ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಚಾನೆಲ್‌ನ ಒಂದು ಫನ್ನಿ ವೀಡಿಯೋ ಓಡುತ್ತಿತ್ತು. ಎರಡು ವಿಂಡೋ ಮೂಲಕ ಎರಡು ಪಾಪ್ಯುಲರ್ ಸೀರಿಯಲ್ ವೀಡಿಯೋ ಬಿಟ್ಟಿದ್ದರು. ಎರಡರಲ್ಲೂ ಆ ಚಾನೆಲ್‌ನ ಬಹಳ ಪಾಪ್ಯುಲರ್ ಸೀರಿಯಲ್‌ನ ಇಬ್ಬರು ಹೀರೋಗಳಿದ್ದರು. ಅವರಿಬ್ಬರೂ ಆವರೆಗೆ ಮಾಡದ ಸಾಹಸವೊಂದನ್ನು ಮಾಡಲು ಹೆಣಗುತ್ತಿದ್ದರು.

ಮತ್ತೇನಲ್ಲ, ಅವರಿಬ್ಬರೂ ಸೀರೆ ಮಡಚಿಡೋದಕ್ಕೆ ಹೆಣಗಾಡ್ತಾ ಇದ್ದರು. ಆ ಹೀರೋಗಳು ಯಾರು ಅಂತೀರಿ.. ಮತ್ಯಾರು, 'ಕನ್ನಡತಿ' ಹೀರೋ ಹರ್ಷ ಮತ್ತು 'ನನ್ನರಸಿ ರಾಧೆ' ಸೀರಿಯಲ್ ಹೀರೋ ಅಗಸ್ತ್ಯ ರಾಥೋಡ್. ಚಾನೆಲ್‌ನವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆ ಎತ್ತಿದ್ದರು, ಇವರಿಬ್ಬರಲ್ಲಿ ಯಾರು ಚೆನ್ನಾಗಿ ಸೀರೆ ಮಡಚುತ್ತಿದ್ದಾರೆ ಅಂತ. ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡತಿ ಫ್ಯಾನ್ಸ್ ಏನು ಕಡಿಮೆನಾ. ಕನ್ನಡತಿ ಅಭಿಮಾನಿ ಬಳಗ ಅಂತ ಹತ್ತಾರು ಗ್ರೂಪ್‌ಗಳಿವೆ. ಕೆಲವಕ್ಕಂತೂ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ ಇದ್ದಾರೆ. ಸೋ ಹೆಚ್ಚಿನವರು ಹರ್ಷನೇ ಸೂಪರ್ಬ್ ಆಗಿ ಸೀರೆ ಮಡಚೋದು ಅಂತ ಹರ್ಷಂಗೆ ಓಟು ಹಾಕಿದ್ರು. 

60 ಅನ್ನಪೂರ್ಣ ಅಜ್ಜಿ ಡ್ಯಾನ್ಸ್ ಗೆ ಕರ್ನಾಟಕ ಫಿದಾ! ...

ಇದೀಗ ಕನ್ನಡತಿ ಸೀರಿಯಲ್‌ನ ಅಭಿಮಾನಿ ಬಳಗದಲ್ಲಿ ಒಂದು ವೀಡಿಯೋ ಸಖತ್ ವೈರಲ್ ಆಗ್ತಿದೆ. ಅದ್ರಲ್ಲಿ ಅಮ್ಮಮ್ಮನ ಮಡಿಲಲ್ಲಿ ಭುವಿ ಮತ್ತು ಹರ್ಷ ಮಲಗಿದ್ದಾರೆ. ಅಮ್ಮಮ್ಮ ಅಕ್ಕರೆಯಿಂದ ಇಬ್ಬರ ತಲೆ ಸವರುತ್ತಾ ಎಂದಿನ ಅಕ್ಕರೆಯಿಂದ ಮಾತಾಡ್ತಿದ್ದಾರೆ.

ಈ ವೀಡಿಯೋ ಭಾವನಾತ್ಮಕವಾಗಿ ಹಲವರನ್ನ ಟಚ್ ಮಾಡಿದೆ. ಯಾವ ಲೆವೆಲ್‌ಗೆ ಭುವಿ ಹರ್ಷನ್ನ ಅಭಿಮಾನಿಗಳು ಆರಾಧಿಸುತ್ತಾರೆ ಅನ್ನೋದಕ್ಕೆ ಸಾಕ್ಷಿಯಂತಿದೆ ಇದರ ಟೈಟಲ್ಲು. ಹರ್ಷ ಭುವಿ ಮೇಲೆ ಯಾರ ಕಣ್ಣೂ ಬೀಳದಿರಲಪ್ಪಾ ದೇವರೇ ಅನ್ನೋ ಶೀರ್ಷಿಕೆಯದು. ಇಮ್ಮೆಲ್ಲರ ಮನದಾಳದ ಮಾತು ಅಂತ ಸಾವಿರಾರು ಜನ ಲೈಕು, ಕಮೆಂಟು ಮಾಡಿದ್ದಾರೆ. ಒಂದು ಸೀರಿಯಲ್‌ನಲ್ಲಿ ಬರುವ ಪಾತ್ರಗಳು ಯಾವತ್ತೂ ಚೆನ್ನಾಗೇ ಇರಲೀ. ಅವರಿಗೆ ಯಾರ ಕಣ್ಣೂ ತಾಗದೇ ಇರಲಿ ಅಂತೆಲ್ಲ ಹೇಳೋದು ಜನ ಈ ಸೀರಿಯಲ್‌ನ್ನ ಬರೀ ಸೀರಿಯಲ್ಲಾಗಿ ಮಾತ್ರ ನೋಡ್ತಿಲ್ಲ ಅವರಿಬ್ಬರೂ ರಿಯಲ್ ಅನ್ನೋ ಥರನೇ ನೋಡ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ. 

ಕನ್ನಡತಿ ಧಾರವಾಹಿಗೆ ಅಮೆರಿಕಾದಲ್ಲೂ ಫ್ಯಾನ್ಸ್: ವರುಧಿನಿ ಅಂದ್ರೆ ಇಷ್ಟ ...

ಮತ್ತೊಂದು ಕಡೆ ಈ ಥರ ಅಮ್ಮಮ್ಮನ ತೊಡೆ ಮೇಲೆ ಭುವಿ, ಹರ್ಷ ಮಲಗಿರೋದು ಇನ್ನೊಂದು ಯಡವಟ್ಟಿಗೆ ಕಾರಣವಾಗೋ ಸೂಚನೆಯೂ ಕಾಣ್ತಿದೆ. ಅಂದರೆ ಕೆಲಸದ ಹೆಂಗಸಿನ ಕಣ್ಣಿಗೆ ಇದು ಬಿದ್ದಿದೆ. ಆಕೆಯೋ ಸದಾ ವರೂಧಿನಿ ಧ್ಯಾನದಲ್ಲೇ ಇರುವವಳು. ಈ ಹಿಂದೆಯೂ ಸಾಕಷ್ಟು ಯಡವಟ್ಟು ಮಾಡಿದ್ದಾಳೆ. ಸೋ, ಅವಳ ಕಣ್ಣಿಗೆ ಈ ದೃಶ್ಯ ಬಿದ್ದರೆ ಏನಾಗಬಹುದು ಅನ್ನೋದು ಸದ್ಯದ ಕುತೂಹಲ. ಅವಳು ಮತ್ತೇನಾದರೂ ಕಿರಿಕ್ ಮಾಡ್ತಾಳಾ ಅನ್ನೋ ಅನುಮಾನ ಇದ್ದೇ ಇದೆ. ಅದಕ್ಕೆ ಸರಿಯಾಗಿ ಅವಳು ಹರ್ಷ ಭುವಿ ಅಮ್ಮಮ್ಮ ಇರೋ ರೂಮ್‌ಗೆ ಕಾಫಿ ತಗೊಂಡು ಎಂಟ್ರಿ ಕೊಡೋ ಹೊತ್ತಿಗೇ ಎಪಿಸೋಡ್ ಎಂಡ್ ಆಗಿದೆ. ಅಲ್ಲಿಗೆ ಅಭಿಮಾನಿಗಳ ಹರಕೆ ಸುಳ್ಳಾಗುತ್ತಾ, ಹರ್ಷ ಭುವಿ ಜೋಡಿ ಮೇಲೆ ಕೆಲಸದವಳ ಕಣ್ಣೇ ಬೀಳುತ್ತಾ.. ಅನ್ನೋದನ್ನು ಕಾದು ನೋಡ್ಬೇಕಿದೆ. 

ಇದೆಲ್ಲದರ ನಡುವೆ ಕನ್ನಡತಿ ಸೀರಿಯಲ್ ಟಿಆರ್‌ಪಿಯಲ್ಲೂ ಸಖತ್ ಸೌಂಡ್ ಮಾಡ್ತಿದೆ. ಮೊದಲು ಟಾಪ್‌ ೯ ನೇ ಸೀರಿಯಲ್‌ ಆಗಿ ಗುರುತಿಸಿಕೊಂಡಿತ್ತು. ಆದರೆ ಈ ವಾರ ೯ನೇ ಪ್ಲೇಸ್‌ನಿಂದ ೭ ನೇ ಪ್ಲೇಸ್‌ಗೆ ಜಿಗಿದಿದೆ.

ಕನ್ನಡತಿ ಧಾರವಾಹಿ ನಿರ್ದೇಶಕ ಕೇರಳದ ಯಶವಂತ್: ಸೀರಿಯಲ್ ಕುರಿತ ಮನದಾಳದ ಮಾತುಗಳಿವು ...

ವಾರದಿಂದ ವಾರಕ್ಕೆ ಈ ಸೀರಿಯಲ್‌ಅನ್ನು ಹೆಚ್ಚೆಚ್ಚು ಜನ ನೋಡ್ತಿದ್ದಾರೆ, ಸೋಷಿಯಲ್‌ ಮೀಡಿಯಾ, ಜನರ ಬಾಯಿ ಮಾತಿನಿಂದಲೇ ಇದು ಎಲ್ಲರನ್ನೂ ತಲುಪುತ್ತಿದೆ. ಜೊತೆಗೆ ಸೀರಿಯಲ್‌ ಅಂದ್ರೆ ಮೂಗು ಮುರೀತಿದ್ದವರೂ ಈ ಸೀರಿಯಲ್‌ಗಾಗಿ ನಿತ್ಯ ಟಿವಿ ಮುಂದೆ ಕಾಯೋ ಹಾಗಾಗಿದೆ. ಸೋ, ಎಲ್ಲ ರೀತಿಯಿಂದಲೂ ಸಕ್ಸಸ್‌ ಆಗ್ತಿರೋ ಹರ್ಷ ಭುವಿಗೆ, ಕನ್ನಡತಿ ಸೀರಿಯಲ್‌ಗೊಮ್ಮೆ ಉಘೇ.. ಅನ್ನಿ!