ʼಸೀತಾರಾಮʼ ನಟಿ ರಮೋಲ ತಿಂಗಳು ಖರ್ಚಿನ ದುಡ್ಡಲ್ಲಿ ಕಾರ್ ತಗೋಬಹುದು! ಹುಡುಗನ ಕಥೆ ಗೋವಿಂದ ಎಂದ ನೆಟ್ಟಿಗರು!
ʼಸೀತಾರಾಮʼ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರ ಮಾಡುತ್ತಿದ್ದ ನಟಿ ರಮೋಲ ಅವರು ಒಂದು ದಿನಕ್ಕೆ ಎಷ್ಟು ರೂಪಾಯಿ ಖರ್ಚು ಮಾಡ್ತಾರೆ ಎಂದು ಹೇಳಿದ್ದಾರೆ. ಈ ದುಡ್ಡಿಂದ ಒಂದು ಕಾರ್ ಬರೋದು ಗ್ಯಾರಂಟಿ.

ಕೆಲ ನಟಿಯರು ದಿನಕ್ಕೆ ಎಷ್ಟು ಖರ್ಚು ಮಾಡಬಹುದು ಎಂಬ ಸಂದೇಹ ಇರಬಹುದು. ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ʼಸೀತಾರಾಮʼ ಧಾರಾವಾಹಿ ನಟಿ ರಮೋಲ ಅವರು ದಿನಕ್ಕೆ ಖರ್ಚು ಮಾಡಿದ ಹಣ ಕೇಳಿ ಎಲ್ಲರೂ ಕಂಗಾಲಾಗಿದ್ದಾರೆ. ಈ ಹಣವನ್ನು ಒಂದು ತಿಂಗಳು ಉಳಿಸಿಕೊಂಡರೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಬಹುದು.
ಈ ನಟಿಯರ ಖರ್ಚು ಇಷ್ಟೊಂದಾ?
ʼಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಮೆಂಟರ್ ಆಗಿರುವ ಅಮೃತಾಗೆ ಅವರ ಒಂದು ದಿನದ ಖರ್ಚು ಎಷ್ಟು ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅವರು ʼದಿನಕ್ಕೆ ಮೂರು ಸಾವಿರ ರೂಪಾಯಿ ಖಾಲಿ ಮಾಡ್ತೀನಿʼ ಎಂದು ಹೇಳಿದರು. ಇನ್ನು ʼಬಿಗ್ ಬಾಸ್ʼ ಖ್ಯಾತಿಯ ಪವಿ ಪೂವಪ್ಪಗೆ ಎಷ್ಟು ಖರ್ಚು ಮಾಡ್ತೀರಾ ಅಂತ ಕೇಳಿದ್ದಕೆ “ಅದಿಕ್ಕೆ, ಇದಿಕ್ಕೆ ಅಂತ ದಿನಕ್ಕೆ ಒಂದೂವರೆ ಸಾವಿರ ರೂಪಾಯಿ ಮೇಲೆ ಬೇಕು” ಎಂದು ಹೇಳಿದ್ದರು. ಇನ್ನು ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದ ರಮೋಲಾಗೆ ಎಷ್ಟು ಖರ್ಚಾಗುತ್ತದೆ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಅವರು “ದಿನಕ್ಕೆ ಹತ್ತು ಸಾವಿರ ರೂಪಾಯಿ” ಎಂದು ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಕಂಗಾಲಾಗಿದ್ದಾರೆ. ಹತ್ತು ಸಾವಿರ ರೂಪಾಯಿಯಲ್ಲಿ ಏನೇನು ಖರ್ಚು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ತಿಂಗಳಿಗೆ ಇಷ್ಟೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದು ಓರ್ವರು ಕೇಳಿದರೆ, ಇನ್ನೊಬ್ಬರು ಹುಡುಗನ ಕಥೆ ಅಷ್ಟೇ ಎಂದು ಕೂಡ ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಮೆಂಟ್ ಮಾಡಲಾಗ್ತಿದೆ.
ಸೀರಿಯಲ್ ಬಿಟ್ಟು, ದೇಶ- ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡತಿ ಫೇಮ್ ರಮೋಲ
ಅರ್ಧಕ್ಕೆ ಧಾರಾವಾಹಿಯಿಂದ ಹೊರನಡೆದರು!
ʼಸೀತಾರಾಮʼ ಧಾರಾವಾಹಿ ನಟಿ ರಮೋಲ ಅವರು ಈ ಹಿಂದೆ ʼಕನ್ನಡತಿʼ ಧಾರಾವಾಹಿಯಲ್ಲಿ ಸಾನಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರದಲ್ಲಿ ಈ ತಂಡದಲ್ಲಿ ಸಮಸ್ಯೆ ಆಯ್ತು ಎಂದು ಧಾರಾವಾಹಿಯಿಂದ ಹೊರನಡೆದಿದ್ದರು. ಇನ್ನು ಸಿನಿಮಾವೊಂದರಲ್ಲಿ ನಟಿಸಿದ್ದು, ಆ ಚಿತ್ರತಂಡದ ಜೊತೆಯೂ ಒಂದಷ್ಟು ಸಮಸ್ಯೆ ಆಗಿ ವಿವಾದ ಸೃಷ್ಟಿ ಮಾಡಿತ್ತು.
ಹಸಿರು ಸೀರೆಲಿ ಮಿಂಚಿದ ರಮೋಲ: ಹುಡುಗರ ಹೃದಯಕ್ಕೆ ಬಾಂಬ್ ಬಿದ್ದಂಗಾಯ್ತು ಎಂದ ನೆಟ್ಟಿಗರು
ಫಿಟ್‌ನೆಸ್ ಕಡೆಗೆ ತುಂಬ ಗಮನ!
ಕೆಲ ತಿಂಗಳುಗಳಿಂದ ರಮೋಲ ಅವರ ಪಾತ್ರ ʼಸೀತಾರಾಮʼ ಧಾರಾವಾಹಿಯಲ್ಲಿ ಕಾಣಿಸುತ್ತಿಲ್ಲ. ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ಅವರು ಉತ್ತಮವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಳ್ಳುತ್ತಿರುತ್ತಾರ. ಫಿಟ್‌ನೆಸ್ ಕಡೆಗೆ ತುಂಬ ಗಮನ ಕೊಡುವ ಅವರು ಜಂಕ್ ಫುಡ್ ಮುಟ್ಟೋದೇ ಇಲ್ವಂತೆ. ಯಾವಾಗಲೂ ತರಕಾರಿ, ಹಣ್ಣು ತಿನ್ನುತ್ತಿರುತ್ತಾರಂತೆ. ಅಷ್ಟೇ ಅಲ್ಲದೆ ವರ್ಕೌಟ್ ಕೂಡ ಮಾಡುತ್ತಾರೆ.