Asianet Suvarna News Asianet Suvarna News

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾ-ರಾಮ ಮತ್ತು ಶ್ರೀರಸ್ತು, ಶುಭಮಸ್ತು ಸೀರಿಯಲ್‌ ವಿಲನ್‌ಗಳು ನಕ್ಕಿರೋದನ್ನು ಒಮ್ಮೆ ಕೇಳಿಬಿಡಿ... 
 

Sita Rama and Srirastu Shubhamastu serial lady villians laughing suc
Author
First Published Nov 10, 2023, 5:43 PM IST

ಧಾರಾವಾಹಿಗಳಲ್ಲಿ ನೋಡುವ ಪಾತ್ರಧಾರಿಗಳು ರಿಯಲ್​ ಲೈಫ್​ನಲ್ಲಿ ಬೇರೆಯದ್ದೇ ರೀತಿಯಲ್ಲಿ ಇರುತ್ತಾರೆ. ಇಂದು ಮಹಿಳೆಯರೇ ಧಾರಾವಾಹಿ ಪ್ರಿಯರಾಗಿರುವ ಕಾರಣದಿಂದ ಧಾರಾವಾಹಿಗಳಲ್ಲಿಯೂ ನಾಯಕಿ, ವಿಲನ್​ ಎಲ್ಲರೂ ಮಹಿಳೆಯರೇ ತುಂಬಿರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಧಾರಾವಾಹಿಗಳಲ್ಲಿ, ವಯಸ್ಸಿಗಿಂತಲೂ ದೊಡ್ಡ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಕೆಲವು ನಟಿಯರಿಗೆ ಇರುತ್ತದೆ. ಧಾರಾವಾಹಿಗಳಲ್ಲಿ ಅತ್ತೆ, ಚಿಕ್ಕಮ್ಮ, ಅಮ್ಮನ ಪಾತ್ರಧಾರಿಗಳಾಗುತ್ತಾರೆ. ಧಾರಾವಾಹಿಗಳಲ್ಲಿ  2-3 ದೊಡ್ಡ ಮಕ್ಕಳ ಅಮ್ಮನಾಗಿ ಕೊನೆಗೂ ಅಜ್ಜಿಯೂ ಆಗುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ಇವರಿಗೆ ತೀರಾ ಚಿಕ್ಕ ಮಕ್ಕಳು ಇರುತ್ತಾರೆ, ಪಾತ್ರಧಾರಿಯ ವಯಸ್ಸು ಕೂಡ ಚಿಕ್ಕದ್ದೇ ಇರುತ್ತದೆ. ಆದರೆ ಧಾರಾವಾಹಿಗಳಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬುವಾಗ ನಿಜಕ್ಕೂ ಅವರು ಅಷ್ಟು ಚಿಕ್ಕ ವಯಸ್ಸಿನವರು ಎನ್ನಿಸುವುದೇ ಇಲ್ಲ. ಕೆಲವು ಧಾರಾವಾಹಿಗಳಲ್ಲಿ ಕೆಲವು ನಟಿಯರನ್ನು ನೋಡಿದಾಗ ಅವರು ಚಿಕ್ಕವರೆಂದು ತಿಳಿದುಬಂದರೂ, ಇನ್ನು ಕೆಲವರು ತಮ್ಮ ಮೇಕಪ್​ ಮತ್ತು ನಟನೆಯಿಂದ ಪ್ರಬುದ್ಧವಾಗಿ ನಟಿಸಿ, ನಿಜವಾಗಿಯೂ ಅಮ್ಮ, ಚಿಕ್ಕಮ್ಮ ಎನಿಸುವುದು ಉಂಟು.

ಹೀಗೆ ಚಿಕ್ಕ ವಯಸ್ಸಿನಲ್ಲಿಯೂ ತಮ್ಮ ಪಾತ್ರಕ್ಕಿಂತ ಮಿಗಿಲಾದ ನಟನೆ ಮಾಡುತ್ತಿರುವವರು ಜೀಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು, ಶುಭಮಸ್ತು ಧಾರಾವಾಹಿಯ ವಿಲನ್​ ಆಗಿರುವ ಶಾರ್ವರಿ. ಅಂದಹಾಗೆ ಇವರ ರಿಯಲ್​ ಲೈಫ್​ ಹೆಸರು ನೇತ್ರಾ ಜಾಧವ್. ಈ ಧಾರಾವಾಹಿ ಇದಾಗಲೇ ಜನರ ಮನಸ್ಸನ್ನು ಗೆದ್ದಿದೆ. ಸೊಸೆಯೊಬ್ಬಳು ತನ್ನ ವಿಧವೆ ಅತ್ತೆಗೆ(ಸುಧಾರಾಣಿ) ಮರು ಮದುವೆ ಮಾಡಿಸುವ ಹಾಗೂ ಆಕೆ ಗಂಡನ ಮನೆಯವರಿಂದ ತಾತ್ಸಾರಕ್ಕೆ ಒಳಗಾಗುವ ಅದರಲ್ಲಿಯೂ ಈ ಶಾರ್ವರಿ ಪಾತ್ರಧಾರಿಯಿಂದ ತೀರಾ ತೊಂದರೆಗೆ ಒಳಗಾಗುವ ಕಥಾವಸ್ತುವುಳ್ಳ ವಿಭಿನ್ನ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ.  ಧಾರಾವಾಹಿಯಲ್ಲಿ ಮಕ್ಕಳು ಮದುವೆಗೆ ಬಂದಿದ್ದರೆ, ರಿಯಲ್​ ಲೈಫ್​ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

ಇದೇ ಇನ್ನೊಂದೆಡೆ, ಜನಮನ ಗೆದ್ದಿರುವ ಧಾರಾವಾಹಿ ಸೀತಾ ರಾಮ. ಪೂಜಾ ಲೋಕೇಶ್ ಅವರು 'ಸೀತಾ ರಾಮ' ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ನಿರ್ವಹಿಸುತ್ತಿರುವ ಭಾರ್ಗವಿ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು  ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು. 

ಈ ಇಬ್ಬರು ಕ್ಯೂಟ್‌ ವಿಲನ್‌ಗಳು ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೂ ನಿರೂಪಕರಾದ ಮಾಸ್ಟರ್‌ ಆನಂದ್‌ ಹಾಗೂ ಶ್ವೇತಾ ಚೆಂಗಪ್ಪಾ ಅವರು ಟಾರ್ಗೆಟ್‌ ಕೊಟ್ಟಿದ್ದಾರೆ. ಅದೇನೆಂದರೆ ವಿಲನ್‌ ಎಂದಾಕ್ಷಣ ಸಾಮಾನ್ಯವಾಗಿ ಅವರ ನಗುವೇ ಬೇರೆಯ ತೆರನಾಗಿ ಇರುತ್ತದೆ. ಕೆಟ್ಟ ರೀತಿಯಲ್ಲಿ ನಗುವ ಆಡಿಯೋ ಕೇಳಿಸಿ ಅದನ್ನೇ ಅನುಕರಿಸುವಂತೆ ಹೇಳಲಾಗಿತ್ತು. ಇವರಿಬ್ಬರೂ ಆ ಆಡಿಯೋದಲ್ಲಿ ಇದ್ದಂತೆ ಕೇಳಿ ನಕ್ಕಿದ್ದಾರೆ. ಅಸಲಿಗೆ ಈ ನಗು ಕೇಳಿ ಅಲ್ಲಿದ್ದ ಪ್ರೇಕ್ಷಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ನೀವೂ ಒಮ್ಮೆ ಕೇಳಿಬಿಡಿ. 

ಮಾಧವ-ತುಳಸಿ ನಡುವೆ ಒಲವ ಶ್ರುತಿ ಸೇರಿದಾಗ... ಡ್ಯುಯೆಟ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios