Asianet Suvarna News Asianet Suvarna News

ಸೀತಾಗೆ ಮಗುವಿದ್ರೂ ರಾಮನ ಜೊತೆ ಮದುವೆಗೆ ಜನರ ಫುಲ್ ಸಪೋರ್ಟ್, ಬದಲಾಗಿದೆ ಟ್ರೆಂಡ್!

ಸೀತಾರಾಮ ಕಲ್ಯಾಣಕ್ಕೆ ವೀಕ್ಷಕರು ತುಂಬು ಮನಸ್ಸಿಂದ ಹಾರೈಸುತ್ತಿದ್ದಾರೆ. ಇಲ್ಲಿ ಸೀತಾಗೆ ಮಗು ಇರೋದೆಲ್ಲ ಮ್ಯಾಟರ್ ಆಗ್ತಿಲ್ಲ ಅನ್ನೋದೇ ಸಂತೋಷ ತರೋ ಸಂಗತಿ.

seetharama kalyana serial seetha marriage with rama
Author
First Published Jul 1, 2024, 11:45 AM IST

ಸಾಮಾನ್ಯವಾಗಿ ಸೀರಿಯಲ್‌ ಕಥೆಗೆ ಒಂದಿಲ್ಲೊಂದು ಕೊಂಕು ಬರುತ್ತಲೇ ಇರುತ್ತದೆ. ನಾವೆಷ್ಟೋ ಲಿಬರಲ್ ಅಂದರೂ ಸಣ್ಣ ಮನಸ್ಸಿನ ಕೆಲವು ಜನ ಕುಟುಕುತ್ತಲೇ ಇರುತ್ತಾರೆ. ಆದರೆ ಯಾವುದೇ ಕಥೆಯನ್ನು ಎಷ್ಟು ಕನ್ವಿಸಿಂಗ್ ಆಗಿ ಹೇಳಬಹುದು ಎಂಬುದಕ್ಕೆ ಉದಾಹರಣೆ ಸೀತಾರಾಮ ಸೀರಿಯಲ್. ಈ ಸೀರಿಯಲ್ ಶುರುವಾಗುವಾಗಲೇ ಸೀತಾಗೆ ಸಿಹಿ ಎಂಬ ಐದು ವರ್ಷದ ಮಗಳಿದ್ದಾಳೆ. ಅವಳಿಗೆ ಮೂವತ್ತರ ಆಸುಪಾಸಿನ ವಯಸ್ಸು. ತೀರಾ ಸಾಮಾನ್ಯ ಮಧ್ಯಮ ವರ್ಗದ ಹೆಣ್ಣುಮಗಳು. ಈಕೆಯನ್ನು ಹೆಚ್ಚು ಕಮ್ಮಿ ಇದೇ ವಯಸ್ಸಿನ ಶ್ರೀರಾಮ್ ದೇಸಾಯಿ ಇಷ್ಟಪಡುತ್ತಾನೆ. ಆತ ಬಿಲಿಯನೇರ್. ದೇಸಾಯಿ ಗ್ರೂಪ್ ಆಫ್ ಕಂಪನೀಸ್ ಒಡೆಯ. ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದವನು. ಆತ ಮಧ್ಯಮ ವರ್ಗದ ಹುಡುಗಿಯನ್ನು ಅದೂ ಒಂದು ಮಗು ಇರುವ ಹೆಣ್ಣನ್ನು ಮದುವೆ ಆಗೋದು ಅಂದರೆ ಸಾಮಾನ್ಯ ಜನರಿಗೆ ಯೋಚನೆಗೂ ನಿಲುಕದ್ದು.

ಹೀಗೆ ವಿಭಿನ್ನ ಚಿಂತನೆಗಳಿಂದ ಆರಂಭದಿಂದಲೇ ಗಮನ ಸೆಳೆದ ಸೀರಿಯಲ್ ಇದು. ಶುರು ಶುರುವಿನಲ್ಲಿ ಜನರೆಲ್ಲ ಬಹುಶಃ ಮಗು ಸಿಹಿ ಅವಳ ಮಗಳಿರಲಿಕ್ಕಿಲ್ಲ, ಬೇರೆ ಯಾರದೋ ಮಗುವನ್ನು ಸಾಕುತ್ತಿದ್ದಾಳೆ ಅಂತ ಗೆಸ್ ಮಾಡಿದರು. ಜನರ ಈ ಗೆಸ್ ಈಗಲೂ ಹಾಗೇ ಇದೆ. ಈ ನಡುವೆ ಸಿಹಿ ಮಗಳಾಗಿಯೇ ಮದುವೆ ಮನೆಯಲ್ಲಿ ಓಡಾಡುತ್ತಿದ್ದಾಳೆ. ಅವಳ ಟೀಚರ್‌ಗೂ ಅಮ್ಮನ ಮದುವೆಗೆ ಇನ್ವೈಟ್ ಮಾಡಿದ್ದಾಳೆ. ಇಲ್ಲಿ ಜನರ ಸಣ್ಣ ಮನಸ್ಸನ್ನು ತೋರಿಸುವ ರೀತಿ ಇಲ್ಲ. ಜೊತೆಗೆ ಜನ ಕಾಮೆಂಟ್ ಮಾಡುವಾಗಲೂ ಮಗುವಿರುವ ನಾಯಕಿಯ ಮದುವೆಯನ್ನು ಸಹಜವಾಗಿಯೇ ತಗೊಂಡಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬಹುದು.

 ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಲೈಫಾ; ಯಶ್ ಪ್ರಶ್ನೆಗೆ ಉತ್ರ ಕೊಟ್ರಾ ಅನುಶ್ರೀ..?

ಸದ್ಯ ಈ ಸೀರಿಯಲ್‌ನಲ್ಲಿ ಸೀತಾರಾಮ ಕಲ್ಯಾಣ ಒಂದೇ ಬಾಕಿ. ಜನ ಈ ಮದುವೆ ನೋಡಲು ಕಾತರದಿಂದ ಕಾಯ್ತಿದ್ದಾರೆ. ಈಗಾಗಲೇ ಕಂಕಣ ಕಟ್ಟೋದು, ಹಳದಿ ಶಾಸ್ತ್ರವೂ ಕೂಡ ಆಗಿದೆ. ಇನ್ನೇನು ಸಂಗೀತ, ಮೆಹೆಂದಿ, ಮದುವೆ ಶಾಸ್ತ್ರಗಳು ಆರಂಭವಾಗಬೇಕಿವೆ. ಶ್ರೀರಾಮ್ ದೇಸಾಯಿ ಬಿಳಿ ಬಣ್ಣದ ಬಟ್ಟೆ ಧರಿಸಿ, ಪೇಟ ಸುತ್ತಿಕೊಂಡಿದ್ದರೆ, ಸೀತಾ ಮಾತ್ರ ಕೆಂಪು ಬಣ್ಣದ ಅಂಚು ಇರುವ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಆರಂಭದಲ್ಲಿ ಶ್ರೀರಾಮ್ ಚಿಕ್ಕಮ್ಮ ಭಾರ್ಗವಿಯೇ ಈ ಮದುವೆ ತಡೆಯಲು ನೋಡಿದ್ದಳು. ಆದರೆ ಆಗಲಿಲ್ಲ. ಶ್ರೀರಾಮ್ ತಾಯಿ ವಾಣಿ ವಿಲ್‌ನಲ್ಲಿ ಟ್ವಿಸ್ಟ್ ಕೊಟ್ಟಿದ್ದಕ್ಕೆ ಭಾರ್ಗವಿ ಈ ಮದುವೆ ಮಾಡಬೇಕು ಎಂದು ಫಿಕ್ಸ್ ಆದಳು. ದೇಸಾಯಿ ಮನೆಗೆ ಸೀತಾ ಬಂದಮೇಲೆ ಅವಳಿಗೆ ಹಿಂಸೆ ಕೊಟ್ಟು ಆಸ್ತಿಯನ್ನು ಕಬಳಿಸೋದು ಭಾರ್ಗವಿಯ ಪ್ಲ್ಯಾನ್. ಶ್ರೀರಾಮ್ ಅವನ ಆಸ್ತಿಯನ್ನು ಹೆಂಡ್ತಿ, ಮಕ್ಕಳಿಗೆ ಮಾತ್ರ ಬರೆಯಬಹುದು. ಹೀಗಾಗಿ ಭಾರ್ಗವಿಯು ಸೀತಾ ಹೆಸರಲ್ಲಿ ಆಸ್ತಿ ಬರೆದಮೇಲೆ ಅದನ್ನು ತಾನು ಪಡೆದು ಕೊಳ್ಳಬಹುದು ಎಂದು ಕೊಂಡಿದ್ದಳು.

ಸೀತಾಗೆ ಹಣದ ಆಸೆ ಇಲ್ಲ, ರಾಮ್ ಆಸ್ತಿಯೂ ಬೇಕಿಲ್ಲ. ಯಾವಾಗಲೂ ರಾಮ್ ಪ್ರೀತಿಯನ್ನು ಸೀತಾ ಬಯಸುತ್ತಾಳೆ. ಅವಳೇ ತನ್ನ ಮನೆಗೆ ಸೊಸೆ ಆದರೆ ತನ್ನ ಇಷ್ಟ ಈಡೇರುತ್ತದೆ ಎನ್ನೋದು ಭಾರ್ಗವಿಯ ಪ್ಲ್ಯಾನ್. ಈಗ ಅದ್ದೂರಿಯಾಗಿ ಸೀತಾ-ರಾಮ್ ಕಲ್ಯಾಣವಾಗಿದೆ. ಇನ್ಮುಂದೆ ಸೀತಾ ಶಾಂತಮ್ಮನ ವಠಾರದಲ್ಲಿ ಇರೋದಿಲ್ಲ. ತನ್ನ ಮನೆಯನ್ನು, ಆ ಮನೆಯಲ್ಲಿರುವ ನೆನಪುಗಳನ್ನು ಸೀತಾ-ಸಿಹಿ ಇಬ್ಬರೂ ಮಿಸ್ ಮಾಡಿಕೊಳ್ತಿದ್ದಾರೆ. ಈ ಅದ್ದೂರಿ ಕಲ್ಯಾಣ ನೋಡಲು ವೀಕ್ಷಕರು ಕಾತುರದಿಂದಿದ್ದಾರೆ. ಈಗಾಗಲೇ ವಾಹಿನಿಯು ಮದುವೆಯ ಝಲಕ್ ತೋರಿಸುವ ವಿಡಿಯೋ ರಿಲೀಸ್ ಮಾಡಿ, ಕುತೂಹಲವನ್ನು ಹೆಚ್ಚಿಸಿದೆ.

 ಹೆಗಲ ಮೇಲೆ ಕೈ ಹಾಕಿಲ್ಲವೆಂದು ಮುನಿಸಿಕೊಂಡ ಸೀತಾ ಹೊಟ್ಟೆ ಮೇಲೆಯೇ ಹೊಡೆದು ಹೋಗೋದಾ?

ಬಹುಶಃ ಸೀತಾ ಮಗಳ ರಹಸ್ಯ ಇಲ್ಲಿ ಬಯಲಾದರೂ ಆಗಬಹುದು. ಮುಂದೆಯೂ ಈ ಬಗ್ಗೆ ಇನ್ಫೋ ಸಿಗಬಹುದು. ಸಿಹಿ ನಿಜಕ್ಕೂ ಸೀತಾ ಮಗಳಾ ಅನ್ನೋದು ತಿಳೀಬಹುದು. ಸದ್ಯಕ್ಕಂತೂ ಸೀತಾರಾಮ ಕಲ್ಯಾಣ ಕಣ್ತುಂಬಿಸಿಕೊಳ್ಳೋಣ.

 

 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios