ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬಂದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪತ್ನಿ ಗೀತಾ ಜೊತೆಗೆ ಜೀ ಕನ್ನಡದ ಸರಿಗಮಪ ಮಹಾಸಂಗಮ ಕಾರ್ಯಕ್ರಮಕ್ಕೆ ಅಚ್ಚರಿ ಭೇಟಿ ನೀಡಿದರು. ಶಿವಣ್ಣನ ಆಗಮನಕ್ಕೆ ತೀರ್ಪುಗಾರರು, ಸ್ಪರ್ಧಿಗಳು ಭಾವುಕರಾದರು. ಚೇತರಿಸಿಕೊಳ್ಳುತ್ತಿರುವ ಶಿವಣ್ಣನನ್ನು ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ಜೀ ಕನ್ನಡ ವಾಹಿನಿಯ ಸರಿಗಮಪ ಮಹಾ ಸಂಗಮ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. 62 ವರ್ಷ ಶಿವಣ್ಣ ಅಮೆರಿಕಾದಲ್ಲಿ ಆಪರೇಷನ್ ಮುಗಿಸಿಕೊಂಡು ವಿಶ್ರಾಂತಿ ಪಡೆದು ಮತ್ತೆ ತಮ್ಮ ಕೆಲಸಗಳನ್ನು ಶುರು ಮಾಡಿದ್ದಾರೆ. ಜನವರಿ 26ರಂದು ಬೆಂಗಳೂರಿಗೆ ಆಗಮಿಸಿದ ಶಿವರಾಜ್‌ಕುಮಾರ್ ಇನ್ನೂ ಸ್ವಲ್ಪ ದಿನ ರೆಸ್ಟ್ ಮಾಡುತ್ತಾರೆ ಅಂದುಕೊಂಡರೆ ಫಯರ್ ಬ್ರ್ಯಾಂಡ್ ಎಂಟ್ರಿ ಕೊಟ್ಟು ಅಲ್ಲಿರುವ ಸ್ಪರ್ಧಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಶಿವಣ್ಣ ಗೀತಕ್ಕ ಎಂಟ್ರಿಗೆ ಅನುಶ್ರೀ, ತಾರ ಅನುರಾಧ, ಶ್ರುತಿ, ಸುಧಾರಾಣಿ, ಅರ್ಜುನ್ ಜನ್ಯ...ಪ್ರತಿಯೊಬ್ಬರು ಸರ್ಪ್ರೈಸ್ ಆಗುತ್ತಾರೆ. 'ಜೀವನವನ್ನು ಗೆದ್ದು ಬಂದಂತ ನಿಜವಾದ ಗೆಲುವಿನ ಸರದಾರರು' ಎಂದು ಅನುಶ್ರೀ ಹೇಳುತ್ತಾರೆ. 'ಶಿವಣ್ಣ ಅನ್ನೋದು ಒಂದು ಶಕ್ತಿ' ಎಂದು ತಾರಾ ಅಪ್ಪಿಕೊಳ್ಳುತ್ತಾರೆ. 'ನನ್ನ ಈ ಉಸಿರು ಇರುವವರೆಗೂ ಈ ಉಸಿರು ಅಣ್ಣನಿಗೆ' ಎಂದು ಅರ್ಜುನ್ ಜನ್ಯ ಹೇಳುತ್ತಾರೆ. 'ಅಭಿಮಾನಿ ದೇವರುಗಳ ಪ್ರಾರ್ಥನೆ...ತುಂಬಾ ಥ್ಯಾಂಕ್ಸ್. ತಿರುಗ ನಿಮ್ಮನ್ನು ನೋಡುತ್ತೀನಿ ಅಂದುಕೊಂಡಿರಲಿಲ್ಲ' ಎಂದು ಸ್ವತಃ ಶಿವಣ್ಣ ಭಾವುಕರಾಗುತ್ತಾರೆ.
ಶಿವಣ್ಣನಿಗೆ 5 ಗಂಟೆಯಲ್ಲಿ 6 ಆಪರೇಷನ್ 190 ಸ್ಟಿಚ್ ಹಾಕಿದ್ದಾರೆ: ಮಧು ಬಂಗಾರಪ್ಪ ಹೇಳಿಕೆ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಈ ಪ್ರೋಮೋ ಸಖತ್ ವೈರಲ್ ಆಗುತ್ತಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ರಿಂದ 10.30ವರೆಗೂ ಪ್ರಸಾರವಾಗಲಿದೆ. ಶಿವಣ್ಣ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಪ್ರತಿಯೊಬ್ಬರ ಎನರ್ಜಿ ಹೆಚ್ಚಾಗುತ್ತದೆ. ಅಮೆರಿಕಾದಿಂದ ಬಂದಿರುವ ಶಿವಣ್ಣ ಸ್ವಲ್ಪ ಸಣ್ಣಗಾಗಿದ್ದಾರೆ ಸ್ವಲ್ಪ ವೀಕ್ ಅನಿಸುತ್ತದೆ ಎಂದು ಜನರು ಕಾಮೆಂಟ್ ಮಾಡಿದ್ದಾರೆ. ಆದರೆ ಮೊದಲಿಗಿಂತ ಹೆಚ್ಚು ಎನರ್ಜಿ ಮತ್ತು ಪವರ್‌ನಲ್ಲಿ ವೇದಿಕೆ ಮೇಲೆ ಎಂಟ್ರಿ ಕೊಟ್ಟರು. ಶಿವಣ್ಣನ ಕಷ್ಟ ಸುಖದಲ್ಲಿ ಕೈ ಹಿಡಿದಿರುವ ಪತ್ನಿ ಗೀತಾರವರಿಗೂ ಕೂಡ ಮೆಚ್ಚುಗೆ ವ್ಯಕ್ತ ಪಡಿಸಬೇಕು. ಯಾವತ್ತಿದ್ದರೂ ನಿನ್ನೊಟ್ಟಿಗೆ ನಿನ್ನ ಜೊತೆಯಲ್ಲಿ ಈ ಜೀವನ ಎಂದು ಇಬ್ಬರು ಕೈ-ಕೈ ಹಿಡಿದು ಬರುವುದನ್ನು ನೋಡಲು ಚಂದ ಎನ್ನುತ್ತಾರೆ ಫ್ಯಾನ್ಸ್.
ಗೀತಕ್ಕನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಈ ಧೈರ್ಯ ಮಾಡ್ತಾ ಇರ್ಲಿಲ್ಲ; ಶಿವಣ್ಣನ ಬಗ್ಗೆ ಅರ್ಜುನ್ ಜನ್ಯ ಭಾವುಕ
ಆಪರೇಷನ್ ಬಗ್ಗೆ ಮಾಹಿತಿ:
'ಡಾಕ್ಟರ್ ಅಂದ್ರೆ ನಮ್ಮ ಪಾಲಿನ ದೇವರು. ಡಾಕ್ಟರ್ ಮುರುಗೇಶ್ ಮನೋಹರ್ ಅವರ ಜೊತೆ ಮೊದಲ ಸಲ ಮಾತನಾಡಿದಾಗಲೇ ಧೈರ್ಯ ಬಂತು. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ ಅದನ್ನು ಇಲ್ಲಿಗೆ ನಿಲ್ಲಿಸಬೇಕು. ಶಿವಣ್ಣ ಅವರೇ ಹೇಳಿರುವ ಪ್ರಕಾರ ಇದು bladder replacement bladder reconstruction ಅಂತ. ಮಾಹಿತಿ ಗೊತ್ತಿಲ್ಲದವರು ಕಿಡ್ನಿ ಫೆಲ್ಯೂರ್ ಹಾಗೆ ಹೀಗೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ. ಶಿವಣ್ಣ ಅವರಿಗೆ ನಿಜಕ್ಕೂ ದೇವರ ಆಶೀರ್ವಾದ ಇದೆ ಏಕೆಂದರೆ ಬ್ರೌನ್‌ನಲ್ಲಿ ಒಂದು ಸ್ಟಂಟ್ ಇದೆ, ಚಿಕ್ಕದಾಗಿ ಹಾರ್ಟ್ ಅಟ್ಯಾಕ್ ಆಗಿತ್ತು, ಕಾಲಿಗೆ ಪೆಟ್ಟಾಗಿತ್ತು ಈಗ ಆಪರೇಷನ್ ನಡೆದಿದೆ. ದಿನದಲ್ಲಿ ಸುಮಾರು 3-4 ಕಿಮೀ. ವಾಕಿಂಗ್ ಮಾಡುತ್ತಾರೆ ಶಿವಣ್ಣ, ಮನೆಯಲ್ಲಿ ಸುಮಾರು 5 ಸಾವಿರ ಹೆಜ್ಜೆ ನಡೆಯುತ್ತಿದ್ದಾರೆ. ಯಾವುದೇ ತೊಂದರೆ ಇಲ್ಲ ಶಿವಣ್ಣ ಆರೋಗ್ಯವಾಗಿದ್ದಾರೆ. 6 ಆಪರೇಷನ್‌ಗಳಲ್ಲಿ ಒಂದೇ ಸಮಯದಲ್ಲಿ ಮಾಡುತ್ತಾರೆ ಅಲ್ಲಿ ಕರುಳಿನ ಒಂದು ಭಾಗವನ್ನು ತೆಗೆದು ಬ್ಲಾಡರ್‌ಗೆ ಕನ್‌ಸ್ಟರ್ಕ್ಟ್ ಮಾಡುತ್ತಾರೆ. ಒಳಗಡೆ ಸುಮಾರು 190 ಹೊಲಗೆಗಳನ್ನು ಹಾಕಲಾಗಿದೆ. 4.30- 5 ಗಂಟೆಗಳಲ್ಲಿ ಡಾಕ್ಟರ್ ಆಪರೇಷನ್ ಮಾಡಿದ್ದಾರೆ. ಮೊದಲು ರೋಮೋಟಿಕ್‌ನಲ್ಲಿ ಆಪರೇಷನ್ ಮಾಡಬೇಕಾ ಅಥವಾ ಮಾನ್ಯುಯಲಿ ಮಾಡಬೇಕಾ ಎಂದು ಯೋಚನೆ ಮಾಡಿದ್ದರು...ಕೊನೆಯಲ್ಲಿ ಕೈಯಲ್ಲಿ ಮಾಡುವುದು ಎಂದು ನಿರ್ಧರಿಸಿದ್ದರು' ಎಂದು ಮಧು ಬಂಗಾರಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ಆಂಡ್ ಗೀತಕ್ಕ; ಫ್ಯಾಮಿಲಿ ಫೋಟೋ ವೈರಲ್
