ಶ್ರೀರಸ್ತು ಶುಭಮಸ್ತು ತಾರೆಯರಿಂದ ಭರ್ಜರಿ ಪಾರ್ಟಿ: ಹಳೆ ಶಾರ್ವರಿಗೆ ಒಂದೇ ಸಮನೆ ಬೈತಿರೋ ಅಭಿಮಾನಿಗಳು!
ಶ್ರೀರಸ್ತು ಶುಭಮಸ್ತು ತಾರೆಯರಿಂದ ಭರ್ಜರಿ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಳೆ ಶಾರ್ವರಿಗೆ ಒಂದೇ ಸಮನೆ ಅಭಿಮಾನಿಗಳು ಬೈತಿರೋದು ಯಾಕೆ?
ಸಾಮಾನ್ಯವಾಗಿ ಸೀರಿಯಲ್ಗಳಲ್ಲಿ ನಾಯಕಿ ಎಂದರೆ ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳು ಹಾಗೂ ಮನೆಯಲ್ಲಿರುವ ಎಲ್ಲರ ಟಾರ್ಚರ್ಗಳನ್ನು ಸಹಿಸಿಕೊಂಡವಳು ಎಂದೇ ಬಿಂಬಿಸಲಾಗುತ್ತದೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಆಕೆ ಅಳುಮುಂಜಿಯೇ, ಏಕೆಂದರೆ ಅಷ್ಟೊಂದು ನೋವಿನ ಭಾರವನ್ನು ಹೊತ್ತು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲವಲ್ಲ! ಇದೇ ಕಾರಣಕ್ಕೆ ಸೀರಿಯಲ್ ಪ್ರೇಮಿಗಳಿಗೆ ಅದರಲ್ಲಿಯೂ ಧಾರಾವಾಹಿಗಳನ್ನು ಹೆಚ್ಚಾಗಿ ನೋಡುವ ಮಹಿಳೆಯರಿಗೆ ಯಾಕೋ ತುಂಬಾ ಬೇಸರ. ಆದರೆ ನಾಯಕಿ ವಿಲನ್ಗೆ ಸೆಡ್ಡು ಹೊಡೆತು ಎತ್ತರಕ್ಕೆ ಬೆಳೆದು ನಿಂತಾಗ, ಹೆಜ್ಜೆ ಹೆಜ್ಜೆಗೂ ಆಕೆಯ ಹೆಡೆಮುರಿ ಕಟ್ಟುತ್ತಲೇ ಹೋದಾಗ ಅಂಥ ಸೀರಿಯಲ್ಗಳನ್ನು ನೋಡುವುದೇ ರೋಚಕ. ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್ ಕೂಡ ಈಗ ವೀಕ್ಷಕರಿಗೆ ಅಚ್ಚುಮೆಚ್ಚಾಗಿದೆ. ಇದೊಂದು ರೀತಿಯಲ್ಲಿ ಭಿನ್ನ ಕಥೆ. ತುಳಸಿ ಎಂಬ ವಿಧವೆ, ಮದುವೆಯಾದ ಮಕ್ಕಳ ತಾಯಿ ಇನ್ನೊಂದು ಮದ್ವೆಯಾಗಿ ಬೇರೊಬ್ಬರ ಮನೆಗೆ ಬಂದಾಗ ಅನುಭವಿಸುವ ನೋವು. ಇದರಲ್ಲಿ ಗಂಡ ಸೇರಿದಂತೆ ಇನ್ನು ಸದಸ್ಯರು ಈಕೆಯನ್ನು ತುಂಬಾ ಇಷ್ಟಪಟ್ಟರೆ ವಿಲನ್ಗಳ ಕೈ ಮೇಲಾಗುತ್ತಿತ್ತು. ಇದರಿಂದ ತುಳಸಿಯ ಗೋಳು ನೋಡಲು ಆಗ್ತಿಲ್ಲ ಎನ್ನುತ್ತಿದ್ದರು. ಆದರೆ ಈಗ ಸೀನೇ ಚೇಂಜ್ ಆಗಿದೆ. ತುಳಸಿಯನ್ನು ಕಂಡು ಎಲ್ಲರೂ ಇಷ್ಟಪಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ 400 ಕಂತುಗಳನ್ನು ಪೂರೈಸಿದ್ದ ಶ್ರೀರಸ್ತು ಶುಭಮಸ್ತು ತಂಡ ಭರ್ಜರಿ ಪಾರ್ಟಿ ಮಾಡಿದೆ. ಇದರ ವಿಡಿಯೋ ಅನ್ನು ವಿಲನ್ ದೀಪಿಕಾ, ಅಂದರೆ ದರ್ಶಿನಿ ಡೆಲ್ಟಾ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸೀರಿಯಲ್ನ ಎಲ್ಲರನ್ನೂ ನೋಡಬಹುದು. ಆದರೆ ಎಲ್ಲರ ಗಮನ ಸೆಳೆದಿರುವುದು ಹಳೆಯ ಶಾರ್ವರಿ ಅಂದರೆ ನೇತ್ರಾ ಜಾಧವ್. ಶಾರ್ವರಿ ಎಂದರೆ ಸಾಕು, ಸೀರಿಯಲ್ ಪ್ರಿಯರ ಮನದಾಳದಲ್ಲಿ ಮೂಡುವ ಚಿತ್ರಣ ಒಂದೇ. ಅದು ಶ್ರೀರಸ್ತು ಶುಭಮಸ್ತು ಸೀರಿಯಲ್ನ ವಿಲನ್. ತಮ್ಮ ಕಣ್ಣುಗಳಿಂದಲೇ ಅಭಿಯನ ಮಾಡುವ ಮುದ್ದು ಮೊಗದ ಸುಂದರಿ ಶಾರ್ವರಿ ಈಗ ಈ ಸೀರಿಯಲ್ನಿಂದ ಹೊರಕ್ಕೆ ಬಂದು ಸೀರಿಯಲ್ ಪ್ರೇಮಿಗಳಿಗೆ ಶಾಕ್ ನೀಡಿದ್ದರು. ಶಾರ್ವರಿ ಪಾತ್ರಕ್ಕೆ ಹೊಸ ಎಂಟ್ರಿ ಆಗಿದೆ. ಆದರೆ ಒಂದು ಪಾತ್ರದಲ್ಲಿ ಒಬ್ಬರನ್ನೇ ಬಹು ತಿಂಗಳು, ವರ್ಷ ನೋಡುವ ಸೀರಿಯಲ್ ಪ್ರೇಮಿಗಳಿಗೆ ಅದೇ ಪಾತ್ರಕ್ಕೆ ಹೊಸ ಮುಖವನ್ನು ಕಲ್ಪನೆ ಮಾಡಿಕೊಳ್ಳುವುದು ಬಹು ಕಷ್ಟ. ಅದರಲ್ಲಿಯೂ ಯಾರಿಗೂ ಡೌಟ್ ಬರದಂತೆ, ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಕಣ್ಣಿನಲ್ಲಿಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಅದಕ್ಕಾಗಿಯೇ ಇವರು ಸೀರಿಯಲ್ನಿಂದ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ. ಮತ್ತೊಮ್ಮೆ ಅವರನ್ನು ವಾಪಸ್ ಕರೆದುಕೊಂಡು ಬರುವಂತೆಯೂ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಕೂಡ ಹಾಕುತ್ತಿದ್ದರು.
ರೀಲ್ ವಿಲನ್ಗಳಿಂದ ಬೊಂಬಾಟ್ ರೀಲ್ಸ್... ನೀವೇ ನಮ್ ರಿಯಲ್ ಹೀರೋಯಿನ್ಗಳು ಎಂದ ಫ್ಯಾನ್ಸ್
ಇದೀಗ ಮತ್ತದೇ ಕಮೆಂಟ್ಸ್ಗಳ ಸುರಿಮಳೆಯಾಗುತ್ತಿದೆ. ಶಾರ್ವರಿಯ ಪಾತ್ರಕ್ಕೆ ಸ್ವಪ್ನಾ ದೀಕ್ಷಿತ್ ಅವರು ಬಂದಿದ್ದಾರೆ. ಅವರು ಕೂಡ ಅದ್ಭುತ ಕಲಾವಿದೆಯೇ. ಆದರೆ ಸೀರಿಯಲ್ನ ಬಹಳಷ್ಟು ವೀಕ್ಷಕರಿಗೆ ನೇತ್ರಾ ಅವರೇ ಬೇಕಂತೆ. ಈ ಸೀರಿಯಲ್ ಪ್ರೊಮೋ ಹಾಕಿದಾಗಲೆಲ್ಲವೂ ನೇತ್ರಾ ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಕಮೆಂಟಿಗರು ಹೇಳುತ್ತಲೇ ಇರುತ್ತಾರೆ. ನೇತ್ರಾ ಅವರು, ಈ ಹಿಂದೆ ಸುಧಾರಾಣಿ ಅವರ ಜೊತೆ ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಂತರ ಅವರದ್ದೇ ಜೊತೆ ನೆಗಟಿವ್ ರೋಲ್ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು. ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಮಕ್ಕಳಿಗೆ ಮದುವೆಯಾಗಿದ್ದರೆ ರಿಯಲ್ ಲೈಫ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸೀರಿಯಲ್ನ 400 ಹಬ್ಬದ ಸಂಭ್ರಮದಲ್ಲಿ ಸೀರಿಯಲ್ನ ಎಲ್ಲಾ ನಟಿ-ನಟರು ಇದ್ದರೂ ಸೀರಿಯಲ್ ಪ್ರೇಮಿಗಳು ನೇತ್ರಾ ಅವರನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಬಹುಶಃ ಈ ಶೂಟಿಂಗ್ ನೇತ್ರಾ ಅವರು ಸೀರಿಯಲ್ನಲ್ಲಿ ಇದ್ದ ಸಂದರ್ಭದಲ್ಲಿಯೇ ಮಾಡಿದ್ದು ಎಂದು ತೋರುತ್ತಿದೆ. ಅದಕ್ಕಾಗಿ 400ರ ಸಂಭ್ರಮದಲ್ಲಿ ನೇತ್ರಾ ಕಾಣಿಸಿಕೊಂಡಿದ್ದು ಸ್ವಪ್ನಾ ಕಾಣಿಸುತ್ತಿಲ್ಲ. ಆದರೆ ನೇತ್ರಾ ಅವರೇ ತಮಗೆ ಬೇಕು ಎಂದು ಅಭಿಮಾನಿಗಳು ಪಟ್ಟುಹಿಡಿಯುತ್ತಿದ್ದಾರೆ.
ಶ್ರೀರಸ್ತು-ಶುಭಮಸ್ತು ಸೀರಿಯಲ್ನಿಂದ ಔಟ್ ಆಗುತ್ತಿದ್ದಂತೆಯೇ ಯಕ್ಷಗಾನದಲ್ಲಿ 'ಶಾರ್ವರಿ' ಮಿಂಚಿಂಗ್