ಮಾಧವ-ತುಳಸಿ ನಡುವೆ ಒಲವ ಶ್ರುತಿ ಸೇರಿದಾಗ... ಡ್ಯುಯೆಟ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

ಶ್ರೀರಸ್ತು ಶುಭವಸ್ತು ಸೀರಿಯಲ್​ ಜೋಡಿ ಮಾಧವ-ತುಳಸಿ ಡ್ಯುಯೆಟ್​ ಹಾಡಿದ್ದು ಅದರ ವಿಡಿಯೋ ವೈರಲ್​ ಆಗಿದೆ.
 

Shreerastu Shubhamastu Madhav and Tulasi duet song gone viral Fans reacts suc

ಮಾಧವ ಮತ್ತು ತುಳಸಿ ಎಂದಾಕ್ಷಣ ಧಾರಾವಾಹಿ ಪ್ರಿಯರಿಗೆ ಕಣ್ಣ ಮುಂದೆ ಬರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು- ಶುಭಮಸ್ತು ಧಾರಾವಾಹಿ.  ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು  ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ. 

ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪಾತ್ರ ಸೊಸೆಯದ್ದು. ಸಿರಿ ಪಾತ್ರದ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿರುವ ಈ ಸೊಸೆಯ ರಿಯಲ್​ ಹೆಸರು ಚಂದನಾ ರಾಘವೇಂದ್ರ. ತನ್ನ ಅತ್ತೆ ತುಳಸಿ (ಸುಧಾರಾಣಿ) ಮತ್ತೊಂದು ಮದುವೆ ಮಾಡಿಸಿದ್ದಾಳೆ ಈಕೆ. ಸ್ನೇಹಿತರಂತೆ ಇದ್ದ ತುಳಸಿ ಮತ್ತು ಮಾಧವ (ಅಜಿತ್​ ಹಂದೆ) ಈಗ ಪತಿ-ಪತ್ನಿಯಾಗಿದ್ದಾರೆ. ಆದರೆ ಗಂಡನ ಮನೆಯಲ್ಲಿ ತುಳಸಿಯ ಕಂಡರೆ ಮಾಧವನ ಮಕ್ಕಳಿಗೆ ಆಗಿ ಬರುವುದಿಲ್ಲ. ಅದರಂತೆ ಧಾರಾವಾಹಿ ಎಂದ ಮೇಲೆ  ಲೇಡಿ ವಿಲನ್​ ಇರಲೇಬೇಕು. ಈ ಧಾರಾವಾಹಿಯ ವಿಲನ್​ ಆಗಿರುವ ಶಾರ್ವರಿ. ಅಂದಹಾಗೆ ಇವರ ರಿಯಲ್​ ಲೈಫ್​ ಹೆಸರು ನೇತ್ರಾ ಜಾಧವ್. ಸೊಸೆಯೊಬ್ಬಳು ತನ್ನ ವಿಧವೆ ಅತ್ತೆಗೆ ಮರು ಮದುವೆ ಮಾಡಿಸಿಬಿಟ್ಟರೂ ಗಂಡನ ಅಣ್ಣನ ಪತ್ನಿ ಶಾರ್ವರಿ ಈಕೆಗೆ ತೊಂದರೆ ಕೊಡುತ್ತಾಳೆ.  

ಶ್ರೀರಸ್ತು ಶುಭಮಸ್ತು ವಿಲನ್​ ಶಾರ್ವರಿ ಇಷ್ಟು ಚಿಕ್ಕವರಾ? ಸೀರಿಯಲ್​ ತಂಡದ ಜೊತೆ ಬೊಂಬಾಟ್​ ರೀಲ್ಸ್​

ಆದರೂ ಎಲ್ಲವನ್ನೂ ನುಂಗಿ ಮನೆ ಮನೆಯಿಂದ ಸದಾ ತಾತ್ಸಾರಕ್ಕೆ ಒಳಗಾಗುತ್ತಿರುವ ತುಳಸಿ ಮತ್ತು ಹೆತ್ತ ಮಕ್ಕಳೇ ದ್ವೇಷದಿಂದ ಕಾಣುವ ಅಪ್ಪ ಮಾಧವ್​ ಜೋಡಿ ಮಾತ್ರ ಸೂಪರ್​ ಡೂಪರ್​ ಆಗಿದೆ. ತುಳಸಿ ಮತ್ತು ಮಾಧವ್​ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮದುವೆಯಾದರೂ ಸ್ನೇಹವನ್ನು ಪಾಲಿಸುವ ಜೋಡಿ ಇವರದ್ದು. ಅತ್ತ ತುಳಸಿಯನ್ನು ಕಂಡರೆ ಗಂಡನ ಮನೆಯಲ್ಲಿ ಹೆಚ್ಚಿನವರಿಗೆ ಆಗಿ ಬರುವುದಿಲ್ಲವಾದರೆ, ಖುದ್ದು ಮಾಧವ ಅವರನ್ನು ಕಂಡರೂ ಎಲ್ಲರಿಗೂ ಅಷ್ಟಕಷ್ಟೇ. ಇದೀಗ ಈ ಗಂಡ-ಹೆಂಡತಿಯೇ ಪರಸ್ಪರ ಆಸೆಯಾಗಿದ್ದಾರೆ.

ಈ ಕ್ಯೂಟ್​ ಜೋಡಿಯ ರೀಲ್ಸ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ಮಾಧವ-ತುಳಸಿ ನಡುವೆ ಒಲವ ಶ್ರುತಿ ಸೇರಿದಾಗ ಕ್ಯಾಪ್ಷನ್​ನೊಂದಿಗೆ ಜೀ ಕನ್ನಡ ವಾಹಿನಿ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​  ಮಾಡಿಕೊಂಡಿದೆ. ನನ್ನ-ನಿನ್ನ ಆಸೆ, ನಮ್ಮ ಪ್ರೇಮ ಭಾಷೆ... ಹಾಡಿಗೆ ಈ ಜೋಡಿ ಸಕತ್​ ಸ್ಟೆಪ್​ ಹಾಕಿದೆ. ಇವರ ಈ ಆ್ಯಕ್ಟಿಂಗ್​ಗೆ ಸೋ ಸ್ವೀಟ್​ ಎನ್ನುತ್ತಿದ್ದಾರೆ ನೆಟ್ಟಿಗರು. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಸೆಕ್ಷನ್​ ತುಂಬಿ ಹೋಗಿದೆ. ನಿಮಗಿಬ್ಬರಿಗೂ ಸೀರಿಯಲ್​ನಲ್ಲಿ ಒಳ್ಳೆಯದಾಗಲಿ, ನಿಮ್ಮ ಜೋಡಿ ಖುಷಿಯಾಗಿರಲಿ ಎಂದು ಸೀರಿಯಲ್​ ಫ್ಯಾನ್ಸ್ ಹಾರೈಸುತ್ತಿದ್ದಾರೆ. 

'ಅಂಕು ಡೊಂಕಿದೆ...' ಎನ್ನುತ್ತಾ ಕುಣಿದ 'ಶ್ರೀರಸ್ತು ಶುಭಮಸ್ತು' ಜೋಡಿ: ಪ್ರೆಗ್ನೆಂಟ್​ ಹುಷಾರಮ್ಮಾ ಅಂತ ಫ್ಯಾನ್ಸ್​

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios