ಇಬ್ರಿಬ್ರು ಸಿಂಡ್ರೆಲ್ಲಾ... ಯಾರಿಗೆ ಐ ಲವ್​ ಯು ಹೇಳೋದಂತೆನೇ ಗೊತ್ತಾಗ್ತಿಲ್ವಲ್ಲಾ... ಅಂತಿದ್ದಾರೆ ಫ್ಯಾನ್ಸ್​!

ಆ್ಯಂಕರ್ಸ್​ ಅನುಶ್ರೀ ಮತ್ತು ಚೈತ್ರಾ ವಾಸುದೇವನ್​ ಅವರು ಸಿಂಡ್ರೆಲ್ಲಾ ಸಿಂಡ್ರೆಲ್ಲಾ ಎಂದು ರೀಲ್ಸ್​ ಮಾಡಿದ್ದು ಫ್ಯಾನ್ಸ್​ ಏನು ಹೇಳ್ತಿದ್ದಾರೆ ನೋಡಿ...
 

Anchors Anushree and Chaitra Vasudevan reeled in Cinderella Cinderella fans reacts

ಸಿಂಡ್ರೆಲ್ಲಾ ಸಿಂಡ್ರೆಲ್ಲಾ... ಐ ಲವ್​ ಯು ಅನ್ನೇ ಒಂದ್ಸಲ ಎನ್ನುತ್ತಲೇ ಸಿಂಡ್ರೆಲ್ಲಾ ಡ್ರೆಸ್​ ಹಾಕಿಕೊಂಡ ಆ್ಯಂಕರ್​ಗಳಾದ ಅನುಶ್ರೀ ಮತ್ತು ಚೈತ್ರಾ ವಾಸುದೇವನ್​ ರೀಲ್ಸ್​ ಮಾಡಿದ್ದು, ಅದನ್ನು ಚೈತ್ರಾ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗ್ತಿದ್ದು, ಇಬ್ಬರು ಸಿಂಡ್ರೆಲ್ಲಾಗಳಲ್ಲಿ ಯಾರಿಗೆ ಐ ಲವ್​ ಯು ಹೇಳೋದಂತೆನೇ ಗೊತ್ತಾಗ್ಲಿಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್​. ಕಾಮಿಡಿ ಕಿಲಾಡಿಗಳು ಪ್ರೀಮಿಯರ್​ ಲೀಗ್​ನ ಫ್ಯಾಂಟಸಿ ರೌಂಡ್​ಗೆ ರೆಡಿಯಾಗಿರೋ ಚೈತ್ರಾ ಅವರು ಇದೇ ವೇಳೆ ಇನ್ನೋರ್ವ ಆ್ಯಂಕರ್​ ಅನುಶ್ರೀ ಜೊತೆ ಈ ರೀಲ್ಸ್​ ಮಾಡಿದ್ದಾರೆ. ಅನುಶ್ರೀ ಅವರು ಇದಾಗಲೇ ಹಲವಾರು ಷೋಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಕಳೆದ 10 ವರ್ಷಗಳಿಂದ ಚೈತ್ರಾ ವಾಸುದೇವನ್ ಅವರು ನಿರೂಪಕಿಯಾಗಿ ಸಾಕಷ್ಟು ಇವೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ಇದೀಗ ಮೊದಲ ಬಾರಿಗೆ  ಕಾಮಿಡಿ ಷೋ ನಿರೂಪಣೆ ಮಾಡುತ್ತಿದ್ದಾರೆ.

ಇನ್ನು ಆ್ಯಂಕರ್​ ಅನುಶ್ರೀ ಅವರ ಕುರಿತು ಹೇಳುವುದೇ ಬೇಡ.   ಕಿರುತೆರೆ ವೀಕ್ಷಕರಿಗೆ ಈಕೆ ಮನೆಮಗಳಾಗಿರುವ ನಿರೂಪಕಿ,  ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

ಆದರೆ ಚೈತ್ರಾ ಅವರು ಈಗಷ್ಟೇ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್ ಅವರ ನಿರೂಪಣೆ ನೋಡಿ ನನಗೂ ನಿರೂಪಕಿ ಎಂಬ ಕನಸಿತ್ತು. ಅದು ಈ ವೇದಿಕೆ ಮೂಲಕ ನನಸಾಗಿದೆ. ಈ ವೇದಿಕೆ ಮೇಲೆ ನಿಂತು ನಿರೂಪಣೆ ಮಾಡೋದು ನನ್ನ ಕನಸಾಗಿತ್ತು ಎಂದು ಚೈತ್ರಾ ವಾಸುದೇವನ್ ಕಾಮಿಡಿ ಕಿಲಾಡಿಗಳು ಷೋನಲ್ಲಿ ಹೇಳಿದ್ದಾರೆ. ಅದೇ ವೇಳೆ ತಮ್ಮ ಬದುಕಿನ ಕರಾಳ ಸತ್ಯವನ್ನೂ ಕಳೆದ ಸಂಚಿಕೆಗಳಲ್ಲಿ ಚೈತ್ರಾ ಹೇಳಿಕೊಂಡಿದ್ದರು.  ನನ್ನ ಇಂಜಿನಿಯರಿಂಗ್ ಶಿಕ್ಷಣ  ಮುಗಿದಿತ್ತು. ನಾನು ನನ್ನದೇ ಆದ ಇವೆಂಟ್ ಕಂಪೆನಿ ಆರಂಭಿಸಿದ್ದೆ. ಮನೆಯಲ್ಲಿ ಮದುವೆ ಮಾಡಿಸಿದರು. ಆದರೆ ಕೊನೆಗೆ ಆದದ್ದೆಲ್ಲಾ ಬರೀ ನೋವೇ.  ನಾನು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು. ಕೆಲ ವರ್ಷ ನೋಡಿದೆ.  ಯಾವುದೂ ಹೋಗಲಿಲ್ಲ.  ಒಂದೂ ಕಪ್ಪು ಚುಕ್ಕೆ ಇಲ್ಲದ ನನ್ನ ಜೀವನವೇ ಮದುವೆಯಿಂದ ಹಾಳಾಯಿತು. ಜೀವನ  ನನ್ನನ್ನು ಕತ್ತಲೆಗೆ ನೂಕಿತು. ಮದುವೆಯ ಬಂಧನದಿಂದ ಹೊರಕ್ಕೆ ಬಂದೆ. ಈಗ ನನ್ನ ಪಾಡಿಗೆ ನಾನಿದ್ದೇನೆ ಎಂದಿದ್ದರು. 

ಇನ್ನು ಅನುಶ್ರೀಯವರು ಎಲ್ಲಿಯೇ ಹೋದರೂ ಮದುವೆಯ ಬಗ್ಗೆ ಕೇಳಲಾಗುತ್ತದೆ.  ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್​ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್​ ಇದೇ ಪ್ರಶ್ನೆ ಕೇಳುತ್ತಾರೆ.    ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.

ಮದುಮಗಳಾದ ಆ್ಯಂಕರ್​ ಅನುಶ್ರೀ ವಿಡಿಯೋ ವೈರಲ್​! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​...

Latest Videos
Follow Us:
Download App:
  • android
  • ios