ಮದುವೆ ನಂತರ ಇದೇ ಮೊದಲ ಬಾರಿ ಸಿಲ್ಲಿ ಲಲ್ಲಿ ಜೋಡಿ ಆನ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು. ಅಪ್ಪ ಅಮ್ಮ ರಾಜಾ ರಾಣಿ ಆಗಬೇಕೆಂಬುವುದು ಮಗನ ಆಸೆ.

'ರಾಜಾ ರಾಣಿ' ರಿಯಾಲಿಟಿ ಶೋ ಮೂಲಕ ಕಿರುತೆರೆ ಜನಪ್ರಿಯ ಜೋಡಿ ರೂಪಾ ಪ್ರಭಾಕರ್ ಹಾಗೂ ಪ್ರಶಾಂತ್‌ ಜೋಡಿಯಾಗಿ ತೆರೆ ಮೇಲೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದೊಂದು ವಿಭಿನ್ನ ರಿಯಾಲಿಟಿ ಗೇಮ್ ಅಗಿದ್ದು, ಅವರಿಗಿಂತ ಅವರ ಪುತ್ರನಿಗೆ ಈ ಶೋ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ ಎನ್ನುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಾನು ಪ್ರಶಾಂತ್ ಅನೇಕ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದೀವಿ. ಆದರೆ ಮದುವೆ ನಂತರ ಒಳ್ಳೆ ಕಮ್‌ಬ್ಯಾಕ್ ಮಾಡುವುದಕ್ಕೆ ರಾಜಾ ರಾಣಿ ಬೆಸ್ಟ್. ಎಷ್ಟೋ ಮಂದಿಗೆ ನಾವು ಮದುವೆ ಆಗಿರುವ ವಿಚಾರವೂ ತಿಳಿದಿಲ್ಲ. ನಾನು ಸಿಲ್ಲಿ ಲಲ್ಲಿ ವಿಕ್ರಮ್ ಸೂರಿ ಜೊತೆ ಮದುವೆ ಆಗಿದ್ದೀನಿ, ಪ್ರಶಾಂತ್ ಅವರು ಎನ್‌ಎಮ್‌ಎಲ್‌ನ ಮದುವೆ ಆಗಿದ್ದಾರೆ ಅಂದು ಕೊಂಡಿದ್ದಾರೆ. ಈ ಶೋ ಮೂಲಕ ನಮ್ಮ ಮದುವೆ ಬಗ್ಗೆ ಖಚಿತ ಪಡಿಸುವೆ. ಎಲ್ಲಾ ಗೊಂದಲಗಳಿಗೂ ಬ್ರೇಕ್ ಬೀಳುತ್ತದೆ,' ಎಂದು ಇಟೈಮ್ಸ್‌ಗೆ ರೂಪಾ ಹೇಳಿದ್ದಾರೆ. 

ರಿಯಲ್ ಲೈಫ್‌ ಗಂಡನ ಜೊತೆ ರಿಯಾಲಿಟಿ ಗೇಮ್‌ ಆಡಲು 'ಲಕ್ಷ್ಮಿ ಬಾರಮ್ಮ' ಗೊಂಬೆ ರೆಡಿ! 

ರೂಪಾ ಅವರ ಪುತ್ರ ಆಲಾಪ್ ಈಗಾಗಲೇ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಮೂಲಕ ಪೋಷಕರಷ್ಟೇ ಜನಪ್ರಿಯತೆ ಪಡೆದಿದ್ದಾನೆ. 'ನಮ್ಮ ಪುತ್ರನಿಗೆ ನಾವು ಇದರ ಬಗ್ಗೆ ಸರ್ಪ್ರೈಸ್ ನೀಡಬೇಕು ಎಂದು ಕೊಂಡೆವು. ಆದರೆ ಆಗಲಿಲ್ಲ. ಮಗನಿಗೆ ನಮ್ಮನ್ನು ವಿನ್ನರ್ ಆಗಿ ನೋಡುವ ಆಸೆ ಆಗಿದೆ. ನಾವು ಸೂಪರ್ ಆಗಿ ಆಟವಾಡುವುದಕ್ಕೆ ಮಾನಸಿಕವಾಗಿ ಬೆಂಬಲ ನೀಡುತ್ತಿದ್ದಾನೆ,' ಎಂದಿದ್ದಾರೆ.

View post on Instagram