ಒಂದು ಕಾಲಿಗೆ ಸಾಕ್ಸ್ ಹಾಕೋದು ಮರೆತ ನಿವೇದಿತಾ ಗೌಡ; ಚಂದನ್ ಮಡಿಲಿನಲ್ಲಿ ಪತ್ನಿ, ಹಿಗ್ಗಾಮುಗ್ಗಾ ಟ್ರೋಲ್!
ವೈರಲ್ ಆಯ್ತು ಚಂದನ್ ಶೆಟ್ಟಿ ನಿವೇದಿತಾ ಗೌಡ ಪೋಟೋ. ಸಾಕ್ಸ್ ಒಂದೇ ಮರೆತಿದ್ದರೆ ಓಕೆ ಮತ್ತೊಂದು....ಎಂದು ಹಾಸ್ಯ ಮಾಡಿದ ನೆಟ್ಟಿಗರು...
ಕನ್ನಡ ಕಿರುತೆರೆ ಸೆನ್ಸೇಷನ್ ಕ್ರಿಯೇಟಿಂಗ್ ಜೋಡಿ ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಜೋಡಿ ಪ್ರತಿ ಔಟ್‌ಫಿಟ್ ಮತ್ತು ಪ್ರತಿ ಜಾಗದ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಟ್ರೋಲ್ ಅಂದ್ರೆ ನಿವೇದಿತಾ, ನಿವೇದಿತಾ ಅಂದ್ರೆ ಟ್ರೋಲ್ ಎನ್ನುವ ನೆಟ್ಟಿಗರಿಗೆ ಮತ್ತಷ್ಟು ಟ್ರೋಲ್ ಮಾಡಲು ಹೊಸ ವಿಚಾರ ಸಿಕ್ಕಿದೆ. ನಿವಿ ಗಮನಿಸಿಲ್ಲ ಅಂದುಕೊಂಡಿದ್ದೀವಿ....
ಹೌದು! ನಿವಿ ಮತ್ತು ಚಂದು ಪ್ರಯಾಣ ಮಾಡುವ ಮುನ್ನ ವಿಮಾನ ನಿಲ್ದಾಣದಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ ಒಂದು ಹಾರ್ಟ್ ಮತ್ತುಂದು ಸ್ಟಾರ್ ಕ್ಯಾಪ್ಶನ್ ಕೊಟ್ಟಿದ್ದಾರೆ. ಟ್ರಾಯ್ ಜಾಗದಲ್ಲಿ ಕ್ಲಿಕ್ ಮಾಡಿರುವ ಫೋಟೋ ಇದಾಗಿದ್ದು ಇದು ಯುನೈಟೆಡ್ ಸ್ಟೇಟ್ಸ್‌ನ ಮಿಚಿಗನ್‌ನ ಓಕ್‌ಲ್ಯಾಂಡ್‌ನಲ್ಲಿರುವ ಒಂದು ನಗರ. ಬ್ಲ್ಯಾಕ್ ಶಾರ್ಟ್ ಪಿಂಕ್ ಆಂಡ್ ವೈಟ್ ಟಾಪ್ ಧರಿಸಿರುವ ನಿವಿ ಬ್ಲ್ಯಾಕ್ ಶೂ ಧರಿಸಿದ್ದಾರೆ. ಇರಲ್ಲಿ ಒಂದು ಶೂಗೆ ಸಾಕ್ಸ್ ಹಾಕಿದ್ದಾರೆ ಮತ್ತೊಂದು ಶೂಗೆ ಸಾಕ್ಸ್ ಹಾಕಿಲ್ಲ. ಇದನ್ನು ಗಮನಿಸಿರುವ ನೆಟ್ಟಿಗರು ಒಂದು ಕಾಲಿಗೆ ಸಾಕ್ಸ್ ಹಾಕುವುದು ನಿವೇದಿತಾ ಶೋಕಿ, ಕಾಲಿಗೆ ಸಾಕ್ಸ್ ಹಾಕುವುದು ಮರೆತ ಪುಟ್ಟಿ ಅಥವಾ ಚಂದನ್‌ಗೆ ಒಂದು ಕೊಟ್ಟಿದ್ಯಾ? ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಮಕ್ಳು ಮಾಡ್ಕೊಂಡ್ರೆ ಅವ್ರೆ ನಂಗೆ ಊಟ ಮಾಡಿಸಬೇಕು; ತಾಯಿತನದ ಬಗ್ಗೆ ನಿವೇದಿತಾ ಗೌಡ ಶಾಕಿಂಗ್ ಹೇಳಿಕೆ
ಇನ್ನು ಕೆಲವರು ನಿವೇದಿತಾ ಚಂದನ್ ಕಾಲೆಳೆದಿದ್ದಾರೆ. ತಂದೆ ಮಡಿಲಿನಲ್ಲಿ ಮಗಳು ಕುಳಿತುಕೊಂಡಿರುವ ರೀತಿ ಇದೆ ಎಂದು ಹಾಸ್ಯ ಮಾಡಿದ್ದಾರೆ. ನಿವಿ ಆಂಡ್ ಚಂದು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಉತ್ತರ ಕೊಡುವುದಿಲ್ಲ.
ನೆಗೆಟಿವ್ ಕಾಮೆಂಟ್‌ಗಳಿಗೆ ಉತ್ತರ:
'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ' ಎಂದು ನಿವೇದಿತಾ ಬರೆದುಕೊಂಡಿದ್ದಾರೆ.
ತಾಯಿಗೆ ಕಳ್ಳರ ಭಯ, ನನಗೆ ಫ್ರೀಡಂ ಬೇಕೆಂದು ಮದುವೆಯಾದೆ: ವೇದಿಕೆ ಮೇಲೆ ಕಣ್ಣೀರಿಟ್ಟ ನಿವೇದಿತಾ ಗೌಡ
'ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.