ಬಿಕಿನಿ ಬ್ಯೂಟಿ ಸೋನು ಗೌಡ ಕಾರು ಡಿಕ್ಕಿ: ಡ್ರೈವಿಂಗ್ ಬರುತ್ತಾ ಅಂತಿದಾರೆ ಫ್ಯಾನ್ಸ್!
ಟಿಕ್ ಟಾಕ್, ಡಬ್‌ಸ್ಮ್ಯಾಶ್, ರೀಲ್ಸ್ ಮತ್ತು ಯುಟ್ಯೂಬ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಸೋನು ಗೌಡ ಅವರ ಕಾರು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ.
ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿದ್ದ ಸೋನು ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ತಾರೆ. ಆದರೆ ಇದೀಗ ಅವರ ಕಾರು ಅಪಾರ್ಟ್‌ಮೆಂಟ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ.
ಹೌದು! ಪಾರ್ಕಿಂಗ್‌ನಿಂದ ಕಾರು ತೆಗೆಯುವಾಗ ಪಿಲ್ಲರ್‌ಗೆ ಡಿಕ್ಕಿ ಹೊಡೆದು ವಾಹನ ನಜ್ಜುಗುಜ್ಜಾಗಿದೆ. ಆದರೆ ಕಾರನ್ನು ಸೋನು ಗೌಡ ಅವರೇ ಚಲಾಯಿಸಿದಾರ ಅಥವಾ ಬೇರೆ ಯಾರಾದರೂ ಚಲಾಯಿಸಿ ಡಿಕ್ಕಿ ಹೊಡೆದರಾ ಎಂಬ ಮಾಹಿತಿ ಸಿಕ್ಕಿಲ್ಲ.
ಸದ್ಯ ನಗರದ ಗೊಲ್ಲರ ಪಾಳ್ಯ ಹೊಸಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಕೆಎ 43 ಎನ್ 4757 ನಂಬರ್‌ನ ಬಲೆನೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಜೊತೆಗೆ ಕಾರು ಡಿಕ್ಕಿ ಹೊಡೆದ ಪಿಲ್ಲರ್ ಸಹ ಹಾನಿಯಾಗಿದೆ.
ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಇತ್ತೀಚೆಗೆ ಸೋನು ಗೌಡ ಬ್ಯಾಗ್ ಹಿಡಿದುಕೊಂಡು ಏರ್ಪೋರ್ಟ್ನಲ್ಲಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಜೊತೆಗೆ ನಾನು ಎಲ್ಲಿಗೆ ಹೋಗ್ತಿದ್ದೇನೆ ಎಂದು ಹೇಳಿ ಎಂದು ಸೋನು ಗೌಡ ಫೋಟೋಗಳನ್ನು ಶೇರ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ನಾನಾ ಕಮೆಂಟ್ ಮಾಡಿದ್ದರು.
ಮಾಲ್ಡೀವ್ಸ್ಗೆ ಹೋಗಿ ಮಸ್ತಿ ಮಾಡಿದ್ದ ನಟಿ ಸೋನು ಗೌಡ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ರು. ಇದೀಗ ಯಾವ ದೇಶಕ್ಕೆ ಹೋಗಿ ಫೋಟೋ ರಿಲೀಸ್ ಮಾಡ್ತೀರಾ ಎಂದು ನೆಟ್ಟಿಗರು ಕಾಮೆಂಟ್‌ಗಳನ್ನು ಹಾಕಿದ್ದರು.
ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆಗಿರೋ ಸೋನು ಶ್ರೀನಿವಾಸ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ರು.
ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಇದ್ರಿಂದಲೇ ಸೋನು ಗೌಡ ಸಖತ್ ಟ್ರೋಲ್ ಆಗಿದ್ರು.