Asianet Suvarna News Asianet Suvarna News

ಪೂನಂ ಪಾಂಡೆ ಹೆಸರಲ್ಲಿ ವಂಚನೆಗೊಳಗಾದ್ರಾ ವಿಕಿಪೀಡಿಯಾ ಖ್ಯಾತಿಯ ವಿಕಾಸ್? ಏನಿದರ ಹಿಂದಿನ ಕಥೆ..

ಮೊನ್ನೆ ಮೊನ್ನೆ ತಾನೇ ಸತ್ತು ಹೋಗಿದ್ದಾಳೆ ಎಂದು ಸುದ್ದಿಯಾಗಿದ್ದ ಪೂನಂ ಪಾಂಡೆ ಹೆಸರಲ್ಲಿ ವಿಕಿಪೀಡಿಯಾ ಖ್ಯಾತಿಯ ವಿಕಾಸ್‌ಗೆ ಧೋಕಾ ಆಯ್ತಾ? ಏನಿದರ ಹಿಂದಿನ ಕಥೆ?
 

social media influencer Vikipedias new reels on poonam pandey whose death news spread bni
Author
First Published Feb 5, 2024, 3:01 PM IST

'ನಾನು ನಂದಿನಿ, ಬೆಂಗಳೂರಿಗ್‌ ಬಂದೀನಿ..' ಹಳ್ಳಿ ಮುದುಕರಿಂದ ಹಿಡಿದು ಐಟಿ ಹುಡುಗರ ತನಕ ಬಹುಶಃ ಈ ಹಾಡು ಕೇಳದ ಕಿವಿಗಳಿಲ್ಲ ಅಂತಲೇ ಹೇಳಬಹುದು. ಕಳೆದ ವರ್ಷ 'ನಾನು ನಂದಿನಿ' ಹಾಡು ಸೋಷಿಯಲ್ ಮೀಡಿಯಾ, ಯೂಟ್ಯೂಬ್‌ಗಳಲ್ಲಿ ಮಾಡಿರೋ ಎಫೆಕ್ಟ್ ಸಣ್ಣದಲ್ಲ. ಇದರಿಂದ ವಿಕಿಪೀಡಿಯಾ ಅನ್ನೋ ಎಕ್ಸ್‌ ಐಟಿ ಹುಡುಗ ಮತ್ತವನ ಗ್ಯಾಂಗ್‌ನ ಹೆಸರು ಕನ್ನಡಿಗರು, ಬೇರೆ ಭಾಷೆಯವರ ಮನಸ್ಸಲ್ಲಿ ಅಚ್ಚೊತ್ತಿಹೋಯ್ತು. ಇನ್‌ಸ್ಟಾಗ್ರಾಂ, ಯೂಟ್ಯೂಬ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಕಿಪಿಡೀಯಾ ಅನ್ನುವ ಪೇಜ್‌ ಅನ್ನು ನೋಡಿಲ್ಲದೇ ಇರಲು ಸಾಧ್ಯವಿಲ್ಲ ಅನ್ನೋ ಲೆವೆಲ್ ಫೇಮಸ್‌ ಆದ್ರು ವಿಕಿ ಪೀಡಿಯಾ ಅರ್ಥಾತ್ ವಿಕಾಸ್. ಸದ್ಯ ಇವರು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ಪೇಜ್‌ನಲ್ಲಿ ಕಂಟೆಂಟ್‌ ಬಹಳ ಭಿನ್ನವಾಗಿರುತ್ತದೆ. ರಾಜಕೀಯ, ಫ್ರೆಂಡ್‌ಶಿಪ್‌, ಟ್ರೆಂಡಿಂಗ್‌, ಸೊಸೈಟಿ, ಕ್ರೈಂ ಸೇರಿದಂತೆ ಎಲ್ಲಾ ಬಗೆಯ ಕಂಟೆಂಟ್‌ ಇರುತ್ತದೆ.

ಇತ್ತೀಚೆಗೆ ಈ ವಿಕಿಪೀಡಿಯಾದ ವಿಕಾಸ್ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ರು. ಬ್ಯಾಚುಲರ್ ಪಾರ್ಟಿ ಮೂವಿಯಲ್ಲಿ ಟಿವಿ ಸೇಲ್ಸ್ ಹುಡುಗನಾಗಿ ತಮ್ಮದೇ ಸ್ಟೈಲಿನಲ್ಲಿ ಜೋಕ್ ಹಾರಿಸಿ ಕಚಗುಳಿ ಇಟ್ಟರು. ಈಗ ವಿಕಿಪೀಡಿಯಾದ ವಿಕಾಸ್ ಹೆಸರು ಬೇರೆ ಕಾರಣಕ್ಕೆ ಸುದ್ದಿ ಆಗ್ತಿದೆ. ಯೆಸ್, ಮೊನ್ನೆ ಮೊನ್ನೆಯಷ್ಟೇ ತಾನು ಸುತ್ತುಹೋಗಿದ್ದೀನಿ ಅಂತ ತಾನೇ ತಪ್ಪು ಸುದ್ದಿಕೊಟ್ಟು ನ್ಯೂಸ್ ಬಾಂಬ್ ಆಗಿದ್ದ ಸೆಕ್ಸಿ ಬಾಂಬ್ ಪೂನಂ ಪಾಂಡೆ ಹೆಸರಲ್ಲಿ ಇವ್ರಿಗೆ ಧೋಕಾ ಆಗಿದೆ. ಅಷ್ಟಕ್ಕೂ ಈ ಐಟಿ ಹುಡುಗರ ಗ್ಯಾಂಗ್‌ಗೆ ಆಗಿದ್ದೇನೆ ಅಂದರೆ ಅದೊಂದು ಇಂಟರೆಸ್ಟಿಂಗ್ ಸ್ಟೋರಿ.

ಡ್ರೋನ್​ ಪ್ರತಾಪ್​ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?

ಒಂದಿನ ವಿಕಾಸ್ ಆಫೀಸಲ್ಲಿರುವಾಗ ಅನ್‌ನೋನ್‌ ನಂಬರಿಂದ ಕಾಲ್ (call) ಬರುತ್ತೆ. ಇನ್ನೇನು ಕೆಲವೇ ನಿಮಿಷದಲ್ಲಿ ನಿಮ್ಮ ಅಕೌಂಟ್, ಆನ್‌ಲೈನ್‌ ಟ್ರಾನ್ಸಾಕ್ಷನ್ ಎಲ್ಲ ಬ್ಲಾಕ್ ಆಗ್ತಿದೆ. ನೀವು ನಿಮ್ಮ ಬ್ಯಾಂಕ್ ಬ್ರಾಂಚ್‌ಗೆ ಹೋಗಿ ಬ್ಲಾಕ್ ಓಪನ್ ಮಾಡಿಸಿ ಅಂತ. ಬೆಳಗಾದ್ರೆ ಅರ್ಜೆಂಟ್ ಟ್ರಾನ್ಸಾಕ್ಷನ್‌ ಮಾಡಲೇಬೇಕಿದ್ದ ಅನಿವಾರ್ಯತೆಗೆ ಬಿದ್ದಿದ್ದ ವಿಕ್ಕಿಗೆ ಇದರಿಂದ ತಲೆಬಿಸಿಯಾಗುತ್ತೆ. 'ನಾಳೆ ಬೆಳಗ್ಗೆಯೇ ಒಂದಿಷ್ಟು ಟ್ರಾನ್ಸಾಕ್ಷನ್ಸ್ (transactions) ಆಗ್ಬೇಕಿತ್ತು. ಹೀಗೆ ಮಾಡೋದ್ರಿಂದ ನಂಗೆ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ' ಅಂತ ಆ ವ್ಯಕ್ತಿಗೆ ಹೇಳ್ತಾರೆ. ಆದರೆ ಆ ವ್ಯಕ್ತಿ, 'ಹೌದಾ, ಅದಕ್ಕೊಂದು ದಾರಿ ಇದೆ. ಆನ್‌ಲೈನಲ್ಲೇ ಈ ಸಮಸ್ಯೆ ಸರಿ ಮಾಡ್ತೀನಿ. ಒಂದು ಓಟಿಪಿ ಬರುತ್ತೆ ಅದನ್ನು ಹೇಳಿಬಿಡಿ' ಅಂತಾನೆ ಆ ವ್ಯಕ್ತಿ. ಓಟಿಪಿ ಅಂದಕೂಡಲೇ ಇದು ಫ್ರಾಡ್ ಕೇಸ್ (Fraud case) ಅನ್ನೋದು ತಿಳಿದುಬಿಡುತ್ತೆ.

'ಯಾವ್ ಕಾಲದಲ್ಲಿದ್ದೀರಿ ಸಾರ್. ನಂಗೆ ಮೋಸ ಮಾಡಲಿಕ್ಕೆ ನೋಡ್ತಿದ್ದೀರಾ' ಅಂತ ವಿಕಿಪೀಡಿಯಾ ಕಾಲ್ ಮಾಡಿದ ವ್ಯಕ್ತಿಗೆ ಕ್ಲಾಸ್ ತಗೊಳ್ತಾರೆ. ಆಗ ಆ ವ್ಯಕ್ತಿ ತಾನು ಇಂಥಾ ಕೆಲಸ ಮಾಡಬೇಕಾಗಿ ಬಂದ ಪರಿಸ್ಥಿತಿ ಬಗ್ಗೆ ವಿವರಿಸಿ ತನ್ನ ತಾಯಿಗೆ ಕ್ಯಾನ್ಸರ್ ಆಗಿದೆ. ಅದರ ಟ್ರೀಟ್‌ಮೆಂಟ್‌ಗೆ ಬಹಳ ಹಣ ಬೇಕು. ಹೀಗಾಗಿ ತಾನು ಹೀಗೆ ಮಾಡಬೇಕಾಗಿ ಬಂತು ಎಂದು ತನ್ನ ಕರುಣಾಜನಕ ಕಥೆ ಹೇಳ್ತಾನೆ.

ಬಿಕಿನಿ ಬ್ಯೂಟಿ ಸೋನು ಗೌಡ ಕಾರು ಡಿಕ್ಕಿ: ಡ್ರೈವಿಂಗ್ ಬರುತ್ತಾ ಅಂತಿದಾರೆ ಫ್ಯಾನ್ಸ್‌!

ಆತನ ನೋವು ಕಂಡು ಕರಗಿದ ವಿಕಿ ಅವರ ಅಕೌಂಟಿಗೆ ಒಂದಿಷ್ಟು ಹಣ ಟ್ರಾನ್ಸ್‌ಫರ್ ಮಾಡ್ತಾರೆ. ಆ ವ್ಯಕ್ತಿಗೆ ಇದನ್ನು ನೋಡಿ ಕಣ್ಣಲ್ಲಿ ನೀರೇ ಬರುತ್ತೆ. ಅಷ್ಟರಲ್ಲಿ ವಿಕಿಪೀಡಿಯಾಗೆ ಡೌಟ್ ಬಂದು, 'ಹೌದೂ, ನಿಮ್ಮಮ್ಮಂಗೆ ಯಾವ ಕ್ಯಾನ್ಸರ್?' ಅಂತ ಪ್ರಶ್ನೆ ಮಾಡ್ತಾರೆ. ಆಕಡೆ ವ್ಯಕ್ತಿ ಉತ್ತರ ಕೇಳಿ ವಿಕಿಪೀಡಿಯಾಗೆ ಮತ್ತೆ ಶಾಕ್. ಆತ ತನ್ನ ತಾಯಿಗೆ ಸರ್ವೈಕಲ್ ಕ್ಯಾನ್ಸರ್ (Cervical cancer) ಅಂದುಬಿಡ್ತಾನೆ. ಇದೆಲ್ಲೋ ಮಿಸ್ ಹೊಡೀತಿದೆಯಲ್ಲಾ ಅಂದುಕೊಂಡ ವಿಕ್ಕಿ, 'ನಿಮ್ ತಾಯಿ ಹೆಸರೇನು?' ಅಂತ ಕೇಳ್ತಾರೆ. ಆಗ ಆ ಕಡೆ ಇರೋ ವ್ಯಕ್ತಿ 'ಪೂನಂ ಪಾಂಡೆ' ಅಂದುಬಿಡೋದಾ!

ಅಲ್ಲಿಗೆ ವಿಕಿಪೀಡಿಯಾ ಮತ್ತೊಂದು ರೀಲ್ಸ್ ಕ್ಲಿಕ್ ಆಗೋ ಎಲ್ಲಾ ಚಾನ್ಸ್ ಕಾಣ್ತಿದೆ.

Follow Us:
Download App:
  • android
  • ios