ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ನಟನೆಯ ʼಸೀತಾರಾಮʼ ಧಾರಾವಾಹಿಯಲ್ಲಿ ಶ್ಯಾಮ್ ಪಾತ್ರದಲ್ಲಿ ಅರ್ಜುನ್ ಆದಿದೇವ್ ನಟಿಸುತ್ತಿದ್ದರು. ಈಗ ಇವರು ಧಾರಾವಾಹಿಯಿಂದ ಹೊರಬಂದಿದ್ದಾರಂತೆ.
ಸಂದರ್ಶನ
ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಪಾತ್ರದ ಅಂತ್ಯ ಆದರೂ ಕೂಡ, ಸಿಹಿ ಗಂಧರ್ವ ದೇವತೆಯಾಗಿ ವೀಕ್ಷಕರ ಮುಂದೆ ಬರುತ್ತಿದ್ದಾಳೆ. ಕೆಲ ದಿನಗಳಿಂದ ಈ ಧಾರಾವಾಹಿಯಲ್ಲಿ ಶ್ಯಾಮ್ ಪಾತ್ರ ಕಾಣಿಸ್ತಿಲ್ಲ. ಶ್ಯಾಮ್ ಪಾತ್ರ ಯಾಕೆ ಕಾಣಿಸ್ತಿಲ್ಲ ಎನ್ನೋದರ ಬಗ್ಗೆ ನಟ ಅರ್ಜುನ್ ಆದಿದೇವ್ ಹೇಳಿದ್ದಾರೆ.
ʼಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಆದಿದೇವ್ ಅವರು ʼಸೀತಾರಾಮʼ ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ʼಸೀತಾರಾಮʼ ಧಾರಾವಾಹಿ ಕಥೆ ಬಗ್ಗೆಯೂ ಮಾತನಾಡಿದ್ದಾರೆ.
ಅಪ್ಪ-ಮಗಳ ಮಧುರ ಬಾಂಧವ್ಯದ ಪಯಣ ಹಂಚಿಕೊಂಡ ರಾಮ್- ಸಿಹಿ!
ಆ ಎಪಿಸೋಡ್ ಆದ್ಮೇಲೆ ಜನರು ನೆಗೆಟಿವ್ ಕಾಮೆಂಟ್ ಹಾಕಿದ್ರು…!
“ಶ್ಯಾಮ್‌ಗೆ ಮಕ್ಕಳು ಅಂದ್ರೆ ತುಂಬ ಇಷ್ಟ. ಅವನಿಗೆ ಸಿಹಿ ಇನ್ನೂ ಇಷ್ಟ ಆಗ್ತಾಳೆ. ಆರಂಭದಲ್ಲಿ ನನ್ನ ಪಾತ್ರವನ್ನು ತುಂಬ ಇಷ್ಟಪಡುತ್ತಿದ್ದರು. ಯಾವಾಗ ಸಿಹಿ ನನ್ನ ಮಗಳು ಎನ್ನೋದು ಗೊತ್ತಾಯ್ತೋ ಆಗ ವೀಕ್ಷಕರಿಗೆ ನನ್ನ ಕಂಡ್ರೆ ಬೇಸರ ಬಂತು. ಯಾವಾಗ ಕುತ್ತಿಗೆ ಪಟ್ಟಿ ಹಿಡಿದು ಸಿಹಿ ನನ್ನ ಮಗಳು ನನಗೆ ಬೇಕು ಅಂತ ಶ್ಯಾಮ್ ಹೇಳುವಾಗ ವೀಕ್ಷಕರು ಕೆಟ್ಟದಾಗಿ ಕಾಮೆಂಟ್ ಮಾಡಲು ಆರಂಭಿಸಿದರು. ಇನ್ನೊಂದು ಕಡೆ ಶ್ಯಾಮ್ ಪಾತ್ರದ ನಟನೆಯನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಇನ್ನೊಂದು ಕಡೆ ಶ್ಯಾಮ್ ವಿಲನ್ ಅಲ್ಲ. ಶ್ಯಾಮ್ ಪಾತ್ರ ನೆಗೆಟಿವ್‌ನತ್ತ ಹೋದರೂ ಕೂಡ, ವೀಕ್ಷಕರು ಈ ಪಾತ್ರವನ್ನು ಇಷ್ಟಪಟ್ಟರೆ ನಿಜಕ್ಕೂ ಪ್ಲಸ್ ಪಾಯಿಂಟ್ ಎನ್ನಬಹುದು” ಎಂದು ಅರ್ಜುನ್ ಆದಿದೇವ್ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಹೇಗೆ ಕಥೆ ಸಾಗತ್ತೆ?
“ಸಿಹಿ ತನ್ನ ಮಗಳು, ತನ್ನ ಜೊತೆಗೆ ಇರಬೇಕು ಅಂತ ಶ್ಯಾಮ್ ಬಯಸುತ್ತಾನೆ. ಆದರೆ ಅವನ ಮಗಳಿಗೆ ಸೀತಾ-ರಾಮ್ ಜೊತೆ ಇರುವ ಆಸೆ ಇರುತ್ತದೆ. ಮಗಳಿಗೆ ಯಾರ ಜೊತೆ ಇರೋದು ಖುಷಿ ಎನಿಸುತ್ತದೆಯೋ ಅವರ ಜೊತೆ ಇರಲು ಬಿಡೋದು ಒಂದು ಕಡೆಯಾದರೆ ಮಗಳು ನನ್ನ ಜೊತೆ ಇದ್ದೇ ಖುಷಿಯಾಗಿರಲಿ ಎನ್ನೋದು ಇನ್ನೊಂದು ಕಡೆ. ಕೊನೆಗೂ ಶ್ಯಾಮ್ ಮಗಳ ಆಸೆಗೆ ಬೆಲೆ ಕೊಡುತ್ತಾನೆ. ಮುಂದೆ ಹೇಗೆ ಕಥೆ ಸಾಗತ್ತೆ ಅನ್ನೋದು ಬರಹಗಾರರಿಗೆ ಕೇಳಬೇಕಿದೆ” ಎಂದು ಶ್ಯಾಮ್ ಪಾತ್ರಧಾರಿ ಅರ್ಜುನ್ ಆದಿದೇವ್ ಹೇಳಿದ್ದಾರೆ.
ಇಂಗ್ಲಿಷ್ ಬರಲ್ಲ ಅಂತ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆಗಿದ್ದ ಇವರು ಈಗ ಕನ್ನಡ ಪ್ರೇಕ್ಷಕರ ಫೇವರಿಟ್ ನಟ!
ʼಸೀತಾರಾಮʼ ಧಾರಾವಾಹಿ ಯಾಕೆ ಬಿಟ್ಟೆ ಅಂದ್ರೆ…!
“ನಾನು ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ, ಒಂದು ಸಿನಿಮಾ ಅವಕಾಶ ಬಂತು. ಮೂರು ಭಾಷೆಗಳಲ್ಲಿ ರಿಲೀಸ್ ಆಗುವ ಆ ಸಿನಿಮಾಕ್ಕೆ ನಾನು ಒಂದೂವರೆ ತಿಂಗಳುಗಳ ಕಾಲ ನಿರಂತರವಾಗಿ ನಟಿಸಬೇಕಿತ್ತು. ಹೀಗಾಗಿ ಸೀತಾರಾಮ ಧಾರಾವಾಹಿ ತಂಡಕ್ಕೆ ನಾನು ಸೀರಿಯಲ್ ಬಿಡುವ ಒಂದೂವರೆ ತಿಂಗಳ ಮೊದಲೇ ಹೇಳಿದ್ದೆ. ತಿಂಗಳಲ್ಲಿ ಎರಡು ವಾರ ನಮ್ಮ ಧಾರಾವಾಹಿಯಲ್ಲಿ ನಟಿಸಿ ಅಂತ ಹೇಳಿದ್ರು, ಆದರೂ ನನಗೆ ಆಗಲಿಲ್ಲ. ಹೀಗಾಗಿ ನಾನು ಧಾರಾವಾಹಿ ಬಿಟ್ಟೆ. ಆದರೆ ನಾನು ಮಾಡಬೇಕಿದ್ದ ಸಿನಿಮಾ ಸ್ಬಲ್ಪ ದಿನಗಳ ಮುಂದಕ್ಕೆ ಹೋಯ್ತು. ಈಗ ಮತ್ತೆ ಧಾರಾವಾಹಿ ತಂಡದವರಿಗೆ ಈ ವಿಷಯ ಹೇಳೋದು ಸರಿ ಕಾಣಲಿಲ್ಲ. ನಾನು ಮತ್ತೆ ಈ ವಿಷಯ ಹೇಳಿದರೆ ಅವರು ಕೂಡ ಸ್ಕ್ರಿಪ್ಟ್ ಬದಲು ಮಾಡಿಕೊಳ್ಳಬೇಕಾಗುತ್ತದೆ. ಇನ್ನೊಂದು ಕಡೆ ಸೀತಾರಾಮ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರು ಆಗಿದೆ. ನನಗೆ ಮತ್ತೆ ಸೀರಿಯಲ್ ಟೀಂನಿಂದ ಫೋನ್ ಕಾಲ್ ಬಂದಿದೆ. ಮುಂದಿನ ದಿನಗಳಲ್ಲಿ ನಾನು ಈ ಸೀರಿಯಲ್‌ನಲ್ಲಿ ನಟಿಸಿದರೂ, ನಟಿಸಬಹುದು” ಎಂದು ಅರ್ಜುನ್ ಆದಿದೇವ್ ಹೇಳಿದ್ದಾರೆ.
ಅಂದಹಾಗೆ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

