Asianet Suvarna News Asianet Suvarna News

ಪುಟ್ಟಕ್ಕನ ಮಕ್ಕಳು ರಾಜಿ ವಿವಾಹ ವಾರ್ಷಿಕೋತ್ಸವ: ಭರ್ಜರಿ ಡ್ಯಾನ್ಸ್​ ಜೊತೆ ಪಾದಪೂಜೆ- ನಟಿ ಅದಿತಿ ಕಣ್ಣೀರು

ಪುಟ್ಟಕ್ಕನ ಮಕ್ಕಳು ರಾಜಿ ಅಂದರೆ ಹಂಸಾ  ಪ್ರತಾಪ್​ ವಿವಾಹ ವಾರ್ಷಿಕೋತ್ಸವವನ್ನು ರಾಜಾ ರಾಣಿ ವೇದಿಕೆಯಲ್ಲಿ ಆಚರಿಸಿಕೊಂಡಿದ್ದಾರೆ. ಗಂಡನ ಪಾದ ಪೂಜೆ ಮಾಡುತ್ತಾ ಭಾವುಕರಾಗಿದ್ದಾರೆ.
 
 

Puttakkana Makkalu  Raji Hansa Pratap wedding anniversary at Raja Rani stage emotional suc
Author
First Published Jun 27, 2024, 12:34 PM IST

ಪುಟ್ಟಕ್ಕನ  ಮಕ್ಕಳು ವಿಲನ್​ ರಾಜೇಶ್ವರಿ ಅವರಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಅಷ್ಟಕ್ಕೂ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ  ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ ಅವರಷ್ಟೇ ಸಕತ್​ ಫೇಮಸ್​ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್​ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ.  ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap)

ಇದೀಗ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಈ ಜೋಡಿ. ರಾಜಾ ರಾಣಿ ರೀಲೋಡೆಡ್​ ರಿಯಾಲಿಟಿ ಷೋನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಸ್ಪರ್ಧಿಸುತ್ತಿದ್ದಾರೆ. ರಾಜಾ ರಾಣಿ ವೇದಿಕೆಯಲ್ಲಿಯೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಅದಕ್ಕೂ ಮುನ್ನ ಸ್ಪರ್ಧಾಳುಗಳಾಗಿರುವ ಇವರಿಬ್ಬರೂ ಭರ್ಜರಿ ಡ್ಯಾನ್ಸ್​ ಕೂಡ ಮಾಡಿದ್ದಾರೆ. ಅದಾಗ ಬಳಿಕ ಪತಿಯ ಪಾದಪೂಜೆ ಮಾಡಿರುವ ನಟಿ, 20 ವರ್ಷಗಳಲ್ಲಿ ಇದೇ ಮೊದಲು ಇಂಥದ್ದೊಂದು ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ದಾಂಪತ್ಯದ ಗುಟ್ಟನ್ನು ಹಂಸ ಹೇಳಿದ್ದಾರೆ. ಪ್ರೀತಿ ಸಿಗಬೇಕು ಎಂದರೆ ನಾವು ಪ್ರೀತಿಯನ್ನು ಹಂಚಬೇಕು. ನಾನು ಜೀವ ಕೊಡಿ ಎಂದು ಕೇಳುವುದಿಲ್ಲ. ಆದರೆ ನಾನು ಜೀವಂತ ಆಗಿರುವವರೂ ನೀವೇ ನನ್ನ ಜೀವ ಆಗಿರಬೇಕು ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆಯೇ ತೀರ್ಪುಗಾರರಾಗಿರುವ ತಾರಾ ಅನುರಾಧ ಮತ್ತು ಅದಿತಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದು ಅದರ ಪ್ರೊಮೊ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. 

ಗಂಡಿನಿಂದ ಸಪರೇಟ್​ ಆಗಿದ್ದ ಪುಟ್ಟಕ್ಕನ ಮಕ್ಕಳು ರಾಜಿ! ರಿಯಲ್​ ಸ್ಟೋರಿ ಹೇಳಿ ಕಣ್ಣೀರಾದ ಹಂಸ ಪ್ರತಾಪ್​...

ಇದೇ ವೇದಿಕೆಯಲ್ಲಿ ನಟಿ,  ತಮ್ಮ ಲೈಫ್​ ಸ್ಟೋರಿಯನ್ನು ಹಂಸ ಹೇಳಿಕೊಂಡಿದ್ದರು.  ಮದುವೆಯಾದಾಗ ನಮ್ಮಿಬ್ಬರ ನಡುವೆ ತುಂಬಾ ಡಿಫರೆನ್ಸ್​ ಇತ್ತು. ಬೇರೆ ಕಪಲ್​ಗಳನ್ನು ನೋಡಿದಾಗ ನಾವ್ಯಾಕೆ ಹೀಗೆ ಇರ್ಲಿಲ್ಲ ಅಂತ ಅಂದ್ಕೊಂಡಿದ್ವಿ. ನಿಜ ಹೇಳಬೇಕು ಎಂದ್ರೆ ಇಬ್ರೂ ಸಪರೇಟ್​ ಕೂಡ ಆದ್ವಿ. ಆದರೆ ಆ ದೇವರ ದಯೆಯಿಂದ ಮತ್ತೆ ಒಂದಾದ್ವಿ ಎಂದು ಸ್ಟೋರಿ ಹೇಳಿಕೊಂಡಿದ್ದರು. ಆಗ ಪ್ರತಾಪ್ ಅವರು ಪತ್ನಿಯನ್ನು ಸಂತೈಸಿ ಇನ್ನು ಸದಾ ಒಟ್ಟಿಗೇ ಇರೋಣ, ಏನೂ ಆಗಲ್ಲ ಎಂದಿದ್ದರು. ಇನ್ನು ಹಂಸ ಅವರ ಕುರಿತು ಹೇಳುವುದಾದರೆ, ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.   ಹಂಸ ಅವರು ಕೆಲವೊಮ್ಮೆ ತಮ್ಮ ಪತಿ ಹಾಗೂ ಹಲವು ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ತಮ್ಮನ ಪಾತ್ರದಲ್ಲಿ ನಟಿಸ್ತಿರೋ ಕಾಳಿಯ ಜೊತೆ ರೀಲ್ಸ್​ ಮಾಡುತ್ತಾರೆ.  

ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಹಲವಾರು ರೀತಿಯ ಡ್ರೆಸ್​ಗಳಲ್ಲಿ ಅವರು ಫೋಟೋಶೂಟ್​ (Photoshoot) ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಡುತ್ತಿರುತ್ತಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ. 

ಮನಸು ಮನಸುಗಳ ಸಮ್ಮಿಲನ ಅಲ್ಲಿ ಸಾಕು... ಇಲ್ಲೂ ಹಾಗೇ ಬೇಕೆಂದ್ರೆ ಹೇಗೆ- ದೇಹಗಳ ಮಿಲನವೂ ಬೇಕಲ್ವಾ?

 
Latest Videos
Follow Us:
Download App:
  • android
  • ios