ಈಗ ಕನ್ನಡತಿ ತಗೊಳ್ಳಿ, ನನ್ನರಸಿ ರಾಧೆ ತಗೊಳ್ಳಿ, ಹೆಚ್ಚಿನೆಲ್ಲ ಸೀರಿಯಲ್‌ ತಗೊಳ್ಳಿ. ಎಲ್ರೂ ರೆಸಾರ್ಟ್ ನಲ್ಲಿ ಓಡಾಡ್ತಿದ್ದಾರೆ. ಯಾಕೆ ಹೀಗೆ ಅನ್ನೋದನ್ನು ಹೆಚ್ಚಿನವರು ಯೋಚನೆ ಮಾಡಿರಲಿಕ್ಕಿಲ್ಲ. ಏಕೆಂದರೆ ಕಥೆಗೆ ತಕ್ಕ ಹಾಗೇ ಈ ಸನ್ನಿವೇಶ ಕ್ರಿಯೇಟ್‌ ಮಾಡಲಾಗಿದೆ. ಹೀಗಾಗಿ ಕಥೆಗೆ ಪೂರಕ ಅಂತ ಎಲ್ಲ ನೋಡ್ಕೊಂಡು ಮುಂದಕ್ಕೆ ಹೋಗ್ತಿದ್ದಾರೆ. ಕೆಲವರಿಗೆ ಮಾತ್ರ ಇದನ್ನು ನೋಡಿ ತಲೆಗೆ ಹುಳ ಬಿಟ್ಟಂಗಾಗಿದೆ. ಮುಂದಿನ ಎಪಿಸೋಡ್‌ ನೋಡಿ, ನಿಮಗೂ ತಲೆಗೆ ಹುಳ ಬಿಟ್ಟ ಹಾಗಾಗದಿದ್ರೆ ಕೇಳಿ. ಯಾಕಂದರೆ ಹೆಚ್ಚಿನೆಲ್ಲ ಸೀರಿಯಲ್‌ಗಳ ಲೊಕೇಶನ್‌ ಚೇಂಜ್. ಜೊತೆಗೆ ಚಿಕ್ಕ ಹುಡುಗ್ರು, ಯುವಕ, ಯುವತಿಯರದೇ ಈಗ ಕಾರುಬಾರು. ಇವರನ್ನ ನಿಯಂತ್ರಿಸೋ ಹಿರಿಯರ ಪತ್ತೇ ಇಲ್ಲ. ಯಾಕೆ ಹೀಗೆ ಅಂತ ವಿಶಾಲವಾಗಿ ಥಿಂಕ್‌ ಮಾಡಿದ್ರೆ ಕಾರಣ ಹೊಳಿಯುತ್ತೆ.

ಅಪ್ಪ-ಅಮ್ಮನ ಡಿವೋರ್ಸ್ ಆಗಿದ್ದು ಖುಷಿ ಆಯ್ತು ಎಂದ ಶ್ರುತಿ ಹಾಸನ್ ...
 

ಕನ್ನಡತಿ ಸೀರಿಯಲ್ ತಗೊಂಡ್ರೆ ಹೀರೋಯಿನ್ ಭುವಿ, ಇಬ್ರು ತಂಗಿಯರಾದ ಸುಚಿ ಮತ್ತು ಬಿಂದು, ಇನ್ನೊಬ್ಬ ಹರ್ಷ.. ಇಷ್ಟೂ ಜನರನ್ನೂ ವರು ಒಂದು ರೆಸಾರ್ಟ್ ಗೆ ಕರ್ಕೊಂಡು ಬಂದು ಬಿಟ್ಟಿದ್ದಾಳೆ. ಸೋ, ಈ ರೆಸಾರ್ಟ್ ನಲ್ಲೇ ಬ್ರೇಕಪ್ಪು ಪಾರ್ಟಿನೂ ಆಗುತ್ತೆ, ಸಣ್ಣ ಪುಟ್ಟ ಜಗಳ, ಮನಸ್ತಾಪ ಎಲ್ಲವೂ ಆಗುತ್ತೆ. ಸದ್ಯಕ್ಕೆ ಭುವಿಗೆ ಒಂಟಿಯಾಗಿರಲು ಇಲ್ಲೊಂದು ರೂಮ್ ಸಿಕ್ಕಿದೆ. ಅವಳು ಒಂಟಿಯಾಗಿದ್ದಾಗ ಏನು ಮಾಡಬಹುದು ಅನ್ನೋ ಕುತೂಹಲ ಹರ್ಷನದು. ರಾತ್ರಿ ಒಬ್ಬನೇ ಬಂದು ಅವಳ ರೂಮೊಳಗೆ ಇಣುಕುತ್ತಾನೆ. ಒಳಗೆ ಡೈರಿ ಬರೀತಾ ಖುಷಿಯಲ್ಲಿರುವ ಭುವಿಯನ್ನ ನೋಡ್ತಾನೆ. ಅಷ್ಟರಲ್ಲಿ ಭುವಿಗೆ ಹೊರಗೆ ಯಾರೋ ಇಣುಕುತ್ತಿರುವ ಹಾಗನಿಸಿ ಆಕೆ ಹೊರಬಂದಾಗ ಹರ್ಷ ಬೆದರಿ ಬಚ್ಚಿಟ್ಟುಕೊಳ್ಳುತ್ತಾನೆ. ಆಕೆಯ ಹಾಡು ಕೇಳಿಸಿಕೊಳ್ಳುತ್ತಲೇ ಸಿನಿಮಾ ಹೀರೋನಂತೆ ಗೋಡೆ ಹಿಡಿದು ನಿಲ್ಲಲು ಪ್ರಯತ್ನಿಸಿ ಬೀಳುತ್ತಾನೆ. ಕೊರಳು ಉಳುಕುತ್ತೆ, ಕೈಯಲ್ಲೆಲ್ಲ ಬೊಬ್ಬೆ ಬರುತ್ತೆ. ಈಗ ಭುವಿ ಹರ್ಷನ ಉಳುಕು ತೆಗೆಯುತ್ತಾಳೋ ಅನ್ನುವ ಪ್ರಶ್ನೆ.

ಇನ್ನೊಂದು ಕಡೆ ನನ್ನರಸಿ ರಾಧೆಯಲ್ಲಿ ಅಗಸ್ತ್ಯ, ಇಂಚರಾ ಜೊತೆಗೆ ಮನೆಯವರೆಲ್ಲ ರೆಸಾರ್ಟ್ ಗೆ ಬಂದಿದ್ದಾರೆ. ಶುರುವಿಗೆ ಇಂಚರಾಳ ಹಳೇ ಗೆಳೆಯ ಸಿಕ್ಕಿ ಹರ್ಷನಿಗೆ ಇರಿಸುಮುರಿಸಾದ್ರೆ, ಈಗ ಅಗಸ್ತ್ಯನಿಗೆ ಒಬ್ಬ ಹುಡುಗಿ ಲೈನ್ ಹೊಡೀತಾಳೆ. ಬೀಳುತ್ತಿದ್ದ ಅವಳನ್ನು ಹಿಡ್ಕೊಂಡು ಅಗಸ್ತ್ಯ, ಇಂಚರಾಳ ಕೋಪಕ್ಕೆ ತುತ್ತಾಗಿದ್ದಾನೆ. ಈಗ ಇಂಚರಾ ಕೋಪವನ್ನು ಅಗಸ್ತ್ಯ ಹೇಗೆ ಇಳಿಸ್ತಾನೆ ಅನ್ನೋ ಕಥೆ.

ಸಲಾರ್ ಚಿತ್ರದಲ್ಲಿ ಜ್ಯೋತಿಕಾ ಅಲ್ಲ ಪ್ರಿಯಾಂಕಾ ಉಪೇಂದ್ರ? ...

ಹೀಗೆ ಒಂದೊಂದು ಸೀರಿಯಲ್‌ಗಳೂ ಹೊಸ ಕಥೆಯ ಎಳೆಯ ಜೊತೆಗೆ ಹೊಸ ಜಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಲಾಕ್‌ಡೌನ್‌ನಲ್ಲಿ ಇಲ್ಲಿ ಶೂಟಿಂಗ್ ಗೆ ಅವಕಾಶ ಇಲ್ಲದ್ದು ಕಾರಣ ಅನ್ನುವ ಮಾತಿದೆ. ಇದೀಗ ಜೀ ಕನ್ನಡ, ಕಲರ್ಸ್ ಕನ್ನಡ ಚಾನೆಲ್‌ಗಳ ಎಲ್ಲ ಸೀರಿಯಲ್ ತಂಡಗಳೂ ರಾಮೋಜಿರಾವ್ ಫಿಲ್ಮಂ ಸಿಟಿಗೆ ಹೋಗಿವೆ. ಅಲ್ಲಿ ಶೂಟಿಂಗ್ ಶುರುವಾಗಿದೆ. ಮುಂದಿನ ವಾರ ಮತ್ತೊಂದು ಹೊಸ ಲೊಕೇಶನ್‌, ಹೊಸ ಕತೆ, ಯಂಗ್ ಯಂಗ್ ಕಲಾವಿದರಿಂದ ಸೀರಿಯಲ್‌ಗಳು ಕಳೆಗಟ್ಟೋದು ಗ್ಯಾರೆಂಟಿ. ಇದರ ಜೊತೆಗೆ ಭುವಿ ತಾನು ರಾಮೋಜಿರಾವ್‌ ಫಿಲ್ಮಂ ಸಿಟಿಯಲ್ಲಿರುವ ಫೋಟೋ ಹಾಕಿ, ಅಲ್ಲಿ ಶೂಟಿಂಗ್‌ ಶುರುವಾಗಿರೋದನ್ನು ಹೇಳಿದ್ದಾರೆ. ಕನ್ನಡತಿ ಹುಡುಗಿ ರಂಜಿನಿ ರಾಘವನ್ ಅವರ ಈ ಫೋಟೋ ವೀಕ್ಷಕರಿಗಿಂದ ಉತ್ತಮ ಪ್ರಶಂಸೆ ಹರಿದುಬಂದಿದೆ. ಜೊತೆಗೆ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್‌ ಹೇಗೆ ನಡಿಯಬಹುದು. ಅಲ್ಲಿನ ಲೊಕೇಶನ್‌ಗಳು ಹೇಗಿರಬಹುದು ಅನ್ನೋ ಬಗೆಗೆ ಕುತೂಹಲ ಹೆಚ್ಚಿಸಿದೆ. ಬಹುಶಃ ಕನ್ನಡ ಸೀರಿಯಲ್‌ಗಳ ಇತಿಹಾಸದಲ್ಲೇ ರಾಮೋಜಿ ರಾವ್‌ ಫಿಲ್ಮಂ ಸಿಟಿಯಲ್ಲಿ ಕನ್ನಡ ಸೀರಿಯಲ್ ಶೂಟಿಂಗ್ ನಡೀತಿರೋದು ಇದೇ ಮೊದಲು. ಅದರಲ್ಲೂ ಈ ಲೆವೆಲ್‌ಗೆ ರಾಶಿ ರಾಶಿ ಸೀರಿಯಲ್‌ಗಳ ಶೂಟಿಂಗ್ ನಡೆದಿರೋದಕ್ಕೆ ಸಾಧ್ಯವೇ ಇಲ್ಲ ಬಿಡಿ.

ಅಲ್ಲಿಗೆ ಕನ್ನಡತಿಯ ಹರ್ಷ, ವರು, ಭುವಿ ಟೀಮ್ ಈಗಿರುವ ರೆಸಾರ್ಟ್ ಬಿಟ್ಟು ಹೊಸತೊಂದು ಜಾಗಕ್ಕೆ ಗುಳೆ ಹೋಗೋದು ಪಕ್ಕಾ ಆಗಿದೆ. ಅಮ್ಮಮ್ಮನೂ ಇದಕ್ಕೆ ಜೊತೆಯಾಗ್ತಾರಾ ಅಥವಾ ಬರೀ ಇವರ ಮೇಲೆಯೇ ಲಾಕ್‌ಡೌನ್ ಮುಗಿಯೋವರೆಗೂ ಕಥೆ ನಡೆಯುತ್ತಾ ಅನ್ನೋದು ಸದ್ಯದ ಕುತೂಹಲ.

ಹೈದ್ರಾಬಾದ್‌ಗೆ ಗುಳೆ ಹೋದ ಕನ್ನಡ ಸೀರಿಯಲ್ ತಂಡ; ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ...