ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ. ಏನಿದು ಸುದ್ದಿ?
 

Seeta Rama fame Sihi in Zee Kannada Kutuma Award got upcoming award suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಸ್ವಲ್ಪ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಸಿಂಗಲ್​ ಪೇರೆಂಟ್​ ಆಗಿರುವ ಸೀತಾ, ತನ್ನ ಕಾಯಿಲೆ ಪೀಡಿತ ಮಗಳನ್ನು ಸಾಕುವುದು ಒಂದೆಡೆಯಾದರೆ, ಈಕೆಗೆ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ರಾಮನ​ ಜೊತೆ  ಸ್ನೇಹವಿರುತ್ತದೆ. ರಾಮನಿಗೂ ಸೀತಾಳ ಮಗಳು ಸಿಹಿ ಎಂದರೆ ಅಪಾರ ಪ್ರೀತಿ. ಆದರೆ ರಾಮ ಬಿಲೇನಿಯರ್​ ಎನ್ನುವ ಸತ್ಯ ಸೀತಾಗೆ ತಿಳಿದಿಲ್ಲ. ಒಟ್ಟಿನಲ್ಲಿ ಸೀತಾ-ರಾಮ ಮತ್ತು ಸೀತಾಳ ಮಗಳು ಸಿಹಿಯ ನಡುವೆ ಸುತ್ತುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.  ನಾಯಕಿ ಸೀತಾ ಹಾಗೂ ನಾಯಕ ರಾಮ್ ಜೊತೆಗೆ ಮುದ್ದು ಪುಟಾಣಿ ಸಿಹಿಯೂ ಕೂಡಾ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ಬಿಟ್ಟಿದ್ದಾಳೆ.
 
ಸದ್ಯ ರಾಮನ ಚಿಕ್ಕಮ್ಮನಿಂದಾಗಿ ಸಿಹಿ ಕಿಡ್ನಾಪ್‌ ಆಗಿದ್ದಾಳೆ. ಆಕೆಗಾಗಿ ಸೀತಾ ಮತ್ತು ಆಕೆಯ ಪಾಲಕರು ಹಾಗೂ ರಾಮ್‌ ತೀವ್ರ ಹುಡುಕಾಟ ನಡೆಸಿದ್ದಾರೆ. ಪಟಪಟ ಎಂದು ಅರಳು ಹುರಿದಂತೆ ಮಾತನಾಡುವ ಸಿಹಿ  ತನ್ನನ್ನು ಕಿಡ್ನಾಪ್‌ ಮಾಡಿದವರ ತಲೆ ತಿನ್ನುತ್ತಿದ್ದಾಳೆ. ಆದರೆ ಈಕೆಯನ್ನು ಕಾಣದೇ ಎಲ್ಲರೂ ಕಂಗೆಟ್ಟಿದ್ದು, ಎಲ್ಲೆಂದರೆಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಬೈದುಕೊಳ್ಳುತ್ತಲೇ ಬಿಗ್​ಬಾಸ್​ ನಂ.1 ಸ್ಥಾನಕ್ಕೇರಿಸಿದ ಪ್ರೇಕ್ಷಕರು: ಕಿಚ್ಚ ಸುದೀಪ್​ ಪೋಸ್ಟ್​ ವೈರಲ್​!

ಆದರೆ ಈ ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕ್ಯಾಪ್ಟರ್‌ನಲ್ಲಿ ಬಂದು ಎಲ್ಲರ ಕಣ್ಣು ಅರಳಿಸಿದ್ದಾಳೆ. ಹೌದು. ಜೀ ಕುಟುಂಬ ಅವಾರ್ಡ್‌ ಫಂಕ್ಷನ್‌ನಲ್ಲಿ ಸಿಹಿಯ ಎಂಟ್ರಿ ಆಗಿದೆ. ಈಕೆಯ ಎಂಟ್ರಿಯನ್ನು ವಿಶೇಷ ರೀತಿಯಲ್ಲಿ ತೋರಿಸಲಾಗಿದೆ. ಬೆಸ್ಟ್‌ ಉದಯೋನ್ಮುಖ ನಟಿಯ ಅವಾರ್ಡ್‌ ಈಕೆಗೆ ದಕ್ಕಿದ್ದು, ಪ್ರಶಸ್ತಿ ಪಡೆದ ಸಿಹಿ ಕಣ್ಣೀರು ಸುರಿಸುವುದನ್ನು ನೋಡಬಹುದು. ಜೊತೆಗೆ ಈಕೆಯ ಫ್ರೆಂಡ್ಸ್‌ ಎಲ್ಲಾ ಬಂದು ವೇದಿಕೆಯ ಮೇಲೆ ವಿಷ್‌ ಮಾಡಿದ್ದಾರೆ. ಇಂಥದ್ದೊಂದು ಅದ್ಭುತ ನಟನೆಯಿಂದ ಲಕ್ಷಾಂತರ ಫ್ಯಾನ್ಸ್‌ ಅನ್ನು ಈ ಚಿಕ್ಕ ವಯಸ್ಸಿನಲ್ಲಿಯೇ ಸಿಹಿ ಪಡೆದುಕೊಂಡಿದ್ದಾಳೆ. ಜೀ ಕುಟುಂಬ ಅವಾರ್ಡ್‌ ಇಂದಿನಿಂದ ಶುರುವಾಗಲಿದ್ದು, ವಿವಿಧ ನಟ-ನಟಿಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಲು ಉತ್ಸುಕರಾಗಿದ್ದಾರೆ. ಇದರ ಪ್ರೊಮೋ ರಿಲೀಸ್‌ ಆಗಿದ್ದು, ಪುಟಾಣಿ ಸಿಹಿಯ ಸ್ವೀಟ್‌ ಎಂಟ್ರಿ ಎಲ್ಲರ ಮನಸ್ಸನ್ನು ಗೆದ್ದಿದೆ. 

ಅಂದಹಾಗೆ ಈ ಪುಟಾಣಿ ಸಿಹಿಯ ನಿಜವಾದ ಹೆಸರು ರಿತು ಸಿಂಗ್‌. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀತಾ ರಾಮ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ.  

ಮಾಧವ-ತುಳಸಿ ನಡುವೆ ಒಲವ ಶ್ರುತಿ ಸೇರಿದಾಗ... ಡ್ಯುಯೆಟ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios