Hitler Kalyanaದ ಎಡವಟ್ಟು ಲೀಲಾ ಈಗ ಹಾಸ್ಯ ನಟ ಚಿಕ್ಕಣ್ಣನ ಪ್ರೇಯಸಿ?
ಹಿಟ್ಲರ್ ಕಲ್ಯಾಣದ 'ಲೀಲಾ' ಪಾತ್ರದ ಮೂಲಕ ಫೇಮಸ್ ಆಗಿರೋ ಮಲೈಕಾ ವಸುಪಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಹಾಸ್ಯ ನಟ ಚಿಕ್ಕಣ್ಣನ ಪ್ರೇಯಸಿಯಂತೆ. ಇದೇನು ಮಲೈಕಾ ವಸುಪಾಲ್ ಹೊಸ ಅವತಾರ?
ಮಲೈಕಾ ವಸುಪಾಲ್(Malaika Vasupal) ಜೀ ಕನ್ನಡದ ಜನಪ್ರಿಯ ಸೀರಿಯಲ್ 'ಹಿಟ್ಲರ್ ಕಲ್ಯಾಣ'(Hitler Kalyana)ದ ನಾಯಕಿ. ಯಡವಟ್ಟು ಲೀಲಾ ಪಾತ್ರದ ಮೂಲಕ ಲಕ್ಷಾಂತರ ಅಭಿಮಾನಿ(Fans)ಗಳನ್ನು ಸಂಪಾದಿಸಿದ ಹುಡುಗಿ. ಇದೀಗ ಈಕೆಯ ಮತ್ತೊಂದು ಅವತಾರ ಬಯಲಾಗಿದೆ. ಈಕೆ ಹಾಸ್ಯ ಚಿಕ್ಕಣ್ಣ(Comedy Actor Chikkanna)ನ ಪ್ರೇಯಸಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಹಿಂದೆ ಚಿಕ್ಕಣ್ಣ ಅವರ ಜೊತೆಗೆ ಆಂಕರ್ ಅನುಶ್ರೀ(Anchor Anushree) ಅವರ ಹೆಸರು ಕೇಳಿ ಬರ್ತಾ ಇತ್ತು. ಇನ್ನೂ ಅದೇ ಮೈಂಡ್‌ಸೆಟ್(Mindset)ನಲ್ಲಿದ್ದವರಿಗೆ ಈ ಸುದ್ದಿ ಶಾಕ್(Shock) ನೀಡಿದೆ.
ಮಲೈಕಾ ವಸುಪಾಲ್ ಮೂಲತಃ ಬೆಣ್ಣೆ ದೋಸೆಯ ಊರು ದಾವಣಗೆರೆ(Davanagere)ಯ ಬೆಣ್ಣೆಯಂಥಾ ಹುಡುಗಿ. ಆಕೆಗೆ ಚಿಕ್ಕ ವಯಸ್ಸಿಂದಲೂ ನಟನೆ ಅಂದರೆ ಬಹಳ ಇಷ್ಟ. ಆದರೆ ಅಪ್ಪ ಅಮ್ಮನಿಗೆ ಮಗಳು ಚೆನ್ನಾಗಿ ಓದಬೇಕು, ಓದಿನಲ್ಲಿ ಮುಂದೆ ಬರಬೇಕು ಅನ್ನೋ ಆಸೆ. ಅವರಿಗೂ ನಿರಾಸೆ ಮಾಡಲು ಬಯಸದ ತನ್ನ ಕನಸಿನ ಜೊತೆಗೂ ರಾಜಿ ಮಾಡಿಕೊಳ್ಳದ ಮಲೈಕಾ ಒಂದು ಐಡಿಯಾ(Idea) ಮಾಡಿದ್ರು. ಅಪ್ಪ ಅಮ್ಮನ ಇಚ್ಛೆಯಂತೇ ಮೊದಲು ಓದು ಮುಗಿಸಿದರು. ಆಮೇಲೆ ಕನಸಿನ ಹಿಂದೆ ಬಿದ್ದರು. ಸೀರಿಯಲ್‌ನಲ್ಲಿ ಚಾನ್ಸ್(Chance) ಸಿಗುತ್ತಾ ಅಂತ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬೆಂಗಳೂರಿಗೆ ಬಂದ್ರು. ಸೀರಿಯಲ್ ಟೀಮ್‌ನಿಂದ ಆಡಿಶನ್‌ಗೆ ಕರೆ ಬಂದಕೂಡಲೇ ದಾವಣಗೆರೆಯಿಂದ ಬೆಂಗಳೂರಿಗೆ ಬಂದು ಆಡಿಶನ್ ಕೊಟ್ಟು ಹೋದರು. ಅಲೆದದ್ದೂ ಬಂತು. ಚಾನ್ಸ್ ಸಿಗಲಿಲ್ಲ. ಕೊನೆಗೂ ಈಕೆಗೆ ಒಂದೊಳ್ಳೆ ಚಾನ್ಸ್ ಕೊಟ್ಟಿದ್ದು ನಟ ದಿಲೀಪ್ ರಾಜ್(Dileep Raj). ಅವರ ನಿರ್ಮಾಣ ಮತ್ತು ನಟನೆಯಲ್ಲಿ ಹೊರಬರುತ್ತಿದ್ದ ಸಾಲ್ಟ್ ಪೆಪ್ಪರ್ ಪ್ರೇಮ್ ಕಹಾನಿ ಸೀರಿಯಲ್‌ಗೊಬ್ಬ ಇನ್ನೋಸೆಂಟ್ ಹುಡುಗಿ ಬೇಕಿತ್ತು. ಮಲೈಕಾ ವಸುಪಾಲ್ ಆಕ್ಟಿಂಗ್(Acting) ನೋಡಿ ಈಕೆಯನ್ನು ಸೆಲೆಕ್ಟ್ ಮಾಡ್ತಾರೆ. ದಿಲೀಪ್ ರಾಜ್ ಊಹೆ ಸುಳ್ಳಾಗಲಿಲ್ಲ. 'ಹಿಟ್ಲರ್ ಕಲ್ಯಾಣ' ಎಂಬ ಸೀರಿಯಲ್ ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆಯುವ ಜೊತೆಗೆ ಇದರಲ್ಲಿನ ಲೀಲಾ ಪಾತ್ರಕ್ಕೂ ಸಾಕಷ್ಟು ಮಂದಿ ಫ್ಯಾನ್ಸ್ ಹುಟ್ಟಿಕೊಂಡರು.
Bairagee: ಯಾವ ಭಾಷೆಯಲ್ಲಾದರೂ ನಟಿಸೋಕೆ ರೆಡಿ: ಶಿವಣ್ಣ
ಸದಾ ಯಡವಟ್ಟು ಮಾಡುವ, ವಟ ವಟ ಮಾತಾಡುವ, ಮನಸ್ಸಲ್ಲಿ ಮಗುವಿನಂತಿರುವ ಪಾತ್ರ ಲೀಲಾದು. ಈಕೆಯನ್ನು ಎರಡನೇ ಮದುವೆ ಆಗುವ ಎಜೆ ಮಧ್ಯವಯಸ್ಕ. ಆತನಿಗಿದು ಎರಡನೇ ಮದುವೆ. ಜೊತೆಗೆ ಬಲವಂತದ ಮದುವೆಯೂ ಹೌದು. ಆತ ದೊಡ್ಡ ಶ್ರೀಮಂತ. ಮೊದಲನೇ ಹೆಂಡತಿ ಅಂತರಾ ಸಾವಿನ ಬಳಿಕ ಆಕೆಯದೇ ನೆನಪಿನಲ್ಲಿ ದಿನ ಸವೆಸುತ್ತಿರುವ ಆತ ಲೀಲಾಳ ಪ್ರೀತಿಯಲ್ಲಿ ಹೇಗೆ ಬೀಳ್ತಾನೆ. ತನ್ನ ಅರ್ಧ ವಯಸ್ಸಿನ ಹುಡುಗಿ ಜೊತೆಗೆ ಹೇಗೆ ಸಂಸಾರ ಮಾಡ್ತಾನೆ ಅನ್ನೋದೇ ಸ್ಟೋರಿ.
Wedding Gift: ಡಿವೋರ್ಸ್‌ನ ಮಾನಸಿಕ ಒತ್ತಡ ನಾನೂ ಅನುಭವಿಸಿದ್ದೀನಿ: ಸೋನು ಗೌಡ
ಲೀಲಾ ಪಾತ್ರಕ್ಕೆ ಪರ್ಫೆಕ್ಟ್ ಮ್ಯಾಚ್(Perfect Match) ಆಗಿದ್ದ ಮಲೈಕಾ ಇದೀಗ ಹಾಸ್ಯ ನಟ ಚಿಕ್ಕಣ್ಣ ಪ್ರೇಯಸಿಯಾಗಿದ್ದಾರೆ. ಆದರೆ ಇದು ರಿಯಲ್(Real)ನಲ್ಲಿ ಅಲ್ಲ, ರೀಲ್(Reels)ನಲ್ಲಿ. ಚಿಕ್ಕಣ್ಣ ಹೀರೋ ಆಗಿರುವ 'ಉಪಾಧ್ಯಕ್ಷ' (Upadhyaksha)ಸಿನಿಮಾಕ್ಕೆ ಈಕೆಯೇ ಹೀರೋಯಿನ್. ಶರಣ್(Sharan) ನಟನೆಯ 'ಅಧ್ಯಕ್ಷ'(Adhyaksha) ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಉಪಾಧ್ಯಕ್ಷನ ಪಾತ್ರ ಮಾಡಿದವರು ಚಿಕ್ಕಣ್ಣ. ಇದೀಗ ಅದೇ ಉಪಾಧ್ಯಕ್ಷನ ಕಥೆಯಲ್ಲೇ ಈ ಸಿನಿಮಾ ಇದೆ. ಔಟ್ ಆಂಡ್ ಔಟ್(Out and out) ಕಾಮಿಡಿ ಮೂವಿಗೆ ಮಲೈಕಾ ವಸುಪಾಲ್ ನಾಯಕಿ. ದರ್ಶನ್ ನಟನೆಯ 'ರಾಬರ್ಟ್', ಸುದೀಪ್ ನಟನೆಯ 'ಹೆಬ್ಬುಲಿ'ಯಂಥಾ ಸಿನಿಮಾ ಮಾಡಿದ್ದ ಉಮಾಪತಿ ಶ್ರೀನಿವಾಸ್(Umapathi shrinivas) ಅವರೇ ಈ ಸಿನಿಮಾಕ್ಕೆ ದುಡ್ಡು ಹಾಕ್ತಿದ್ದಾರೆ.
21 ವರ್ಷಗಳ ನಂತರ 'Lagaan' ಚಿತ್ರದ ನಟಿ ಗ್ರೇಸಿ ಸಿಂಗ್ ಹೇಗಾಗಿದ್ದಾರೆ ನೋಡಿ
ಸೀರಿಯಲ್‌ನಲ್ಲಿ ಅವಕಾಶಕ್ಕಾಗಿ ಒದ್ದಾಡುತ್ತಿದ್ದ ಹುಡುಗಿ ಮಲೈಕಾ ಈಗ ಸೀರಿಯಲ್‌ನಲ್ಲಿ ಮಿಂಚೋ ಜೊತೆಗೆ ದೊಡ್ಡ ಬ್ಯಾನರ್‌ನ ಸಿನಿಮಾಕ್ಕೂ ನಾಯಕಿಯಾಗಿದ್ದಾರೆ. ಪ್ರತಿಭೆಯ ಜೊತೆಗೆ ಅದೃಷ್ಟವೂ ಇದ್ದರೆ ಮನರಂಜನಾ ಕ್ಷೇತ್ರದಲ್ಲಿ ಮುಂದೆಬರೋದು ಕಷ್ಟ ಅಲ್ಲ ಅನ್ನೋದಕ್ಕೆ ಮಲೈಕಾನೇ ಸಾಕ್ಷಿ. ಎಡವಟ್ಟು ಲೀಲಾ ಪಾತ್ರದಲ್ಲಿ ಮನೆಮಾತಾದ ಹುಡುಗಿ ಉಪಾಧ್ಯಕ್ಷನ ಜೊತೆ ಹೇಗೆ ಮಿಂಚುತ್ತಾಳೆ ಅಂತ ನೋಡ್ಬೇಕು.