ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ಆಂಡ್ ಗೀತಕ್ಕ; ಫ್ಯಾಮಿಲಿ ಫೋಟೋ ವೈರಲ್
ಕುಟುಂಬ ಸಮೇತರಾಗಿ ತಿಮ್ಮಪ್ಪನ ದರ್ಶನ ಪಡೆದ ಹ್ಯಾಟ್ರಿಕ್ ಫ್ಯಾಮಿಲಿ. ಪತಿ ಪತ್ನಿ ಮುಡಿ ಕೊಟ್ಟ ಫೋಟೋ ವೈರಲ್.....
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸದ್ಯ ಸಿನಿಮಾ ಮತ್ತು ರಿಯಾಲಿಟಿ ಶೋಗಳ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೆ ಚಿಕಿತ್ಸೆಗೆಂದು ಬ್ರೇಕ್ ತೆಗೆದುಕೊಂಡು ಪ್ರಯಾಣ ಮಾಡಲು ಸಜ್ಜಾಗಿದ್ದಾರೆ.
ಈ ನಡುವೆ ಶಿವರಾಜ್‌ಕುಮಾರ್, ಗೀತಕ್ಕೆ ಸೇರಿದಂತೆ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ತಿರಪತಿ ತಿರುಮಲ ತೆರಳಿ ಸಂಜೆ ವೇಳೆ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.
ಶಿವರಾಜ್‌ಕುಮಾರ್ ಈಗ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. ಶಿವಣ್ಣನಿಗೆ ದೊಡ್ಡ ಶಕ್ತಿಯಾಗಿ ಜೊತೆ ನಿಂತಿರುವ ಗೀತಕ್ಕೆ ಕೂಡ ಮುಡಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಶಿವಣ್ಣ ಆರೋಗ್ಯದ ವಿಚಾರವಾಗಿ ವಿದೇಶಕ್ಕೆ ಪ್ರಯಾಣ ಮಾಡಲಿದ್ದಾರೆ. ಕೆಲವೇ ದಿನಗಳಲ್ಲಿ ಚಿಕಿತ್ಸೆ ಆರಂಭವಾಗಲಿದ್ದು ವೆಂಕಟೇಶ್ವರನ ದರ್ಶನ ಪಡೆದು ಆಶೀರ್ವಾದ ಪಡೆದು ಬಂದಿದ್ದಾರೆ.
ಚಿಕಿತ್ಸೆ ಮುಗಿಸಿ ಆಗಮಿಸಿದರೂ ಶಿವಣ್ಣ ಸಣ್ಣ ಬ್ರೇಕ್ ತೆಗೆದುಕೊಂಡು ಚೇತರಿಸಿಕೊಂಡ ನಂತರ ಮತ್ತೆ ಚಿತ್ರೀಕರಣ ಶುರು ಮಾಡಲಿದ್ದಾರೆ. ಅಭಿಮಾನಿಗಳು ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಶಿವರಾಜ್‌ಕುಮಾರ್ ಡಿಕೆಡಿ ರಿಯಾಲಿಟಿ ಶೋ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ತೆರೆ ಕಂಡ ಭೈರತಿ ರಣಗಲ್ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಮಫ್ತಿ ಚಿತ್ರಕ್ಕಿಂತ ಡಬಲ್ ಕಲೆಕ್ಷನ್ ಮಾಡಿದೆ.
ಶಿವರಾಜ್‌ಕುಮಾರ್ ಬ್ರೇಕ್ ತೆಗೆದುಕೊಳ್ಳುತ್ತಿದ್ದರು ಗೀತಾ ಪ್ರೊಡಕ್ಷನ್‌ನ ಅಡಿಯಲ್ಲಿ ಮಾಡುತ್ತಿರುವ ಮತ್ತೊಂದು ಚಿತ್ರದ ಪೋಸ್ಟ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಶಿವಣ್ಣನ ಕಾಲ್‌ಶೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಲಿದೆ.