ಶ್ರೀರಸ್ತು ಶುಭಮಸ್ತು ಸಂಧ್ಯಾ ಜೊತೆ ನಿಜಕ್ಕೂ ವಿಲನ್​ ಶಾರ್ವರಿನಾ? ಪ್ರೀತಿಯೇ ನನ್ನುಸಿರು ಹಾಡಿಗೆ ಭರ್ಜರಿ ರೀಲ್ಸ್​

ಪ್ರೀತಿಯೇ ನನ್ನುಸಿರು ಹಾಡಿಗೆ ಶ್ರೀರಸ್ತು ಶುಭಮಸ್ತು ಸಂಧ್ಯಾ ಮತ್ತು ವಿಲನ್​ ಶಾರ್ವರಿ ರೀಲ್ಸ್​. ನೆಟ್ಟಿಗರು ಏನಂದ್ರು ನೋಡಿ
 

Shreerastu Shubhamastu Sandhya and Villan Sharvari Reels for the song Preetiye Nannusiru suc

ಶ್ರೀರಸ್ತು ಶುಭಮಸ್ತು ಸೀರಿಯಲ್​ ಈಗ ಸಕತ್​ ಟ್ವಿಸ್ಟ್​ ತೆಗೆದುಕೊಂಡಿದೆ. ತುಳಸಿಯ ವಿರೋಧ ಇದ್ದವರು ಎಲ್ಲರೂ ತುಳಸಿಯ ಪರವಾಗಿದ್ದಾರೆ. ಇದೀಗ ವಿಲನ್​ ಶಾರ್ವರಿ ಮಾತ್ರ ಬೇರೆಯಾಗಿದ್ದಾಳೆ. ಇವಳಿಗೆ ಸೊಸೆ ದೀಪಿಕಾ ಸಾಥ್​ ನೀಡುತ್ತಿದ್ದರೆ, ಇನ್ನೊಂದೆಡೆ, ದುಡ್ಡಿನ ಆಸೆಗೆ ತುಳಸಿಯ ಮಗಳ ಮಾವ ಸಾಥ್​ ಕೊಡುತ್ತಿದ್ದಾನೆ. ಆದರೆ ಶಾರ್ವರಿಯ ಆಟಕ್ಕೆ ಫುಲ್​ಸ್ಟಾಪ್​ ಇಡಲು ಖುದ್ದು ಶಾರ್ವರಿ ಪತಿಯೇ ತುಳಸಿಯ ಕೈಜೋಡಿಸಿದ್ದಾನೆ. ಒಟ್ಟಿನಲ್ಲಿ ಶಾರ್ವರಿ ಒಬ್ಬಳೇ ಈಗಿರೋ ಟಾರ್ಗೆಟ್​. ಅದು ಮುಗಿದರೆ ಸೀರಿಯಲ್​ ಮುಗಿದಂತೆ. ಇದಿಷ್ಟು ಸೀರಿಯಲ್​ ಕಥೆಯಾದರೆ, ಇದೀಗ ತುಳಸಿಯ ಮಗಳು ಸಂಧ್ಯಾ ಮತ್ತು ವಿಲನ್ ಶಾರ್ವರಿ ಪ್ರೀತಿಯೇ ನನ್ನುಸಿರು ಹಾಡಿಗೆ ಭರ್ಜರಿ ರೀಲ್ಸ್​ ಮಾಡಿದ್ದಾರೆ.

ಸಂಧ್ಯಾ ಪಾತ್ರಧಾರಿಯಾಗಿರುವ ದೀಪಾ ಕಟ್ಟೆ ಈ ವಿಡಿಯೋದಲ್ಲಿಯೂ ಸೀರಿಯಲ್​ಗಿಂತ ಮಾಡರ್ನ್​ ಆಗಿ ಕಾಣಿಸಿದರೂ, ಅವರ ಜೊತೆ ಇರುವುದು ಶಾರ್ವರಿ ಪಾತ್ರಧಾರಿ ಎಂದು ತಿಳಿಯುವುದೇ ಕಷ್ಟ. ಏಕೆಂದರೆ ಸದಾ ಸೀರೆಯಲ್ಲಿ, ವಿಲನ್​ ರೂಪದಲ್ಲಿ ಕಾಣುವ ಶಾರ್ವರಿಯ ಲುಕ್​ ಇಲ್ಲಿ ಫುಲ್​ ಚೇಂಜ್​ ಆಗಿದೆ. ಅಂದಹಾಗೆ ಶಾರ್ವರಿ ಪಾತ್ರಧಾರಿಯ ಹೆಸರು ಸಪ್ನಾ ದೀಕ್ಷಿತ್​. ಈಗ ದೀಪಾ ಮತ್ತು ಸಪ್ನಾ ಅವರು ರೀಲ್ಸ್​ ಮಾಡಿದ್ದು ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಕಮೆಂಟಿಗರಲ್ಲಿ ಹೆಚ್ಚಿನವರು ನೀವು ಶಾರ್ವರಿ ಪಾತ್ರಧಾರಿ ಎಂದು ತಿಳಿದುಕೊಳ್ಳಲು ಸಾಧ್ಯವೇ ಆಗ್ತಿಲ್ಲ ಎಂದೇ  ಹೇಳುತ್ತಿದ್ದಾರೆ. 

ರೊಮಾಂಟಿಕ್‌ ಸಾಂಗ್‌ಗೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಅಭಿ-ದೀಪಿಕಾ ಜೋಡಿ: ವಿಡಿಯೋ ವೈರಲ್‌

ಇನ್ನು ದೀಪಾ ಕಟ್ಟೆ ಕುರಿತು ಹೇಳುವುದಾದರೆ, ಮಲೆನಾಡ ಬೆಡಗಿ ಇವರು. ಇವರು ಮೂಲತಃ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ (IT company) ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ, ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಭವನದಲ್ಲಿ ದೀಪಾ ಕಟ್ಟೆ ಅವರು ರಕ್ಷಿತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಇವರು ಈ ಹಿಂದೆ ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. 

ಇನ್ನು ಶಾರ್ವರಿ ಉರ್ಫ್​ ಸಪ್ನಾ ಕುರಿತು ಹೇಳುವುದಾದರೆ, ಇವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ಎಂಟ್ರಿ ಕೊಟ್ಟವರು.  ಇವರ ಮೊದಲ ಸೀರಿಯಲ್​ ಪ್ರಾಯಶ್ಚಿತ ಧಾರಾವಾಹಿಯಲ್ಲಿ. ತದ ನಂತರ ಪಾ.ಪ ಪಾಂಡು, ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾಂಡುರಂಗ ವಿಠಲ, ದಂಡ ಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ, ಮಾಂಗಲ್ಯ, ಪುರುಷೋತ್ತಮ, ಪದ್ಮಾವತಿ ಸೇರಿದಂತೆ ಎಪ್ಪತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬೇರೆ ಭಾಷೆಗಳ ಸೀರಿಯಲ್​ಗಳಲ್ಲಿಯೂ ನಟಿಸಿರುವ ಅವರು, ಕೆಲವು ಸಿನಿಮಾಗಳನ್ನೂ ಮಾಡಿದ್ದಾರೆ.  ರನ್ನ, ರಂಗಿತರಂಗ, ಕೃಷ್ಣ ರುಕ್ಕು, ನಿಜ,ಪ್ರೀತಿಯ ಲೋಕ, ಶಿವಲಿಂಗ, ಭರ್ಜರಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಿನವುಗಳಲ್ಲಿ ಇವರದ್ದು ಪೋಷಕ ಪಾತ್ರ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಒಂದೇ ದಿನದಲ್ಲಿ ಮುಕ್ತಾಯ! ಏನಿದು ವೀಕ್ಷಕರ ಕಮಾಲ್‌?
 

Latest Videos
Follow Us:
Download App:
  • android
  • ios