'ಸೀತಾರಾಮ' ಧಾರಾವಾಹಿಯ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ಸೆಪ್ಟೆಂಬರ್ 9 ರಂದು ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್ ಅವರನ್ನು ಅರೇಂಜ್ಡ್ ಮ್ಯಾರೇಜ್ ಮೂಲಕ ವರಿಸಲಿದ್ದಾರೆ. ಮೇಲುಕೋಟೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ಮದುವೆಯ ನಂತರವೂ ನಟನೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಸೀತಾರಾಮದ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಇದೇ 9ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಸಾಫ್ಟ್​ವೇರ್​ ಎಂಜಿನಿಯರ್​ ಜಯಂತ್​ ಅವರ ಕೈಹಿಡಿಯಲಿದ್ದಾರೆ ಮೇಘನಾ. ಇದಾಗಲೇ ನಟಿ, ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿದ್ದು ಅಂದು ನಡೆದ ಘಟನೆಗಳನ್ನು ವಿವರಿಸಿದ್ದರು. ಇದೀಗ, ನಟಿ ಫೈನಲ್​ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿವಾಹ ಪೂರ್ವ ವಿಡಿಯೋ ಶೂಟ್​ ಯಾವ ಸಿನಿಮಾಗಿಂತಲೂ ಕಮ್ಮಿಯಿಲ್ಲ. ಈಗಿನ ಕಾಲದಲ್ಲಿ ಅರೇಂಜ್ಡ್​ ಮ್ಯಾರೇಜ್​ ಎನ್ನುವುದು ಅಪರೂಪ. ಅದರಲ್ಲಿಯೂ ಸೆಲೆಬ್ರಿಟಿ ಎಂದರೆ ಲವ್​ ಮ್ಯಾರೇಜೇ ಇರುತ್ತದೆ. ಆದರೆ ಮೇಘನಾ ಅವರದ್ದು ಅರೇಂಜ್ಡ್​ ಮ್ಯಾರೇಜ್​. ಕೆಲ ದಿನಗಳ ಹಿಂದೆ ವಿಡಿಯೋ ಶೇರ್​ ಮಾಡಿದ್ದ ನಟಿ, ನೆಲಮಂಗಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಶೂಟ್​ ಮಾಡಿಸಿರುವುದಾಗಿ ಹೇಳಿದ್ದರು.

ತಮ್ಮ ವೆಡ್ಡಿಂಗ್​ ಶೂಟ್​ ಟೀಮಿನ ಸಂಪೂರ್ಣ ಡಿಟೇಲ್ಸ್​ ತೋರಿಸಿದ್ದರು. ತಮ್ಮ ವಿಡಿಯೋ ಮಾಡಲು ಬಂದಿರುವ ಟೀಮ್​, ತಮ್ಮ ಮೇಕಪ್​ ಲೇಡಿ ಸೇರಿದಂತೆ ಎಲ್ಲರ ಪರಿಚಯ ಮಾಡಿರುವ ನಟಿ, ಬೆಳಿಗ್ಗೆ 3 ಗಂಟೆಗೇ ಎದ್ದು ಬಂದಿರುವ ಬಗ್ಗೆ ತಿಳಿಸಿದ್ದರು. ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿ ಆ ಸ್ಥಳದ ಪರಿಚಯವನ್ನು ಮಾಡಿಸಿರುವ ನಟಿ, ಸಂಕೋಚ ಸ್ವಭಾವದ ಭಾವಿ ಪತಿಯನ್ನು ಎಳೆದು ತಂದು ಕ್ಯಾಮೆರಾ ಮುಂದೆ ನಿಲ್ಲಿಸುವುದನ್ನು ನೋಡಬಹುದು. ಜೊತೆಗೆ ಭಾವಿ ಪತಿಯ ಜೊತೆಗೆ ರೊಮ್ಯಾಂಟಿಕ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದರು. 

ನಿರ್ಜನ ಪ್ರದೇಶದಲ್ಲಿ ಸೀತಾರಾಮ ಪ್ರಿಯಾ ಪ್ರೀ ವೆಡ್ಡಿಂಗ್​ ಶೂಟ್​: ನಡೆದ ಘಟನೆಗಳನ್ನು ಬಿಚ್ಚಿಟ್ಟ ನಟಿ ಮೇಘನಾ!

ಇದೇ ವಿಡಿಯೋದಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್​, ಅಲ್ಲಿರುವ ವ್ಯವಸ್ಥೆಗಳ ಬಗ್ಗೆಯೂ ನಟಿ ತಿಳಿಸಿದ್ದಾರೆ. ಅಂತಿಮವಾಗಿ ಪ್ರೀ ವೆಡ್ಡಿಂಗ್​ ವಿಡಿಯೋಶೂಟ್​ ಯಾವಾಗ ಬರುತ್ತದೆ ಎನ್ನುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಆ ವಿಡಿಯೋ ಶೇರ್​ ಮಾಡಿದ್ದಾರೆ. ಈ ಹಿಂದೆ ಭಾವಿ ಪತಿ ಜಯಂತ್​ ಅವರ ಗುಣಗಾನ ಮಾಡಿದ್ದ ನಟಿ, ಅವರು ಗುಡ್​ ಲುಕಿಂಗ್​, ಕೇರಿಂಗ್​, ಲವಿಂಗ್​ ಇದ್ದಾರೆ. ತುಂಬಾ ಮೆಚುರ್​ ಇದ್ದಾರೆ. ನಮ್ಮ ಜನರೇಷನ್​ಗೆ ಹೋಲಿಸಿದ್ರೆ ಅವರು ತುಂಬಾ ಮೆಚುರ್​. ತುಂಬಾ ಇಂಡಿಪೆಂಡೆಂಟ್​ ಆಗಿದ್ದಾರೆ. ಎಲ್ಲದರ ಬಗ್ಗೆ ಕ್ಲಾರಿಟಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಿಕ್ಕಾಪಟ್ಟೆ ಮಾತನಾಡುವವಳು, ಅವರು ತುಂಬಾ ಸೈಲೆಂಟ್​. ಇಬ್ಬರೂ ತುಂಬಾ ಮಾತನಾಡಿದ್ರೆ ಕಷ್ಟ ಆಗ್ತಿತ್ತು. ಈಗ ನಾನು ಮಾತನಾಡಿದ್ದನ್ನು ಅವರು ಕೇಳಿಸಿಕೊಳ್ತಾರಲ್ಲ, ಅದೇ ಖುಷಿ ಎಂದು ತಮಾಷೆ ಮಾಡಿದ್ದರು.

ಮದ್ವೆಯಾದ ಮೇಲೆ ಆ್ಯಕ್ಟಿಂಗ್​, ಸೀರಿಯಲ್​, ಯೂಟ್ಯೂಬ್​ ಎಲ್ಲಾ ಬಿಡ್ತೀರಾ ಎನ್ನುವ ಪ್ರಶ್ನೆಗೆ ತಮಾಷೆಯಾಗಿ ಮೇಘನಾ, ಇದೊಳ್ಳೆ ಪಕ್ಕದ ಮನೆ ಆಂಟಿ ಕೇಳಿರೋ ರೀತಿ ಇದೆ. ನಾನು ಯಾವುದೇ ಕಾರಣಕ್ಕೂ ಆ್ಯಕ್ಟಿಂಗ್ ಬಿಡಲ್ಲ. ಸೀತಾರಾಮ ಅಂತೂ ಮುಂದುವರೆಸುತ್ತೇನೆ. ಅದರ ಬಳಿಕ ಬೇರೆ ಪ್ರಾಜೆಕ್ಟ್​ ಸಿಕ್ಕರೂ ಮಾಡುತ್ತೇನೆ ಎಂದಿದ್ದರು. ಇದೇ ವೇಳೆ ಇವರ ಪ್ರೀ ವೆಡ್ಡಿಂಗ್ ಶೂಟ್​ ಬಗ್ಗೆಯೂ ಪ್ರಶ್ನೆಗಳು ಬಂದಿದ್ದು, ಅದಕ್ಕೆ ನಟಿ ಅದನ್ನು ಮೇಲುಕೋಟೆಯಲ್ಲಿ ಶೂಟ್​ ಮಾಡಿದ್ದು ಎಂದಿದ್ದರು. ತಮ್ಮ ಮತ್ತು ಸೀತಾ ಅಂದ್ರೆ ವೈಷ್ಣವಿ ಗೌಡ ಅವರ ಫ್ರೆಂಡ್​ಷಿಪ್​ ಬಗ್ಗೆ ಮಾತನಾಡಿರುವ ನಟಿ, ನಮ್ಮದು ಸಿಕ್ಕಾಪಟ್ಟೆ ಒಳ್ಳೆಯ ಫ್ರೆಂಡ್​ಷಿಪ್​. ನಮ್ಮಿಬ್ಬರದ್ದು ಒಂದು ಥರಾ ಲಾಸ್ಟ್​ಬೆಂಚರ್ಸ್​ ಎನ್ನಬಹುದು. ಸಿಕ್ಕಾಪಟ್ಟೆ ನಗ್ತೇವೆ, ಒಳ್ಳೆಯ ಬಾಂಡಿಂಗ್​ ಇದೆ ಎಂದಿದ್ದರು. 

ಮದುಮಗಳು ಪ್ರಿಯಾ ಹಾಗೂ ಭಾವಿ ಪತಿ ವಯಸ್ಸೆಷ್ಟು? ಬಾಡಿ ಷೇಮಿಂಗ್​ ಬಗ್ಗೆ ನೊಂದು ನಟಿ ಹೇಳಿದ್ದೇನು ಕೇಳಿ...

YouTube video player