Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸೀರಿಯಲ್ ಬಿಟ್ಟು, ದೇಶ- ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡತಿ ಫೇಮ್ ರಮೋಲ

ಸೀರಿಯಲ್ ಬಿಟ್ಟು, ದೇಶ- ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡತಿ ಫೇಮ್ ರಮೋಲ

ಕನ್ನಡತಿ ಧಾರಾವಾಹಿಯಲ್ಲಿ ಸಾನಿಯಾ ಆಗಿ ಮಿಂಚಿದ್ದ ನಟಿ ರಮೋಲ ಸದ್ಯ ಸೀರಿಯಲ್ ಬಿಟ್ಟು ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ.   

Pavna Das | Published : Jun 23 2024, 05:26 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
Asianet Image

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ (Kannadathi serial) ವಿಲನ್ ಸಾನಿಯಾ ಪಾತ್ರಕ್ಕೆ ಜೀವ ತುಂಬಿದ ನಟಿ ರಮೋಲಾ. ಇವರು ಸೀರಿಯಲ್ ಅರ್ಧದಲ್ಲೇ ಬಿಟ್ಟರೂ ಸಹ ಇಂದಿಗೂ ಜನ ಇವರನ್ನ ಗುರುತಿಸೋದು ಕನ್ನಡತಿಯ ಸಾನಿಯಾ ಆಗಿ. 
 

27
Asianet Image

ಕನ್ನಡತಿ ಧಾರಾವಾಹಿಯಲ್ಲಿ ಇವರ ನಟನೆಗೆ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ರು. ಆ ಕೋಪ, ವಿಲನ್ ಲುಕ್, ಆ ಆಟಿಟ್ಯೂಡ್ ಸಾನಿಯಾ ಪಾತ್ರಕ್ಕೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಿತ್ತು. ಹಾಗಾಗಿ ಮೊದಲ ಸೀರಿಯಲ್ ಮೂಲಕವೇ ನಟಿ ವಿಲನ್ (villain) ಪಾತ್ರವಾದರೂ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 
 

37
Asianet Image

ಕನ್ನಡತಿಯ ಬಳಿಕ ಕೆಲವೊಂದು ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ಇವರಿಗೆ ಹೆಸರು ತಂದು ಕೊಟ್ಟಿಲ್ಲ. ಸಿನಿಮಾ ವಿಚಾರದಲ್ಲಿ ಕೊಂಚ ಗಲಾಟೆಯೂ ನಡೆದಿದ್ದು, ಸಿನಿಮಾ ಬಿಡುಗಡೆಯಾಗಿದ್ಯಾ ಅನ್ನೋದು ತಿಳಿದಿಲ್ಲ. 
 

47
Asianet Image

ಇನ್ನು ರಮೋಲ (Raamola) ಹಲವು ಸೀರಿಯಲ್ ನಲ್ಲಿ ಕಾಣಿಸಿಕೊಂಡಲು, ಎಲ್ಲವೂ ಒಂದೆರಡು ಎಪಿಸೋಡ್ ಗಳು ಅಷ್ಟೇ. ಅಮೃತಧಾರೆ, ಸೀತಾ ರಾಮ, ಅಂತರಪಟ ಹೀಗೆ ಮೂರು ಸೀರಿಯಲ್ ಗಳಲ್ಲಿ ಹೀಗೆ ಬಂದು ಹಾಗೇ ಹೋಗುವ ಪಾತ್ರದಲ್ಲಿ ರಮೋಲ ನಟಿಸಿದ್ದರು. 
 

57
Asianet Image

ಸದ್ಯ ನಟಿ ಯಾವುದೇ ಸಿನಿಮಾ, ಸೀರಿಯಲ್ ಗಳಲ್ಲೂ ನಟಿಸುತ್ತಿಲ್ಲ. ಹಾಗಾಗಿ ಟ್ರಾವೆಲ್ ಮಾಡ್ತಾ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ರೀಲ್ಸ್ ಹಾಕುತ್ತಾ, ಸಖತ್ತಾಗಿ ಡ್ಯಾನ್ಸ್ ಮಾಡ್ತಾ ಸುದ್ದಿಯಲ್ಲಿರುತ್ತಾರೆ. 
 

67
Asianet Image

ಈ ಬಾರಿ ನಟಿ ವಿಯೆಟ್ನಾಂ (Vietnam) ಪ್ರವಾಸಕ್ಕೆ ತೆರಳಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಿಯೇ ಎಂಜಾಯ್ ಮಾಡ್ತಿದ್ದಾರೆ.. ಜೊತೆಗೆ ಸುಂದರವಾದ ಜಾಗಗಳಲ್ಲಿ ಫೋಟೋಗಳನ್ನು ಕ್ಲಿಕ್ ಮಾಡುತ್ತಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ. 
 

77
Asianet Image

ಸಾನಿಯಾ ತುಂಬಾನೆ ಸ್ಟೈಲಿಶ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಸುಂದರಿ, ಧರೆಗಿಳಿದ ಅಪ್ಸರೆ, ಅಂದ ಅಂದ್ರೆ ನೀವೆ ಇರಬೇಕು, ತುಂಬಾನೆ ಸೆಕ್ಸಿಯಾಗಿ ಕಾಣಿಸ್ತಿದ್ದೀರಾ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಫೋಟೋ ನೋಡಿ ನಿಮಗೆ ಏನು ಅನಿಸಿತು ಹೇಳಿ? 
 

Pavna Das
About the Author
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More...
ನಟಿ
 
Recommended Stories
Top Stories