ರೀಲ್ ವಿಲನ್ಗಳಿಂದ ಬೊಂಬಾಟ್ ರೀಲ್ಸ್... ನೀವೇ ನಮ್ ರಿಯಲ್ ಹೀರೋಯಿನ್ಗಳು ಎಂದ ಫ್ಯಾನ್ಸ್
ಶ್ರೀರಸ್ತು ಶುಭಮಸ್ತು ಸೀರಿಯಲ್ ವಿಲನ್ಗಳಾದ ದೀಪಿಕಾ ಮತ್ತು ಸಂಧ್ಯಾ ಸಕತ್ ರೀಲ್ಸ್ ಮಾಡಿದ್ದು, ಫ್ಯಾನ್ಸ್ ಏನು ಹೇಳುತ್ತಿದ್ದಾರೆ ನೋಡಿ...
ದೀಪಿಕಾ ಮತ್ತು ಸಂಧ್ಯಾ ಹೆಸರು ಕೇಳಿದರೆ ಸಾಕು, ಸೀರಿಯಲ್ ಪ್ರಿಯರಿಗೆ ನೆನಪಾಗುವುದು ಶ್ರೀರಸ್ತು ಶುಭಮಸ್ತು ಸೀರಿಯಲ್ನ ವಿಲನ್ಗಳು. ಒಬ್ಬಳು ತುಳಸಿಯ ಸೊಸೆಯಾದ್ರೆ ಇನ್ನೊಬ್ಬಳು ತುಳಸಿಯ ಮಗಳೇ. ಇಲ್ಲಿ ದೀಪಿಕಾ ಪಕ್ಕಾ ವಿಲನ್ ಆದ್ರೆ, ಸಂಧ್ಯಾ ವಿಲನ್ ಅಲ್ಲದಿದ್ರೂ ಒಂದು ರೀತಿಯಲ್ಲಿ ನೆಗೆಟಿವ್ ರೋಲ್ ಇರೋ ಕಾರಣ ತುಳಸಿ ಪಾಲಿಗೆ ಇವಳು ವಿಲನ್ನೇ. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಾಳೆ. ಅದೇ ಸಂಧ್ಯಾ ದುಡ್ಡಿನ ಆಸೆಬುರುಕಿ. ದುಡ್ಡು ಸಿಗತ್ತೆ ಎಂದ್ರೆ ಯಾರಿಗೆ ಏನೇ ಆದ್ರೂ ಪರವಾಗಿಲ್ಲ. ಅದರ ಹಿಂದೆ ಓಡಲು ರೆಡಿ.
ಇದೀಗ ಶ್ರೀರಸ್ತು ಶುಭಮಸ್ತುವಿನ ಈ ಇಬ್ಬರು ವಿಲನ್ಗಳು ಬೊಂಬಾಟ್ ರೀಲ್ಸ್ ಮಾಡಿದ್ದಾರೆ. ಇವರ ರೀಲ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದು, ನೀವು ರಿಯಲ್ ಹೀರೋಯಿನ್ಗಳು ಎನ್ನುತ್ತಿದ್ದಾರೆ. ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಬಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಕೆಂಪು ಸೀರೆಯಲ್ಲಿ ನೃತ್ಯದಿಂದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!
ಓಪನ್ ದ ಬಾಟಲ್ ಹಾಡಿಗೆ ಪುನೀತ್ ರಾಜ್ ಕುಮಾರ್ಗೆ ಜಾನಿ ಮಾಸ್ಟರ್ ಅವರಿಗೆ ಅಸಿಸ್ಟಂಟ್ ಕೊರಿಯೋಗ್ರಫಿ ಮಾಡಿದ ದರ್ಶಿನಿ, ನನ್ನ ಕೊರಿಯೋಗ್ರಫಿ ಮೇಲೆ ನನಗಿಂತ ಹೆಚ್ಚಿನ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಆಶೀರ್ವಾದದಿಂದಲೇ ನಾನು ಇವತ್ತು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳ್ತಾರೆ. ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಇನ್ನು ಸಂಧ್ಯಾ ಪಾತ್ರಧಾರಿಯ ರಿಯಲ್ ಹೆಸರು ದೀಪಾ ಕಟ್ಟಿಮನೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿರುವ ಇವರು ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಈ ಕೆಲಸ ಮಾಡುತ್ತಲೇ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಶ್ರೀರಸ್ತು ಶುಭಮಸ್ತುವಿನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶಿವಮೊಗ್ಗ ಜಿಲ್ಲೆಯವರು. ಪಕ್ಕ ಮಲೆನಾಡ ಹುಡುಗಿಯಾದ ಇವರು ನೆಲೆಸಿರುವುದು ಬೆಂಗಳೂರಿನಲ್ಲಿ. ರಂಗಭೂಮಿಯಲ್ಲಿ ಬಹಳ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ನಟನೆಯನ್ನಷ್ಟೇ ವೃತ್ತಿಯನ್ನಾಗಿಸದೆ, ಇಂಜಿನಿಯರ್ ಕೆಲಸದಲ್ಲಿ ಬ್ಯುಸಿಯಾಗಿರುವ ಇವರು ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ರಕ್ಷಿತ್ ಜೊತೆ ದಾಂಪತ್ಯ ಜೀವನಕ್ಕೆ ಇವರು ಕಾಲಿರಿಸಿದ್ದಾರೆ. ರಕ್ಷಿತ್ ಕೂಡ ಸಾಫ್ಟ್‌ವೇರ್ ಇಂಜಿನಿಯರ್. ಇಬ್ಬರೂ ಒಂದೇ ಕಂಪನಿಯಲ್ಲಿ ಪ್ಲೇಸ್ಮೆಂಟ್ ಆದ ನಂತರ ಐದು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿ ಬಳಿಕ ಉಜಿರೆಯಲ್ಲಿ ಮದುವೆಯಾಗಿದ್ದಾರೆ.
ಸತ್ಯ ಸೀರಿಯಲ್ ದಿವ್ಯಾಗೆ ಹುಟ್ಟುಹಬ್ಬವಿಂದು: ಕಮೆಂಟ್ಸ್ ನೋಡಿ ಅಳ್ತಿದ್ದ ನಟಿಯ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ...