ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಪಾತ್ರ ಅಂತ್ಯ ಆಗಿರೋದು ಅನೇಕರಿಗೆ ಬೇಸರ ತಂದಿತ್ತು. ವೀಕ್ಷಕರಿಗೆ ಈಗ ಗುಡ್‌ನ್ಯೂಸ್‌ ಸಿಕ್ಕಿದೆ. ಏನದು? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ ನಟನೆಯ ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಪಾತ್ರ ಅಂತ್ಯ ಮಾಡಿರೋದು ಅನೇಕರಿಗೆ ಬೇಸರ ತಂದಿದೆ. ಸಿಹಿ ಸತ್ತುಹೋದಮೇಲೆ ನಾವು ಈ ಸೀರಿಯಲ್‌ ನೋಡಲ್ಲ ಅಂತ ಕೆಲವರು ಹೇಳಿದ್ದೂ ಇದೆ. ಹೀಗಿರುವಾಗ ಸಿಹಿ ಗಂಧರ್ವ ದೇವತೆಯಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ತಿದ್ದಾಳೆ. ಇದು ಕೂಡ ವೀಕ್ಷಕರಿಗೆ ಅಷ್ಟು ಹಿಡಿಸ್ತಿಲ್ಲ. ಇನ್ನೊಂದು ಕಡೆ ಸುಬ್ಬಿಯ ಎಂಟ್ರಿ ಆಗಿದೆ.

ಸೀತಾಗೋಸ್ಕರ ಸಿಹಿ ಮತ್ತೆ ಬರಬೇಕು! 
ಹೌದು, ಸರೋಗಸಿ ಮದರ್‌ ಸೀತಾ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಸಿಹಿ ಮಾತ್ರ ಸೀತಾ ಕೈಸೇರಿದರೆ, ಸುಬ್ಬಿಯನ್ನು ಓರ್ವ ತಾತ ಕದ್ದುಕೊಂಡು ಹೋಗಿ ತನ್ನ ಜೊತೆ ಸಾಕಿಕೊಂಡಿದ್ದನು. ಈ ವಿಷಯ ಯಾರಿಗೂ ಗೊತ್ತಿಲ್ಲ. ಇನ್ನೊಂದು ಕಡೆ ಸಿಹಿ ಸತ್ತಾಗಿನಿಂದ ಸೀತಾ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ. ಅವಳು ಹುಷಾರಾಗಬೇಕು ಅಂದ್ರೆ ಸಿಹಿ ಮತ್ತೆ ಬದುಕಿ ಬರಬೇಕಿದೆ. ಇದಕ್ಕೋಸ್ಕರ ರಾಮ್‌ ಒದ್ದಾಡುತ್ತಿದ್ದಾನೆ.

ಫ್ಯಾನ್ಸ್​ ಆಸೆ ನೆರವೇರಿಸಿದ ಸೀತಾರಾಮ ಪ್ರಿಯಾ: ಭಾವಿ ಪತಿ ಜೊತೆಗಿನ ರೊಮಾನ್ಸ್​ ವಿಡಿಯೋ ಶೇರ್​ ಮಾಡಿದ ನಟಿ

ಶ್ರೀರಾಮ್‌ ಮನೆಗೆ ಸುಬ್ಬಿ ಎಂಟ್ರಿ! 
ಸುಬ್ಬಿ ಬಡತನದಲ್ಲಿ ಬೆಳೆದ ಹುಡುಗಿ. ಈ ಹುಡುಗಿಗೆ ಮಾತ್ರ ಸಿಹಿ ಕಾಣಿಸ್ತಾಳೆ. ಈ ವಿಷಯ ಯಾರಿಗೂ ಅರ್ಥ ಆಗ್ತಿಲ್ಲ. ಇನ್ನೊಂದು ಕಡೆ ಸುಬ್ಬಿಯನ್ನು ರಾಮ್‌ ನೋಡಿದ್ದಾನೆ. ಸುಬ್ಬಿಗೆ ಸಿಹಿ ಅವತಾರ ಹಾಕಿ ಅವಳನ್ನು ಮನೆಗೆ ಕರೆದುಕೊಂಡು ಬರೋದು ಶ್ರೀರಾಮ್‌ ಪ್ಲ್ಯಾನ್.‌ ಸುಬ್ಬಿಗೆ ಶ್ರೀರಾಮ್‌ ಕಂಡರೆ ಇಷ್ಟ ಇಲ್ಲ. ಸುಬ್ಬಿ ಒಂದಿಷ್ಟು ಶರತ್ತು ಹಾಕಿ ಶ್ರೀರಾಮ್‌ ಮನೆಗೆ ಬರಲು ರೆಡಿಯಾಗಿದ್ದಾಳೆ. ಸುಬ್ಬಿಗೆ ಹೇರ್‌ಕಟ್‌ ಮಾಡಿಸಿ, ಸಿಹಿ ಥರ ಡ್ರೆಸ್‌ ಹಾಕಿ ಅವಳನ್ನು ಪಕ್ಕಾ ಸಿಹಿ ಎನ್ನುವ ರೀತಿ ರೆಡಿ ಮಾಡಿದ್ದಾರೆ. ಈಗ ಸಿಹಿ ಅವತಾರದಲ್ಲಿರೋ ಸುಬ್ಬಿ ಸೀತಾ-ರಾಮ್ ಮನೆಗೆ ಬರೋದು‌ ಬಾಕಿ ಇದೆ.

'ಇತ್ತೀಚೆಗೆ ನಾನ್ಯಾಕೆ Seetha Raama Serial ಅಲ್ಲಿ ಕಾಣಿಸ್ತಿಲ್ಲ ಎನ್ನೋದಕ್ಕೆ ಕಾರಣ ಇದೆ': ನಟ ಅರ್ಜುನ್‌ ಆದಿದೇವ್‌

ಮುಂದಿನ ದಿನಗಳಲ್ಲಿ ಏನಾಗಲಿದೆ? 
ತಾಯಿಗೋಸ್ಕರ ಹಂಬಲಿಸುತ್ತಿರುವ ಸುಬ್ಬಿಗೆ ಸೀತಾಳಲ್ಲಿ ತಾಯಿ ಪ್ರೀತಿ ಸಿಕ್ಕೇ ಸಿಗುತ್ತದೆ. ಇನ್ನೊಂದು ಕಡೆ ಶ್ರೀರಾಮ್‌ ಒಳ್ಳೆಯವನು ಎನ್ನೋದು ಕೂಡ ಸುಬ್ಬಿಗೆ ಅರ್ಥ ಆಗಬಹುದು. ಅವಳು ಸೀತಾ-ರಾಮ್‌ನನ್ನು‌ ತಂದೆ-ತಾಯಿ ಅಂತ ಒಪ್ಪಿಕೊಳ್ಳಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ಇನ್ನು ಸುಬ್ಬಿ ಕೂಡ ಸೀತಾ ಮಗಳು ಎನ್ನುವ ಸತ್ಯ ರಿವೀಲ್‌ ಆಗಬೇಕಿದೆ. ಈ ವಿಷಯ ಗೊತ್ತಾದ ಬಳಿಕ ಮತ್ತೆ ಶ್ಯಾಮ್-ಶಾಲಿನಿ ಬಂದು ನಮಗೆ ನಮ್ಮ ಮಗಳು ಬೇಕು ಅಂತ ಹೇಳಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ಸದ್ಯ ಈ ಧಾರಾವಾಹಿಯು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 5.30ಕ್ಕೆ ಪ್ರಸಾರ ಆಗ್ತಿದೆ.

ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!

ಈ ಧಾರಾವಾಹಿ ಕಥೆ ಏನು? 
ಸಿಹಿಯಿಂದಾಗಿ ಸೀತಾ-ರಾಮ್‌ ಒಂದಾಗುವ ಕಥೆಯೇ ʼಸೀತಾರಾಮʼ ಧಾರಾವಾಹಿ. ಈ ಸೀರಿಯಲ್‌ನಲ್ಲಿ ಸರೋಗಸಿ ಮದರ್‌ ಕಥೆಯೂ ಇದೆ. ಸೀತಾ-ರಾಮ್‌ ಜೀವನಕ್ಕೆ ಕೊಂಡಿಯಾಗಿದ್ದ ಸಿಹಿಯನ್ನು ಭಾರ್ಗವಿ ಕೊಂದಿದ್ದಾಳೆ. ಈ ಸತ್ಯ ಎಲ್ಲರ ಮುಂದೆ ರಿವೀಲ್‌ ಆಗಬೇಕಿದೆ. ಇನ್ನೊಂದು ಕಡೆ ಸುಬ್ಬಿಯ ಕಥೆ ಏನಾಗುವುದು ಎಂಬ ಆತಂಕವೂ ಇದೆ. ಹಾಗಾದರೆ ಮುಂದೆ ಏನು? 

ಪಾತ್ರಧಾರಿಗಳು ಯಾರು?
ಶ್ರೀರಾಮ್‌ ಪಾತ್ರದಲ್ಲಿ‌ ಗಗನ್ ಚಿನ್ನಪ್ಪ, ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್‌, ಸಿಹಿ ಪಾತ್ರದಲ್ಲಿ ರೀತು ಸಿಂಗ್‌ ನಟಿಸುತ್ತಿದ್ದಾರೆ. ಇನ್ನು ಪದ್ಮಕಲಾ ಡಿ ಎಸ್‌, ಸಿಂಧು ರಾವ್‌, ಜ್ಯೋತಿ ಕಿರಣ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.