ಶ್ರೀರಸ್ತು ಶುಭಮಸ್ತು ಸೀರಿಯಲ್‌ ಒಂದೇ ದಿನದಲ್ಲಿ ಮುಕ್ತಾಯ! ಏನಿದು ವೀಕ್ಷಕರ ಕಮಾಲ್‌?

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಕುತೂಹಲದ ಘಟ್ಟ ತಲುಪಿದೆ. ಆದರೆ ಈ ಸೀರಿಯಲ್‌ ಒಂದೇ ದಿನದಲ್ಲಿ ಮುಗಿಸುವ ಪ್ಲ್ಯಾನ್‌ ಹೇಳ್ತಿದ್ದಾರೆ ವೀಕ್ಷಕರು. ಏನದು? 
 

netizens  direction to finish Shreerastu  Shubhamastu serial  in a single day suc

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ತನ್ನ ಅಕ್ಕನ ಸಾವಿಗೆ ಮಾಧವ್‌ನೇ ಕಾರಣ ಎನ್ನುವುದು ಶಾರ್ವರಿ ಆರೋಪ. ಆದರೆ ತನ್ನ ಪತಿ ಹೀಗೆ ಮೋಸ ಮಾಡಲು ಸಾಧ್ಯವಿಲ್ಲ, ಅದರಲ್ಲೇನೋ ಆಗಬಾರದ್ದು ಆಗಿದೆ ಎಂದು ನಂಬಿದವಳು ತುಳಸಿ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಈಗ ಇದೇ ವಿಷಯದ ಬಗ್ಗೆ ಈ ಇಬ್ಬರ ನಡುವೆ ಮಾತುಕತೆ ಆಗಿದೆ.

ಆದರೆ ಈ ಮಾತುಕತೆ ಆಗುತ್ತಿದ್ದಂತೆಯೇ ಒಂದೇ ದಿನದಲ್ಲಿ ಸೀರಿಯಲ್‌ ಮುಗಿಸಿಬಿಡುವ ನಿರ್ದೇಶನ ಮಾಡುತ್ತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ, ಒಂದೆರಡು ಗಂಟೆಗಳಲ್ಲಿ ಹೇಳುವ ಕಥೆಯನ್ನು ಐದಾರು ವರ್ಷ ಎಳೆಯುವುದಕ್ಕೇ ಧಾರಾವಾಹಿ ಎಂದು ಹೇಳುವುದು ಎನ್ನುವುದು ಹೊಸ ವಿಷಯವೇನಲ್ಲ. ಇರುವ ಚಿಕ್ಕಕಥೆಯನ್ನು ಟಿಆರ್‍‌ಪಿ ಹೆಚ್ಚಾಗುತ್ತಿದ್ದಂತೆಯೇ ರಬ್ಬರ್‍‌ನಂತೆ ಎಳೆದೂ ಎಳೆದೂ ಬೇಕಾಗಿರುವ, ಬೇಡದ್ದ ಎಲ್ಲಾ ಸನ್ನಿವೇಶಗಳನ್ನು ಆಕಥೆಯೊಳಗೆ ತುರುಕಿ, ತಮಗೆ ಬೇಕಿರುವ ಪಾತ್ರಗಳನ್ನು ಅಚಾನಕ್‌ ಸೃಷ್ಟಿ ಮಾಡುವ ತಾಕತ್ತು ನಿರ್ದೇಶಕರಿಗೆ ಇರುತ್ತದೆ. ಅದನ್ನು ಬೈಯುತ್ತಲೇ ಪ್ರತಿನಿತ್ಯವೂ ಸೀರಿಯಲ್‌ ನೋಡುವ ದೊಡ್ಡ ವರ್ಗವೇ ಇದೆ ಎನ್ನುವುದೂ ಸುಳ್ಳಲ್ಲ. ಆದರೆ ಕಥೆಗಳು ಹೀಗಿರಬೇಕಿತ್ತು. ಬೇಗನೇ ಮುಗಿಸಬಹುದಿತ್ತು ಎಂದೆಲ್ಲಾ ಕಮೆಂಟ್‌ಗಳೂ ಇದೇ ವೇಳೆ ನಡೆಯುತ್ತಲೇ ಇರುತ್ತವೆ.

ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್‌ ಟೂರ್ ವಿಡಿಯೋ ವೈರಲ್

ಅದರಲ್ಲಿಯೂ ಸೋಷಿಯಲ್‌ ಮೀಡಿಯಾಗಳಲ್ಲಿ ಈಗ ಪ್ರೊಮೋ ರಿಲೀಸ್‌ ಆಗುತ್ತಿದ್ದಂತೆಯೇ ನೆಟ್ಟಿಗರೂ ನಿರ್ದೇಶಕರಾಗುತ್ತಿದ್ದಾರೆ. ಅದೇ ರೀತಿ ಈಗ ತುಳಸಿ ಮತ್ತು ಶಾರ್ವರಿ ನಡುವಿನ ಈ ಸಂಭಾಷಣೆ ಬಳಿಕ ಒಂದೇ ದಿನದಲ್ಲಿ ಸೀರಿಯಲ್‌ ಮುಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನೆಂದರೆ, ಶಾರ್ವರಿ ಇಡೀ ಕುಟುಂಬವನ್ನು ಸರ್ವನಾಶ ಮಾಡುವುದಾಗಿ ಹೇಳುತ್ತಿದ್ದಾಳೆ. ತುಳಸಿ ಕೈಯಲ್ಲಿ ಮೊಬೈಲ್‌ ಇರುವುದು ಯಾಕೆ, ಅದರಲ್ಲಿ ರೆಕಾರ್ಡ್ ಮಾಡಿಕೊಂಡು ಮನೆಯ ಮಂದಿಯ ಮುಂದೆ ಪ್ಲೇ ಮಾಡಿದ್ರೆ ಅಲ್ಲೇ ಲಾಟರಿ, ಅಲ್ಲೇ ಡ್ರಾ ಆಗಿ ಹೋಗ್ತಿತ್ತಲ್ಲ. ಐದಾರು ವರ್ಷ ಚ್ಯೂಯಿಂಗ್‌ ಗಮ್‌ನಂತೆ ಕಥೆ ಎಳೆಯುವುದೇ ಬೇಕಿರಲಿಲ್ಲ ಎಂದು ಹೇಳುತ್ತಿದ್ದಾರೆ ನೆಟ್ಟಿಗರು!

ಇದೊಂದೇ ಸೀರಿಯಲ್‌ ಅಲ್ಲ, ಸಾಮಾನ್ಯವಾಗಿ ಎಲ್ಲಾ ಸೀರಿಯಲ್‌ಗಳಲ್ಲಿಯೂ ಹೀಗೆ ಅಲ್ವಾ? ವಿಲನ್‌ ಮತ್ತು ನಾಯಕಿ ನಡುವೆ ಸಂಭಾಷಣೆ ನಡೆಯುತ್ತದೆ. ಇಬ್ಬರ ಕೈಯಲ್ಲಿಯೂ ಮೊಬೈಲ್‌ ಫೋನ್‌ ಇರುತ್ತದೆ. ಮುಂದೆ ಇರುವವರ ಅರಿವಿಗೆ ಬಾರದೇ ರೆಕಾರ್ಡ್ ಮಾಡುವುದು ಈಗೇನೂ ಕಷ್ಟವೇ ಅಲ್ಲ. ಹಾಗಿದ್ದ ಮೇಲೆ ರೆಕಾರ್ಡ್ ಮಾಡದೇ ಯಾಕೆ ಸೀರಿಯಲ್‌ ಎಳೆಯುತ್ತೀರಾ ಎಂಬ ಪ್ರಶ್ನೆ ಮಾಡುವುದು ಕಾಮನ್‌ ಆಗಿದೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿಯೂ ಹಾಗೆಯೇ ಮಾಡಿ ಒಂದೆರಡು ದಿನಗಳಲ್ಲಿ ಸೀರಿಯಲ್‌ ಮುಗಿಸಿ ಎನ್ನುತ್ತಿದ್ದಾರೆ ನೆಟ್ಟಿಗರು! ಆದರೆ ಅದು ಹಾಗಾಗಲ್ಲ ಎನ್ನುವುದು ಅವರಿಗೂ ಗೊತ್ತು, ನಿರ್ದೇಶಕರಿಗೂ ಗೊತ್ತು! 

ಸ್ನೇಹಾ ಸತ್ತದ್ದಕ್ಕೆ ನಗಬೇಕಿತ್ತು, ಆದ್ರೆ ಚಿತೆ ನೋಡಿ ಅಪ್ಪನ ನೆನಪಾಗೋಯ್ತು... ಕಣ್ಣೀರಾದ ಪುಟ್ಟಕ್ಕನ ಮಕ್ಕಳು ವಿಲನ್‌ ರಾಧಾ!

Latest Videos
Follow Us:
Download App:
  • android
  • ios