Spandana Somanna: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಚೆಲುವೆ ಸ್ಪಂದನಾ ಸೋಮಣ್ಣ ಕೊನೆಗೂ ತಮ್ಮ ಪೋಸ್ಟ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ತಾವು ಮದುವೆಯಾಗುತ್ತಿರುವ ಹುಡುಗನ ಕುರಿತು, ಮದುವೆಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ರಿಪೋರ್ಟರ್ ಕೇಳಿದ ಪ್ರಶ್ನೆಗೆ ನಟಿ ನಾಚಿ ನೀರಾಗುತ್ತಾ ಏನು ಹೇಳಿದ್ರು ನೋಡಿ.

ಸ್ಪಂದನಾ ಸೋಮಣ್ಣ ಕೈ ಹಿಡಿದ ಹುಡುಗ ಯಾರು?

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಚೆಲುವೆ ಸ್ಪಂದನಾ ಸೋಮಣ್ಣ ಇತ್ತೀಚೆಗೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪ್ಯಾರೀಸ್ ನ ಐಫೆಲ್ ಟವರ್ ಹಿನ್ನೆಲೆಯಲ್ಲಿ, ಹುಡುಗನೊಬ್ಬನ ಕೈಹಿಡಿದು ಸಂತೋಷದಿಂದ ನಡೆಯುತ್ತಿರುವ ಫೋಟೊ ಶೇರ್ ಮಾಡಿದ್ದು, ಅದರ ಜೊತೆಗೆ Plot Twist : Paris was not the Main Character! ಎಂದು ಬರೆದುಕೊಂಡಿದ್ದರು. ಈ ಫೋಟೊ ಶೇರ್ ಮಾಡುತ್ತಿದ್ದಂತೆ ವೈರಲ್ ಆಗಿತ್ತು. ನಟಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದ್ದು, ಹುಡುಗ ಯಾರು ಎಂದು ಕೇಳುತ್ತಿದ್ದರು. ಈ ಬಗ್ಗೆ ನಟಿ ಮೊದಲ ಬಗ್ಗೆ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮೈಸೂರ್ ಸಿಲ್ಕ್ ಸೀರೆ ಎಕ್ಸ್’ಪೋ ಉದ್ಘಾಟಿಸಿದ ಸ್ಪಂದನಾ ಸೋಮಣ್ಣರಿಗೆ ರಿಪೋರ್ಟರ್, ಇನ್’ಸ್ಟಾಗ್ರಾಂ ಪೋಸ್ಟ್ ಬಗ್ಗೆ ಕೇಳಿದಾಗ, ನಟಿ ನಾಚಿ ನೀರಾಗಿದ್ದಾರೆ. ಆ ಫೋಟೊದಲ್ಲಿ ಇರುವವರು ಸೂರಜ್ ಸಿಂಗ್ ಎಂದು ಎಲ್ಲರೂ ಕೇಳುತ್ತಿದಾರೆ? ಅವರೇನಾ ಅದು ಎಂದು ಆಂಕರ್ ಕೇಳಿದಾಗ, ನಟಿ ಇಲ್ಲಪ್ಪಾ, ನಾನು ಸೂರಜ್ ಮಾತನಾಡದೆ ಎಷ್ಟೋ ಸಮಯ ಆಯ್ತು, ಇದು ಅವರಲ್ಲ ಎಂದಿದ್ದಾರೆ. ಹಾಗಿದ್ರೆ ಫೇಸ್ ಯಾವಾಗ ರಿವೀಲ್ ಮಾಡ್ತೀರಿ ಎಂದಾಗ, ಶೀಘ್ರದಲ್ಲಿ, ನಮ್ಮ ಕೆಲಸಕ್ಕೆ, ನಮಗೆ ಇಷ್ಟೊಂದು ಪ್ರೀತಿ ಕೊಟ್ಟು ಬೆಂಬಲಿಸುವ ನಮ್ಮ ಫಾಲೋವರ್ಸ್ ಗೆ ನಮ್ಮ ಪರ್ಸನಲ್ ಜೀವನದ ಮುಖ್ಯ ವಿಷಯವನ್ನು ತಿಳಿಸುವ ಆಸೆ, ಪ್ರೀತಿ ಎರಡೂ ನಮಗೂ ಇದೆ ಎಂದಿದ್ದಾರೆ. ಜೊತೆಗೆ ಪ್ಯಾರೀಸ್ ಟ್ರಿಪ್ ತುಂಬಾ ಚೆನ್ನಾಗಿತ್ತು, ಆದಷ್ಟು ಬೇಗ ಫೋಟೋಸ್ ಹಾಕುತ್ತೇನೆ ಎಂದು ಸಹ ಹೇಳಿದ್ದಾರೆ.

ಮದುವೆ ಫಿಕ್ಸ್ ಆಗಿದ್ಯಾ?

ಸ್ಪಂದನಾ ಸೋಮಣ್ಣ ಮದುವೆ ಫಿಕ್ಸ್ ಆಗಿದ್ಯಾ ಎನ್ನುವ ಪ್ರಶ್ನೆಗೆ ನಗುತ್ತಾ ನಟಿ, ಅದನ್ನು ಆದಷ್ಟು ಬೇಗ ಹೇಳುತ್ತೇನೆ ಎಂದಿದ್ದಾರೆ. ಜೊತೆಗೆ ಅವರು ನನ್ನ ಕರಿಯರ್ ಲೈಫ್ ಗೆ ತುಂಬಾನೆ ಸಪೋರ್ಟ್ ಮಾಡುತ್ತಾರೆ ಎಂದು ಸಹ ಹೇಳಿದ್ದಾರೆ. ಇನ್ನು ಕರಿಯರ್ ವಿಷಯದ ಬಗ್ಗೆ ಕೇಳಿದಾಗ, ಬಿಗ್ ಬಾಸ್ ನಿಂದ ಬಂದಮೇಲೆ ಜನರ ಪ್ರೀತಿ ಹೆಚ್ಚಾಗಿಯೇ ಸಿಕ್ಕಿದೆ. ಸಿನಿಮಾ, ಸೀರಿಯಲ್ ಅವಕಾಶಗಳು ಬರ್ತಾ ಇದೆ, ಆದ ನನ್ನ ಲೈಫಲ್ಲಿ ತುಂಬಾ ಬೇರೆ ವಿಷಯಗಳು ನಡೆಯುತ್ತಿರುವುದರಿಂದ ಇಲ್ಲಿವರೆಗೂ ಯಾವುದನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ ಸ್ಪಂದನಾ.