್​ ಆಗ್ತಿದೆ ಸತ್ಯ!

ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ 300ರ ಸಂಭ್ರಮ: ಈ ಸಂದರ್ಭದಲ್ಲಿ ಅಭಿಗೆ ತುಳಸಿ ಆಣೆಯೊಂದನ್ನು ಮಾಡಿದ್ದೂ ಅಲ್ಲದೇ, ಸತ್ಯವೊಂದು ರಿವೀಲ್​ ಆಗಲಿದೆ. 
 

Sreerastu Shubhamastu Serial Celebrating 300 day episode Tulsi reveals truth suc
Author
First Published Dec 21, 2023, 3:30 PM IST

ಮಾಧವ ಮತ್ತು ತುಳಸಿ ಎಂದಾಕ್ಷಣ ಧಾರಾವಾಹಿ ಪ್ರಿಯರಿಗೆ ಕಣ್ಣ ಮುಂದೆ ಬರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು- ಶುಭಮಸ್ತು ಧಾರಾವಾಹಿ.  ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. ಆದರೂ ಎಲ್ಲವನ್ನೂ ನುಂಗಿ ಮನೆ ಮನೆಯಿಂದ ಸದಾ ತಾತ್ಸಾರಕ್ಕೆ ಒಳಗಾಗುತ್ತಿರುವ ತುಳಸಿ ಮತ್ತು ಹೆತ್ತ ಮಕ್ಕಳೇ ದ್ವೇಷದಿಂದ ಕಾಣುವ ಅಪ್ಪ ಮಾಧವ್​ ಜೋಡಿ ಮಾತ್ರ ಸೂಪರ್​ ಡೂಪರ್​ ಆಗಿದೆ. ತುಳಸಿ ಮತ್ತು ಮಾಧವ್​ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮದುವೆಯಾದರೂ ಸ್ನೇಹವನ್ನು ಪಾಲಿಸುವ ಜೋಡಿ ಇವರದ್ದು. ಅತ್ತ ತುಳಸಿಯನ್ನು ಕಂಡರೆ ಗಂಡನ ಮನೆಯಲ್ಲಿ ಹೆಚ್ಚಿನವರಿಗೆ ಆಗಿ ಬರುವುದಿಲ್ಲವಾದರೆ, ಖುದ್ದು ಮಾಧವ ಅವರನ್ನು ಕಂಡರೂ ಎಲ್ಲರಿಗೂ ಅಷ್ಟಕಷ್ಟೇ. ಇದೀಗ ಈ ಗಂಡ-ಹೆಂಡತಿಯೇ ಪರಸ್ಪರ ಆಸೆಯಾಗಿದ್ದಾರೆ.


ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪಾತ್ರ ಸೊಸೆಯದ್ದು. ಸಿರಿ ಪಾತ್ರದ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿರುವ ಈ ಸೊಸೆಯ ರಿಯಲ್​ ಹೆಸರು ಚಂದನಾ ರಾಘವೇಂದ್ರ. ತನ್ನ ಅತ್ತೆ ತುಳಸಿ (ಸುಧಾರಾಣಿ) ಮತ್ತೊಂದು ಮದುವೆ ಮಾಡಿಸಿದ್ದಾಳೆ ಈಕೆ. ಸ್ನೇಹಿತರಂತೆ ಇದ್ದ ತುಳಸಿ ಮತ್ತು ಮಾಧವ (ಅಜಿತ್​ ಹಂದೆ) ಈಗ ಪತಿ-ಪತ್ನಿಯಾಗಿದ್ದಾರೆ. ಆದರೆ ಗಂಡನ ಮನೆಯಲ್ಲಿ ತುಳಸಿಯ ಕಂಡರೆ ಮಾಧವನ ಮಕ್ಕಳಿಗೆ ಆಗಿ ಬರುವುದಿಲ್ಲ. ಅದರಂತೆ ಧಾರಾವಾಹಿ ಎಂದ ಮೇಲೆ  ಲೇಡಿ ವಿಲನ್​ ಇರಲೇಬೇಕು. ಈ ಧಾರಾವಾಹಿಯ ವಿಲನ್​ ಆಗಿರುವ ಶಾರ್ವರಿ. ಅಂದಹಾಗೆ ಇವರ ರಿಯಲ್​ ಲೈಫ್​ ಹೆಸರು ನೇತ್ರಾ ಜಾಧವ್. ಸೊಸೆಯೊಬ್ಬಳು ತನ್ನ ವಿಧವೆ ಅತ್ತೆಗೆ ಮರು ಮದುವೆ ಮಾಡಿಸಿಬಿಟ್ಟರೂ ಗಂಡನ ಅಣ್ಣನ ಪತ್ನಿ ಶಾರ್ವರಿ ಈಕೆಗೆ ತೊಂದರೆ ಕೊಡುತ್ತಾಳೆ.  

ಬಿಗ್​ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

2002ರ ಅಕ್ಟೋಬರ್​ 31ರಿಂದ ಶುರುವಾಗಿರುವ ಈ ಧಾರಾವಾಹಿ ಇದೀಗ 300ನೇ ಕಂತು ಪೂರೈಸುತ್ತಿದೆ. 300ನೇ ಕಂತು ವಿಶೇಷವಾಗಿ ಮೂಡಿ ಬರಲಿದೆ. ಅಭಿಯ ಮದುವೆಯ ದಿನವೇ ತುಳಸಿ ಮತ್ತು ಮಾಧವನ ಮದುವೆಯಾದ್ದರಿಂದ ಅಭಿ ಮದುವೆ ನಿಂತುಹೋಗುತ್ತದೆ. ಅಭಿ ಪ್ರೀತಿಸಿದ ಹುಡುಗಿ ದೀಪಿಕಾಳ ಅಪ್ಪನಿಗೆ ಸಿಟ್ಟು ಬಂದು ಮದ್ವೆ ನಿಲ್ಲಿಸುತ್ತಾನೆ. ಇದೇ ಕಾರಣಕ್ಕೆ ಅಭಿಗೆ ತುಳಸಿಯ ಮೇಲೆ ಇನ್ನಿಲ್ಲದ ಸಿಟ್ಟು. ಸಾಧ್ಯವಾದಷ್ಟು ಮಟ್ಟಿಗೆ ಆಕೆಯನ್ನು ಇನ್​ಸಲ್ಟ್​ ಮಾಡುತ್ತಿರುತ್ತಾನೆ. ಅಭಿಯ ಲವರ್​ ಮನೆಗೆ ಹೋಗಿ ತುಳಸಿ ಕಾಡಿ ಬೇಡಿದರೂ ಆಕೆಯನ್ನು ಹೊರಗೆ ತಳ್ಳಲಾಗುತ್ತದೆ. ಇದೇ ವೇಳೆ ದೀಪಿಕಾಳ ಅಪ್ಪ ಅವಳ ಮೊಬೈಲ್​ನಿಂದ ನಾನು ಬೇರೆ ಹುಡುಗನನ್ನು ಮದ್ವೆಯಾಗುತ್ತಿದ್ದೇನೆ ಎನ್ನುವಂತೆ ಅಭಿಗೆ ಮಸೇಜ್​ ಮಾಡುತ್ತಾನೆ. ಇದನ್ನು ನೋಡಿ ತುಳಸಿ ಮೇಲೆ ಸಿಟ್ಟಿಗೆದ್ದ ಅಭಿ, ಎಲ್ಲರನ್ನೂ ಬೈಯುತ್ತಾನೆ. ಆಗ ತುಳಸಿ ನನ್ನ ಜೀವ ಒತ್ತೆ ಇಟ್ಟಾದ್ರೂ ಮಾತು ಉಳಿಸಿಕೊಡ್ತೇನೆ ಎಂದು ತುಳಸಿ ಮಾತು ಕೊಡುತ್ತಾಳೆ. 

ಇದನ್ನು ನೋಡುತ್ತಿದ್ದ ಶಾರ್ವರಿಗೆ ಶಾಕ್​ ಆಗುತ್ತದೆ. ಏನಾದರೂ ಮಾಡಿ ಪ್ಲ್ಯಾನ್​ ಫ್ಲಾಪ್​  ಆಗುವ ಕುತಂತ್ರ ರೂಪಿಸುತ್ತಾಳೆ, ಮುಂದೇನಾಗುತ್ತದೆ ಎಂದು ಕಾದು ನೋಡಬೇಕು. ಒಟ್ಟಿನಲ್ಲಿ ದೀಪಿಕಾ ತನ್ನನ್ನು ಇನ್ನೂ ಮರೆತಿಲ್ಲ ಎನ್ನುವ ಸತ್ಯ ಅಭಿಗೆ ಆಗಿದೆ. ಮುಂದೆ ಆಗುವುದು ಕುತೂಹಲವಾಗಿದೆ. 

ಸೀಗಡಿ ಬೆಳ್ಳುಳ್ಳಿ ಫ್ರೈ ಮಾಡಿದ ಗಟ್ಟಿಮೇಳದ ವೈದೇಹಿ-ಸೂರಿ; 'ಉಪಾಧ್ಯಕ್ಷ' ಚಿಕ್ಕಣ್ಣ- ಮಲೈಕಾರಿಂದ ರುಚಿರುಚಿ ಅಡುಗೆ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios