Asianet Suvarna News Asianet Suvarna News

250ರ ಸಂತಸದಲ್ಲಿ ಸೀತಾರಾಮ: ಮದುವೆ ಸಂಭ್ರಮದಲ್ಲಿರೋ ಜೋಡಿಗೆ ಕಾದಿದ್ಯಾ ಆಪತ್ತು?

ಸೀತಾರಾಮ ಸೀರಿಯಲ್​ 250 ಕಂತುಗಳನ್ನು ಪೂರೈಸಿದೆ. ಸೀತಾರಾಮರ ಮದುವೆಯ ತಯಾರಿ ನಡೆಯುತ್ತಿರುವ ನಡುವೆಯೇ ಆತಂಕವೂ ಶುರುವಾಗಿದೆ.
 

Seetharama serial completed 250 episodes celebrating wedding of seeta and Rama suc
Author
First Published Jun 27, 2024, 2:17 PM IST

ಸೀತಾರಾಮ ಸೀರಿಯಲ್​ ಈಗ ದಿನದಿಂದ ದಿನಕ್ಕೆ ಟ್ವಿಸ್ಟ್​ ಪಡೆದುಕೊಳ್ಳುತ್ತಲೇ 250 ಕಂತುಗಳ ಸಂಭ್ರಮದಲ್ಲಿದೆ.  ಇತ್ತ ಎಲ್ಲಾ ಅಡೆತಡೆಗಳನ್ನು ಮೀರಿ ಸೀತಾರಾಮರ ಕಲ್ಯಾಣ ಕಾರ್ಯ ನಡೆಯುತ್ತಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳು ಶುರುವಾಗಿವೆ.  ಸೀತಾ ಮತ್ತು ರಾಮರ ಲವ್​ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಭಾವಿ ಪತಿ-ಪತ್ನಿಯ ರೊಮ್ಯಾನ್ಸ್​ ಕೂಡ ಜೋರಾಗಿಯೇ ಇದೆ.  ಸೀತಾಳನ್ನು ಬಿಟ್ಟು ಇರದ ರಾಮ್​ ಅವಳನ್ನು ಯಾರಿಗೂ ಕಾಣದ ಹಾಗೆ ಸಿಗುವುದೂ ನಡೆಯುತ್ತಿದೆ.  ಆದರೂ ಸೀತಾ ಮತ್ತು ರಾಮರ ಮದುವೆ ನಿಜವಾಗಿಯೂ ನಡೆಯುತ್ತಾ ಎನ್ನುವ ಸಂದೇಹ ಇನ್ನೂ ಅಭಿಮಾನಿಗಳನ್ನು ಕಾಡುತ್ತಿದೆ. ಇವರಿಬ್ಬರ ಮದುವೆಯೇ ಸೀರಿಯಲ್​ ಬಂಡವಾಳ ಆಗಿರುವಾಗ, ನಿಜಕ್ಕೂ ಮದುವೆ ನಿರ್ವಿಘ್ನವಾಗಿ ನಡೆಯುತ್ತದೆಯೇ ಎನ್ನುವ ಸಂದೇಹ ಕಾಡುತ್ತಿದೆ.

ಮದುವೆ ಶಾಸ್ತ್ರದ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಇವರ ಮದುವೆಯ ಕುರಿತು ಥಹರೇವಾರಿ ರೀತಿಯಲ್ಲಿ ಚರ್ಚೆಗಳು ಶುರುವಾಗಿದೆ. ಇದಕ್ಕೆ ಕಾರಣವೂ ಇದೆ.  ಸೀತಾಳ ಮನೆಯ ಗೋಡೆಯ ಮೇಲೆ ಆಗಂತುಕನೊಬ್ಬ ಬೆದರಿಕೆ ಬರಹ ಬರೆದಿದ್ದಾನೆ. ನೀನು ಹೋದ ಮನೆ ನಾಶವಾಗುತ್ತದೆ. ಮದುವೆಯಾದ್ರೆ ನಿನ್ನ ಹಳೆಯ ಪುರಾಣ ಬಯಲಾಗುತ್ತದೆ. ಮದ್ವೆಯಾಗಬೇಡ ಎಂದು ಅದರ ಮೇಲೆ ಬರೆಯಲಾಗಿದೆ. ಇದರಿಂದ ಸೀತಾರಾಮರ ಕಲ್ಯಾಣ ಆಗುತ್ತಾ ಇಲ್ವಾ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸದ ಬಗ್ಗೆ ಇದುವರೆಗೆ ಬಾಯಿಬಿಟ್ಟಿಲ್ಲ. ಏಕೆಂದರೆ ಇಡೀ ಸೀರಿಯಲ್​ನಲ್ಲಿ ಇರುವ ಸಸ್ಪೆನ್ಸ್ ಇದೊಂದೇ. ಸಿಹಿ ಯಾರು? ಸೀತಾಳಿಗೆ ನಿಜಕ್ಕೂ ಮದ್ವೆಯಾಗಿತ್ತಾ? ಸಿಹಿ ಅವಳ ಮಗಳಾ ಎನ್ನುವುದು ಬಯಲಾಗಿಲ್ಲ. 

ಪುಟ್ಟಕ್ಕನ ಮಕ್ಕಳು ರಾಜಿ ವಿವಾಹ ವಾರ್ಷಿಕೋತ್ಸವ: ಭರ್ಜರಿ ಡ್ಯಾನ್ಸ್​ ಜೊತೆ ಪಾದಪೂಜೆ- ನಟಿ ಅದಿತಿ ಕಣ್ಣೀರು

 

ಇದರ ನಡುವೆಯೇ ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ಆದರೆ ರುದ್ರಪ್ರತಾಪನನ್ನು ಇದಾಗಲೇ ಮಟ್ಟ ಹಾಕಲಾಗಿದೆ. ಭಾರ್ಗವಿಯ ಕುತಂತ್ರ ಬಯಲಾಗುವ ಭಯದಲ್ಲಿ ಇರುವ ಕಾರಣ ಸದ್ಯ ಅವಳೂ ಬಾಲ ಮುದುಡಿಕೊಂಡು ಇರುತ್ತಾಳೆ ಎನ್ನುವುದು ಸತ್ಯವಾದರೂ ಸಿಹಿ, ಸೀತಾಳ ಹಿನ್ನೆಲೆ ಮದುವೆಗೆ ವಿಘ್ನ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾದರೆ, ಮದುವೆ ನಡೆಯುತ್ತದೆ, ಆದರೆ ಇದೇ ಹಿನ್ನೆಲೆಯಿಂದಾಗಿಯೇ ಅವರಿಬ್ಬರ ಮದುವೆ ಲೈಫ್​ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​  ಕುತೂಹಲದಿಂದ ಕೂಡಿದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. 

ಅನುಶ್ರೀ, ಚೈತ್ರಾ ಇಬ್ರಿಬ್ರು ಸಿಂಡ್ರೆಲ್ಲಾ... ಯಾರಿಗೆ ಐ ಲವ್​ ಯು ಹೇಳೋದಂತೆನೇ ಗೊತ್ತಾಗ್ತಿಲ್ವಲ್ಲಾ... ಅಂತಿದ್ದಾರೆ ಫ್ಯಾನ್ಸ್​!

Latest Videos
Follow Us:
Download App:
  • android
  • ios