Asianet Suvarna News Asianet Suvarna News

ಸಲಾರ್ ಚಿತ್ರದಲ್ಲಿ ಜ್ಯೋತಿಕಾ ಅಲ್ಲ ಪ್ರಿಯಾಂಕಾ ಉಪೇಂದ್ರ?

ಸಲಾರ್ ಚಿತ್ರದಲ್ಲಿ ಜ್ಯೋತಿಕಾ ಅಭಿನಯಿಸುತ್ತಿದ್ದಾರೆ ಎಂಬುದಾಗಿ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿತ್ತು. ಕೆಲವು ಮೂಲಗಳಿಂದ ಇದರ ಬಗ್ಗೆ ಕ್ಲಾರಿಟಿ ಸಿಕ್ಕಿದೆ.....
 

Rumours that Priyanka Upendra will join Prabhas Salaar set and not Jyothika suriya vcs
Author
Bangalore, First Published May 24, 2021, 1:17 PM IST

ಕ್ರಿಯೇಟಿವ್ ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಕಿಂಗ್ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಲಾರ್ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಕೇಳಿ ಬರುತ್ತಿದೆ. ಪ್ರಭಾಸ್ ಸಹೋದರಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.

ಬಿಗ್ ಬಾಸ್ ಸ್ಪರ್ಧಿಗೆ ನಟ ಪ್ರಭಾಸ್‌ ಜತೆ ನಟಿಸೋ ಅವಕಾಶ! 

ಹೌದು! ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಸಹೋದರಿಯಾಗಿ ಜ್ಯೋತಿಕಾ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಜ್ಯೋತಿಕಾ ಸಲಾರ್ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ಈ ಪಾತ್ರಕ್ಕೆ ಇಬ್ಬರು ಸ್ಟಾರ್ ನಟಿಯರನ್ನು ಲಿಸ್ಟ್‌ನಲ್ಲಿ ಇಟ್ಟಿದ್ದಾರಂತೆ. ಅದರಲ್ಲಿ ಒಬ್ಬರು ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ಎನ್ನಲಾಗುತ್ತಿದೆ. ಸಲಾರ್ ತಂಡ ಇದರ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.

Rumours that Priyanka Upendra will join Prabhas Salaar set and not Jyothika suriya vcs

ಇನ್ನು ಪ್ರಭಾಸ್ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದ ನಂತರ ರಮ್ಯಾಕೃಷ್ಣ ಮತ್ತು ಪ್ರಭಾಸ್ ಕಾಂಬಿನೇಷನ್‌ ಎಲ್ಲರಿಗೂ ಇಷ್ಟವಾಗಿದೆ. ಈ ಚಿತ್ರದಲ್ಲೂ ತಾಯಿ ಸೆಂಟಿಮೆಂಟ್‌ ಅಂಶವಿದ್ದು ರಮ್ಯಾ ಕೃಷ್ಣ ಸೂಕ್ತ ಎನ್ನಲಾಗಿದೆ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ಒಂದು ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಲಾಗಿದೆ.  ಈಗಾಗಲೇ ಪ್ರಭಾಸ್ ಆರ್ಮಿ ಅಧಿಕಾರಿ ವಸ್ತ್ರ ಧರಿಸಿರುವ ಕೆಲವೊಂದು ಫೋಟೋಗಳು ವೈರಲ್ ಆಗಿದೆ.

Follow Us:
Download App:
  • android
  • ios