Shrirasthu Shubhamasthu Kannada Serial: ನಟಿ ಸುಧಾರಾಣಿ ಹಾಗೂ ಅಜಿತ್‌ ಹಂದೆ ನಟಿಸುತ್ತಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಮಗು ಉಳಿಯತ್ತೋ ಇಲ್ಲವೋ ಎಂಬ ಪ್ರಶ್ನೆ ಉದ್ಭವವಾಗಿದೆ. ಇನ್ನೊಂದು ಕಡೆ ಶಾರ್ವರಿ ಮಾಡಿದ ಪಾಪ ಬಯಲಾಗುವ ಸಮಯವೂ ಬಂತು.  

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿಗೆ ಯಾವಾಗ ಹೆರಿಗೆ ಆಗತ್ತೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇನ್ನೊಂದು ಕಡೆ ಆಕ್ಸಿಡೆಂಟ್‌ ಮಾಡಿ ಸಿರಿ ತಂದೆ ಕೊಂದೋರು ಯಾರು ಎನ್ನೋದು ರಿವೀಲ್‌ ಆಗಬೇಕು. ಹೀಗಿರುವಾಗ ತುಳಸಿಗೆ ಇನ್ನೊಂದು ಕಷ್ಟ ಎದುರಾಗಿದೆ. 

50ನೇ ವಯಸ್ಸಿಗೆ ಗರ್ಭಿಣಿ!
ಇತ್ತೀಚೆಗೆ ತುಳಸಿ ಸೀಮಂತ ಕೂಡ ಆಗಿದೆ. ತುಳಸಿಗೆ ಹೊಟ್ಟೆ ಬಂದಿರೋದನ್ನು ತೋರಿಸಿರಲಿಲ್ಲ. ಇನ್ನು 50ನೇ ವಯಸ್ಸಿಗೆ ತುಳಸಿ ಗರ್ಭಿಣಿ ಆಗಿರೋದನ್ನು ಅನೇಕರು ಖಂಡಿಸಿದ್ದರು. ಸಂಸ್ಕೃತಿ, ಸಂಪ್ರದಾಯ ಎಲ್ಲೋಯ್ತು ಎಂದಿದ್ದರು. ವಾಸ್ತವವಾಗಿ ನಮ್ಮ ಸಮಾಜದಲ್ಲಿ ಈ ರೀತಿ ಆದ ಎಷ್ಟೋ ಉದಾಹರಣೆಗಳು ಇವೆ.

Shrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?

ತುಳಸಿ ಮಗು ಉಳಿಯತ್ತಾ?
ಈಗ ತುಳಸಿ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆ ಆಗಿಲ್ಲ, ಸಿಸೇರಿಯನ್‌ ಮಾಡಿ ಮಗು ಹೊರಗಡೆ ತೆಗೆಯಬೇಕು, ಮಗುವಿನ ಜೀವದ ಬಗ್ಗೆ ಏನೂ ಹೇಳೋಕೆ ಆಗೋದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಮಾತು ಕೇಳಿ ತುಳಸಿಗೆ ಶಾಕ್‌ ಆಗಿದೆ. ಅವಳು ಏನು ಮಾಡಬೇಕು ಅಂತ ಗೊತ್ತಾಗದೆ ಚಿಂತಾಕ್ರಾಂತಳಾಗಿದ್ದಾಳೆ.

ಮಗ ಅವಿನಾಶ್-ಪೂರ್ಣಿಮಾಗೆ ಮಗು ಇಲ್ಲ ಎಂದು ತುಳಸಿ ಕೊರಗುತ್ತಿದ್ದಳು. ಅದೇ ಟೈಮ್‌ಗೆ ಅವಳ ಹೊಟ್ಟೆಯಲ್ಲಿ ಮಗು ಇರೋದು ಕೂಡ ಗೊತ್ತಾಯ್ತು. ಆರಂಭದಲ್ಲಿ ಇದನ್ನು ಮಕ್ಕಳು ಹೇಗೆ ಸ್ವೀಕಾರ ಮಾಡ್ತಾರೆ ಎಂದು ತುಳಸಿ ಅಳುಕಿದ್ದಳು. ಆನಂತರದಲ್ಲಿ ಎಲ್ಲರೂ ಇದನ್ನು ಸಹಜವಾಗಿ ತಗೊಂಡರು. ಈ ಮಗುವನ್ನು ಪೂರ್ಣಿಗೆ ಕೊಡಬೇಕು ಅಂತ ತುಳಸಿ ಅಂದುಕೊಂಡಿದ್ದಾಳೆ. ಈ ಮಗುವನ್ನು ಪೂರ್ಣಿಗೆ ಕೊಟ್ಟು ಅವಳ ಒಡಲನ್ನು ತುಂಬಿಸಬೇಕು ಎಂದು ಕನಸು ಕಂಡಿದ್ದಳು. ಈಗ ಮಗು ಬದುಕಿ ಉಳಿದರೆ ಮಾತ್ರ ಪೂರ್ಣಿ ಒಡಲು ತುಂಬುವುದು. 

ಅಂತೂ ತುಳಸಿಗೆ ತುಂಬಿತು ಏಳು- ಛೀಮಾರಿ ಹಾಕಿದ ವೀಕ್ಷಕರು ಸೀಮಂತಕ್ಕೆ ರೆಡಿ! ಹೊಟ್ಟೆ ಮಾತ್ರ ಕಾಣೆ?

ಅಪಘಾತ ಮಾಡಿರೋ ಶಾರ್ವರಿ! 
ಶಾರ್ವರಿಯೇ ಕಾರ್‌ನಿಂದ ಸಿರಿ ತಂದೆ ಹಾಗೂ ದತ್ತನ ಆಕ್ಸಿಡೆಂಟ್‌ ಮಾಡಿದ್ದಳು. ಈ ಅಪಘಾತವನ್ನು ಅವಳು ಬೇರೆಯವರ ತಲೆ ಮೇಲೆ ಹಾಕುವ ಪ್ರಯತ್ನ ಮಾಡಿದ್ದಳು. ಆದರೆ ನಾನೇ ಈ ಅಪಘಾತ ಮಾಡಿದ್ದೇನೆ ಎಂದು ಶಾರ್ವರಿ ಮಗಳು ಭಾವಿಸಿದ್ದಳು. ಶಾರ್ವರಿ ಮಗಳಿಗೆ ಸಮಸ್ಯೆ ಆಗಬಾರದು ಎಂದು ಅಭಿ ಈ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು ಜೈಲಿಗೆ ಹೋಗಿದ್ದನು. ಅಭಿ ತಪ್ಪಿಲ್ಲ ಅಂತ ಗೊತ್ತಾಗಿ ಅವನೀಗ ಜೈಲಿನಿಂದ ಹೊರಗಡೆ ಬಂದಿದ್ದಾನೆ. ಇನ್ನೊಂದು ಕಡೆ ಮಾಧವ್‌ನನ್ನು ಅಭಿ ತಂದೆ ಎಂದು ಒಪ್ಪಿಕೊಂಡಿದ್ದಾನೆ, ಇನ್ನು ಮಾಧವ್‌ನ ಮಕ್ಕಳನ್ನು ಕೂಡ ತನ್ನ ಸಹೋದರರು ಎಂದು ಭಾವಿಸಿದ್ದಾನೆ.

ಮಾಧವ್-ಶಾರ್ವರಿ ಕುಟುಂಬ ಚೆನ್ನಾಗಿದೆ! 
ಈಗ ಇಡೀ ಕುಟುಂಬ ಒಂದಾಗಿದೆ. ಮಾಧವ್‌ನನ್ನು ಅವನ ಮಕ್ಕಳು ಕ್ಷಮಿಸಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಹೀಗಿರುವಾಗ ಶಾರ್ವರಿ ಮಾತ್ರ ಒಂದಲ್ಲ ಒಂದು ಅಪರಾಧಗಳನ್ನು ಮಾಡಿಕೊಂಡು ಬರುತ್ತಿದ್ದಾಳೆ. ಅವಳೇ ಈ ಅಪಘಾತ ಮಾಡಿದ್ದು ಎನ್ನೋದು ಎಲ್ಲರ ಮುಂದೆ ಬಯಲಾಗತ್ತಾ? ಶಾರ್ವರಿ ತಪ್ಪಿತಸ್ಥೆ ಅಂತ ಗೊತ್ತಾಗತ್ತಾ? ತನ್ನ ತಪ್ಪನ್ನು ಈ ಬಾರಿಯೂ ಮುಚ್ಚಿಟ್ಟುಕೊಳ್ಳಲು ಶಾರ್ವರಿ ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ನಿತ್ಯವೂ ಒಂದಲ್ಲ ಒಂದು ರೋಚಕತೆ ಎದುರಾಗುತ್ತಿದೆ. 

ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್​

ತುಳಸಿ ಹೊಟ್ಟೆಯೇ ಕಾಣೋದಿಲ್ಲ, ಹೆರಿಗೆ ಯಾವಾಗ ಆಗತ್ತೆ? ಒಂದಾದ ಮೇಲೆ ಒಂದು ಕಷ್ಟ ಯಾಕೆ ಬರತ್ತೆ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ತಿಳಿಸುತ್ತಿದ್ದಾರೆ. 

ಪಾತ್ರಧಾರಿಗಳು
ಮಾಧವ್‌ ಪಾತ್ರದಲ್ಲಿ ಅಜಿತ್‌ ಹಂದೆ, ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್, ತುಳಸಿ ಪಾತ್ರದಲ್ಲಿ ಸುಧಾರಾಣಿ, ಪೂರ್ಣಿ ಪಾತ್ರದಲ್ಲಿ ಲಾವಣ್ಯಾ ಭಾರದ್ವಾಜ್‌, ಅಭಿ ಪಾತ್ರದಲ್ಲಿ ದರ್ಶಿತ್‌ ಗೌಡ ಅವರು ನಟಿಸುತ್ತಿದ್ದಾರೆ.