ರೊಮಾಂಟಿಕ್ ಸಾಂಗ್‌ಗೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಅಭಿ-ದೀಪಿಕಾ ಜೋಡಿ: ವಿಡಿಯೋ ವೈರಲ್
ಶ್ರೀರಸ್ತು ಶುಭಮಸ್ತು ಅಭಿ-ದೀಪಿಕಾ ಜೋಡಿ ಸಕತ್ ರೊಮಾನ್ಸ್ ಮಾಡಿದ್ದು, ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಶ್ರೀರಸ್ತು ಶುಭಮಸ್ತು ಅಭಿ ಈಗ ವಿಲನ್ ರೂಪ ಬಿಟ್ಟು ಹೀರೋ ಆಗಿದ್ದಾನೆ. ದೀಪಿಕಾ ಮಾತ್ರ ಇನ್ನೂ ವಿಲನ್ ರೂಪದಲ್ಲಿಯೇ ಇದ್ದಾಳೆ. ಅಮ್ಮ ತುಳಸಿಯನ್ನು ಇಷ್ಟು ದಿನಗಳವರೆಗೆ ಕಂಡರೆ ಕೆಂಡಾಮಂಡಲ ಆಗುತ್ತಿದ್ದ ಅಭಿಗೆ ಈಗ ತುಳಸಿ ಎಂದರೆ ಇನ್ನಿಲ್ಲದ ಪ್ರೀತಿ. ತುಳಸಿಗಾಗಿ ಪತ್ನಿ ದೀಪಿಕಾಳನ್ನೇ ಎದುರು ಹಾಕಿಕೊಳ್ಳುವಷ್ಟರ ಮಟ್ಟಿಗೆ ಚೇಂಜ್ ಆಗಿದ್ದಾನೆ ಅಭಿ. ನಿರ್ದೇಶಕರು ಮನಸ್ಸು ಮಾಡಿದ್ರೆ ಏನೆಲ್ಲಾ ಮಾಡಬಹುದಪ್ಪಾ ಎಂದು ನೆಟ್ಟಿಗರು ಟ್ರೋಲ್ ಮಾಡುವಷ್ಟರ ಮಟ್ಟಿಗೆ ದಿಢೀರ್ ಬದಲಾಗಿದ್ದಾನೆ ಅಭಿ. ಆದರೆ ದೀಪಿಕಾ ಮಾತ್ರ ಕುತಂತ್ರಿ ಅಪ್ಪನ ಪಡಿಯಚ್ಚು. ಅದಕ್ಕೆ ಅತ್ತೆ ಶಾರ್ವರಿ ಬೇರೆ ಸಾಥ್. ಮನೆಯವರನ್ನು ಹೇಗೆ ಅವಮಾನಿಸಬೇಕು, ಎಲ್ಲರನ್ನೂ ಹೇಗೆ ನಿರ್ನಾಮ ಮಾಡಬೇಕು ಎಂದು ಶಾರ್ವರಿ ಸ್ಕೆಚ್ ಹಾಕುತ್ತಿದ್ದರೆ, ಅದರ ಅರಿವು ಇಲ್ಲದೇ ಶಾರ್ವರಿಗೆ ಸಾಥ್ ಕೊಡುತ್ತಿದ್ದಾಳೆ ದೀಪಿಕಾ,
ಇಂತಿಪ್ಪ ಅಭಿ ಮತ್ತು ದೀಪಿಕಾ ಜೋಡಿ ಈಗ ಭರ್ಜರಿ ರೀಲ್ಸ್ ಮಾಡಿದೆ. ಪ್ರೇಮದ ಕಿಚ್ಚು ಹೊತ್ತಿಸಿದ್ದು, ಇದನ್ನು ದೀಪಿಕಾ ಪಾತ್ರಧಾರಿ ದರ್ಶಿನಿ ಡೆಲ್ಟಾ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ಅಭಿ ಪಾತ್ರಧಾರಿಯ ಹೆಸರು ನಕುಲ್ ಶರ್ಮಾ.
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್ ಗರಂ...
ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್