ಪ್ರೋಮೋನೇ ವೈರಲ್ ಆಯ್ತು ಅಂದ್ಮೇಲೆ ಈ ಜೋಡಿಗೆ ಬೆಂಬಲ ಜೋರಾಗಿದೆ ಎಂದರ್ಥ. ಇದೇ ಮೊದಲ ಬಾರಿಗೆ ಚಂದನ್ ಕ್ಯಾಮೆರಾ ಎದುರಿಸುತ್ತಿದ್ದಾರೆ.... 

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಗೊಂಬೆ ಉರ್ಫ್ ನೇಹಾ ಗೌಡ, ತೆಲುಗು ಧಾರಾವಾಹಿ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ 'ರಾಜಾ ರಾಣಿ' ರಿಯಾಲಿಟಿ ಶೋ ಮೂಲಕ ಕನ್ನಡಕ್ಕೆ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ನೇಹಾ ಜೊತೆ ರಿಯಲ್ ಲೈಫ್ ಪಾರ್ಟ್‌ನರ್ ಚಂದನ್ ಇರಲಿದ್ದಾರೆ. 

'ನನ್ನ ಗಂಡ ಚಂದನ್‌ ಜೊತೆ ಶೂಟ್ ಮಾಡುವುದಕ್ಕೆ ತುಂಬಾ ಎಕ್ಸೈಟ್ ಆಗಿರುವೆ. ನಮ್ಮ ಮದುವೆ ವಿಡಿಯೋ ಹೊರತು ಪಡಿಸಿ, ಚಂದನ್ ಯಾವ ಕ್ಯಾಮೆರಾವನ್ನೂ ಎದುರಿಸಿಲ್ಲ. ಅದರಲ್ಲೂ ಇದು ಕಪಲ್ ಶೋ ಆಗಿರುವುದಕ್ಕೆ ನಾವಿಬ್ಬರೂ ತುಂಬಾ ನರ್ವಸ್ ಆಗಿದ್ದೀವಿ,' ಎಂದು ನೇಹಾ ಇಟೈಮ್ಸ್‌‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

'ರಾಜ ರಾಣಿ' ರಿಯಾಲಿಟಿ ಶೋನಲ್ಲಿ ನಿವೇದಿತಾ-ಚಂದನ್, ನೇಹಾ-ಚಂದು 

'ತುಂಬಾ ವರ್ಷಗಳಿಂದ ನಮಗೆ ನಮ್ಮ ಬಗ್ಗೆ ಗೊತ್ತಿದ್ದರೂ, ಇದೊಂದು ವಿಭಿನ್ನ ಪ್ರಯತ್ನ. ಬೇರೆ 11 ಜೋಡಿಗಳಿಂದ ಕಲಿಯುವುದು ತುಂಬಾನೇ ಇವೆ. ಅವರು ಕೆಲಸ ನಾನು ಚಿತ್ರೀಕರಣ ಅಂತ ಬ್ಯುಸಿಯಾಗಿರುತ್ತೇವೆ, ಈ ಶೋ ಮೂಲಕ ನಾವಿಬ್ಬರೂ ಹೆಚ್ಚಿನ ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಈ ಶೋ ಕಾನ್ಸೆಪ್ಟ್ ತುಂಬಾ ಡಿಫರೆಂಟ್ ಆಗಿದೆ. ಇದರ ಬಗ್ಗೆ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ. ನಮ್ಮನ್ನು ಜನರು ಇಷ್ಟು ದಿನ ಒಂದು ಪಾತ್ರದಲ್ಲಿ ನೋಡಿದ್ದಾರೆ. ಇದೇ ಮೊದಲು ನೇಹಾ ರಿಯಲ್ ಲೈಫ್‌ ಹೇಗೆ ಅಂತ ಗೊತ್ತಾಗುತ್ತದೆ,' ಎಂದು ನೇಹಾ ಹೇಳಿದ್ದಾರೆ.

View post on Instagram