ʼಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಇಂದು ಅವರ ಮನೆಯಲ್ಲಿ ಹಳದಿ ಶಾಸ್ತ್ರ ನಡೆದಿದೆ.  

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಸೀತಾರಾಮʼ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರ ಮಾಡ್ತಿರುವ ನಟಿ ಮೇಘನಾ ಶಂಕರಪ್ಪ ಅವರಿಂದು ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಹೌದು, ಸೋಶಿಯಲ್‌ ಮೀಡಿಯಾದಲ್ಲಿ ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮದುವೆ ಯಾವಾಗ? 
ಈಗಾಗಲೇ ಮೇಘನಾ ಅವರು ಪ್ರಿ ವೆಡ್ಡಿಂಗ್‌ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದರು. ಮೇಘನಾ ಅವರು ಮದುವೆ ಕುರಿತಾದ ಅಪ್‌ಡೇಟ್‌ಗಳನ್ನು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 8, 9ರಂದು ಮೇಘನಾ ಮದುವೆ ನಡೆಯಲಿದೆ. ʼಸೀತಾರಾಮʼ ಧಾರಾವಾಹಿ ಕಲಾವಿದರು ಸೇರಿಕೊಂಡು ಮೇಘನಾಗೆ ಬ್ಯಾಚುಲರ್‌ ಪಾರ್ಟಿ ಕೊಟ್ಟಿದ್ದರು. ಒಟ್ಟಿನಲ್ಲಿ ಮೇಘನಾ ಅವರು ಈಗಾಗಲೇ ಸಖತ್‌ ಟ್ರಿಪ್‌, ಟೂರ್‌ ಮಾಡಿದ್ದಾರೆ.

ಫ್ಯಾನ್ಸ್​ ಆಸೆ ನೆರವೇರಿಸಿದ ಸೀತಾರಾಮ ಪ್ರಿಯಾ: ಭಾವಿ ಪತಿ ಜೊತೆಗಿನ ರೊಮಾನ್ಸ್​ ವಿಡಿಯೋ ಶೇರ್​ ಮಾಡಿದ ನಟಿ

ಮೇಘನಾ ಮದುವೆಯಾಗುವ ಹುಡುಗ ಯಾರು?
ಮೇಘನಾಗೆ ಈಗ ಇಪ್ಪತ್ತೆಂಟರ ಹರೆಯ. 1996ರ ಅಕ್ಟೋಬರ್‌ 14ರಂದು ಮೇಘನಾ ಹುಟ್ಟಿದರೆ, ಅವರ ಪತಿ ಜಯಂತ್ 1996 ಜೂನ್​ 5ರಂದು ಜನಿಸಿದ್ದಾರೆ. ಇವರಿಬ್ಬರ ನಡುವೆ 4 ತಿಂಗಳ ಅಂತರ ಇದೆ. ಇವರದ್ದು ಅರೇಂಜ್ಡ್​ ಮ್ಯಾರೇಜ್​ ಅಂತೆ. ಜಯಂತ್‌ ಅವರು ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 'ಸೀತಾರಾಮ' ಧಾರಾವಾಹಿಗೂ ಮುನ್ನ ಅವರು, ಕಲರ್ಸ್ ಕನ್ನಡ ವಾಹಿನಿಯ 'ನಮ್ಮನೆ ಯುವರಾಣಿ', ʼಕಿನ್ನರಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 'ಕೃಷ್ಣ ತುಳಸಿ', 'ದೇವಯಾನಿ', 'ರತ್ನಗಿರಿ ರಹಸ್ಯ', 'ಸಿಂಧೂರ' ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಇನ್ನು ಜೀ ಕನ್ನಡದ ಡ್ಯಾನ್ಸಿಂಗ್‌ ರಿಯಾಲಿಟಿ ಶೋನಲ್ಲಿ ಮೇಘನಾ ಭಾಗವಹಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದರು. ಮೇಘನಾ ಡ್ಯಾನ್ಸ್‌ ನೋಡಿ ಶಿವರಾಜ್‌ಕುಮಾರ್‌, ರಕ್ಷಿತಾ ಪ್ರೇಮ್‌, ವಿಜಯ್‌ ರಾಘವೇಂದ್ರ, ಚಿನ್ನಿ ಪ್ರಕಾಶ್ ಮುಂತಾದವರು ಮೆಚ್ಚಿದ್ದರು.

ಮದುಮಗಳು ಪ್ರಿಯಾ ಹಾಗೂ ಭಾವಿ ಪತಿ ವಯಸ್ಸೆಷ್ಟು? ಬಾಡಿ ಷೇಮಿಂಗ್​ ಬಗ್ಗೆ ನೊಂದು ನಟಿ ಹೇಳಿದ್ದೇನು ಕೇಳಿ...

ʼಸೀತಾರಾಮʼ ಧಾರಾವಾಹಿ ಪಾತ್ರ! 
ಕನ್ನಡ ಕಿರುತೆರೆಯಲ್ಲಿ ಮೇಘನಾ ಶಂಕರಪ್ಪ ಅವರು ಪಾಸಿಟಿವ್‌, ನೆಗೆಟಿವ್‌ ಶೇಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ʼಸೀತಾರಾಮʼ ಧಾರಾವಾಹಿಯಲ್ಲಿ ಮೇಘನಾಗೂ ಹಾಗೂ ಪ್ರಿಯಾ ಪಾತ್ರಕ್ಕೂ ಅಷ್ಟು ವ್ಯತ್ಯಾಸ ಇಲ್ವಂತೆ. ಮೇಘನಾ ಕೂಡ ಬಬ್ಲಿ ಹುಡುಗಿಯಂತೆ. ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಮೇಘನಾ ರೆಡಿ ಆಗಿದ್ದಾರೆ. ಇನ್ನು ಈ ಮದುವೆಯಲ್ಲಿ ʼಸೀತಾರಾಮʼ ಸೇರಿದಂತೆ ಕಿರುತೆರೆಯ ಗಣ್ಯರು ಆಗಮಿಸಲಿದ್ದಾರೆ. ವೈಷ್ಣವಿ ಗೌಡ, ಸಿಂಧು ರಾವ್‌, ಗಗನ್‌ ಚಿನ್ನಪ್ಪ, ಅಶೋಕ್‌ ಶರ್ಮಾ, ಮುಖ್ಯಮಂತ್ರಿ ಚಂದ್ರು, ಪದ್ಮಕಲಾ ಡಿ ಎಸ್‌, ಪೂಜಾ ಶರ್ಮಾ ಮುಂತಾದವರು ಭಾಗವಹಿಸುವ ನಿರೀಕ್ಷೆ ಇದೆ. 

ಬಾಡಿ ಶೇಮಿಂಗ್‌ ಆದ್ರು..! 
ದಪ್ಪ ಇರೋದಕ್ಕೆ ಮೇಘನಾ ಶಂಕರಪ್ಪ ಅವರು ಆಗಾಗ ಟ್ರೋಲ್‌ ಆಗುತ್ತಿರುತ್ತಾರೆ. ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿರುವ ಅವರು “ನಾನು ಭಾರತೀಯರ ರೀತಿ ಇದ್ದೇನೆ. ಈ ಹಿಂದೆ ಯಾವ ರಾಣಿಯರೂ ಸ್ಲಿಮ್‌ ಆಗಿರಲಿಲ್ಲ. ಸಣ್ಣ​ ಇದ್ದರಷ್ಟೇ ಚೆಂದ ಅಂತ ಅಂದುಕೊಳ್ಳುವುದು ಯಾಕೆ ಅಂತ ನನಗೆ ಗೊತ್ತಿಲ್ಲ. ದೇಹ ಹೇಗೆ ಇರಲೀ ಆರೋಗ್ಯವಾಗಿ ಇರಬೇಕು ಅಂತ ನಾನು ಬಯಸ್ತೀನಿ. ಡಾನ್ಸ್ ಕರ್ನಾಟಕ ಡಾನ್ಸ್​ ಶೋನಲ್ಲಿ ನನ್ನ ಎನರ್ಜಿ ನೀವು ನೋಡಿದ್ದೀರಾ, ಮನೆಯ ಕೆಲಸವನ್ನು ಮಾಡ್ತೀನಿ. ಹೀಗಿರುವಾಗ ಫಿಗರ್‌ ಅಂದ್ರೆ ಏನು? ನಿಜಕ್ಕೂ ನನಗೆ ಈ ರೀತಿ ಬಾಡಿಶೇಮಿಂಗ್‌ ಮಾಡಿರೋದು ಬೇಸರ ತಂದಿದೆ” ಎಂದು ಯುಟ್ಯೂಬ್‌ ಚಾನೆಲ್‌ನಲ್ಲಿ ಹೇಳಿಕೊಂಡಿದ್ದರು. 

ಅಂದಹಾಗೆ ʼಪಾರುʼ ಧಾರಾವಾಹಿ ನಟಿ ಮಾನ್ಸಿ ಜೋಶಿ ಹಳದಿ ಕಾರ್ಯಕ್ರಮ ಸಂಭ್ರಮದಲ್ಲಿದ್ದಾರೆ. ಇನ್ನು ರಕ್ಷಿತಾ ಪ್ರೇಮ್‌ ಸಹೋದರ ರಾಣಾ, ಸೌಂದರ್ಯ ಜಯಮಾಲಾ ಅವರ ಮದುವೆ ಕೂಡ ಇಂದು ನಡೆದಿದೆ. ಅಂದಹಾಗೆ ಸ್ಯಾಂಡಲ್‌ವುಡ್‌ನಲ್ಲಿರುವ ಈ ಜೋಡಿಗಳಿಗೆ ಶುಭ ಹಾರೈಸಿ… !