"ಶ್ರೀರಸ್ತು ಶುಭಮಸ್ತು" ಧಾರಾವಾಹಿಯಲ್ಲಿ ಪೂರ್ಣಿ ಮತ್ತು ಅವಿನಾಶ್‌ಗೆ ಮಗು ದತ್ತು ಬಂದಿದೆ. ಪೂರ್ಣಿ ತನ್ನ ನಿಜ ಜೀವನದ ಪತಿ ಶಶಿ ಹೆಗಡೆಯೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಈ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಶಾರ್ವರಿಯ ದುಷ್ಕೃತ್ಯಗಳು ಬಯಲಾಗುವ ಹಂತದಲ್ಲಿದೆ. ಶೀಘ್ರದಲ್ಲೇ ಧಾರಾವಾಹಿ ಅಂತ್ಯಗೊಳ್ಳುವ ಸೂಚನೆಗಳಿವೆ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಪೂರ್ಣಿ ಕೈಗೆ ಮಗು ಬಂದಿದೆ. ಳಸಿ ಮತ್ತು ಮಾಧವ್​ ತಮ್ಮ ಮಗುವನ್ನು ಪೂರ್ಣಿ ಮತ್ತು ಅವಿನಾಶ್​ಗೆ ದತ್ತು ನೀಡಿದ್ದಾರೆ. ದತ್ತು ಪ್ರಕ್ರಿಯೆ ಮುಗಿಸಿ ಅದರ ದಾಖಲೆಗಳನ್ನು ನೀಡಿದ್ದಾರೆ. ಮಗುವಿನ ನಾಮಕರಣದ ದಿನವೇ ಅದನ್ನು ಅವರಿಗೆ ಗಿಫ್ಟ್​ ಆಗಿ ಕೊಟ್ಟಿದ್ದು, ಇನ್ನು ಮುಂದೆ ಕಾನೂನುಬದ್ಧವಾಗಿ ನೀವೇ ಇದರ ಅಪ್ಪ-ಅಮ್ಮ ಎಂದಿದ್ದಾರೆ. ಇದನ್ನು ಕೇಳಿ ಪೂರ್ಣಿ ಮತ್ತು ಅವಿನಾಶ್​ಗೆ ಸ್ವರ್ಗವೇ ಸಿಕ್ಕಂಥ ಅನುಭವ ಆಗಿದೆ. ಇದೇ ಖುಷಿಯಲ್ಲಿ ಪೂರ್ಣಿ ರೊಮ್ಯಾಂಟಿಕ್​ ಆಗಿ ಡಾನ್ಸ್​ ಮಾಡಿದ್ದಾಳೆ. ಆದರೆ ರೀಲ್​ ಗಂಡ ಅವಿನಾಶ್​ ಜೊತೆಯಲ್ಲ, ಬದಲಿಗೆ ರಿಯಲ್​ ಗಂಡ ಶಶಿ ಹೆಗಡೆ ಜೊತೆ. 

ಹೌದು. ಪೂರ್ಣಿ ಪಾತ್ರಧಾರಿ ಲಾವಣ್ಯ ಭಾರಧ್ವಾಜ್​ ಅವರು ಪತಿ ಶಶಿ ಹೆಗಡೆ ಜೊತೆ ಭೀಗಿ ಭೀಗಿ ರಾತೋಮೆಗೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಅಷ್ಟಕ್ಕೂ ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಡಾನ್ಸ್​ ರೀಲ್ಸ್ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಪತಿಯ ಜೊತೆಗಿನ ಡಾನ್ಸ್​ ವಿಡಿಯೋ ವೈರಲ್​ ಆಗಿದೆ. ಇವರ ಜೋಡಿಗೆ ಫ್ಯಾನ್ಸ್​ ಫಿದಾ ಆಗಿದ್ದು, ಕೆಮೆಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ ಶಶಿ ಹೆಗಡೆ ಅವರು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಸಹೋದರ ಜೀವಾ ಆಗಿ ನಟಿಸುತ್ತಿದ್ದರು. ಆದರೆ ಯಾವುದೋ ಕಾರಣದಿಂದ ಅವರು ಸೀರಿಯಲ್​ ಬಿಟ್ಟಿದ್ದಾರೆ. ಈಗ ಆ ಪಾತ್ರವನ್ನು ಬೇರೊಬ್ಬ ನಟ ನಟಿಸುತ್ತಿದ್ದಾರೆ. 

ನೀ ಸನಿಹಕೆ ಬಂದರೆ... ಎನ್ನುತ್ತಲೇ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಸೀರಿಯಲ್​ ಜೋಡಿ ಪೂರ್ಣಿ-ಜೀವಾ

ಅಷ್ಟಕ್ಕೂ ಲಾವಣ್ಯ ಮತ್ತು ಶಶಿ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ. 

ಇನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್​ ವಿಷ್ಯಕ್ಕೆ ಬರುವುದಾದರೆ, ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್​, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅದೇ ಇನ್ನೊಂದೆಡೆ, ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್​ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ. ಆದ್ದರಿಂದ ಈ ಸೀರಿಯಲ್​ ಕೂಡ ಮುಗಿಯುವ ಹಂತದಲ್ಲಿದೆ. 

ಪುಟ್ಟಕ್ಕನ ಮಕ್ಕಳು ಉಮಾಶ್ರೀ ಆಸ್ಪತ್ರೆ ವಿಡಿಯೋ ವೈರಲ್​: ನಟಿಗೆ ಏನಾಯ್ತು?

first dance reel with my dear non dancer ❤️ #couplegoals #new #love #actors #viral #viralshorts