‘ಸೀತಾರಾಮ’ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಜಯಂತ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  

ಕಳೆದ ಎರಡು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ರಕ್ಷಿತಾ ಪ್ರೇಮ್‌ ಸಹೋದರ ನಟ ರಾಣಾ, ಜಯಮಾಲಾ ಪುತ್ರಿ ಸೌಂದರ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ʼಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಕೂಡ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪಾರು ಧಾರಾವಾಹಿ ನಟಿ ಮಾನ್ಸಿ ಜೋಶಿ ಅವರ ಹಳದಿ ಶಾಸ್ತ್ರ ಕೂಡ ನೆರವೇರಿದೆ. 

ಬೆಂಗಳೂರಿನಲ್ಲಿ ಅದ್ದೂರಿ ಮದುವೆ! 
ಫೆಬ್ರವರಿ 9ರಂದು ಬೆಂಗಳೂರಿನಲ್ಲಿ ಮೇಘನಾ ಶಂಕರಪ್ಪ ಹಾಗೂ ಜಯಂತ್‌ ಮದುವೆ ನಡೆದಿದೆ. ಮೇಘನಾ ಹಾಗೂ ಜಯಂತ್‌ ಅವರು ಬಂಗಾರದ ಬಣ್ಣದ ಉಡುಗೆ ಧರಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಮೇಘನಾ ಅವರು ಈ ಹಿಂದೆ ಪ್ರಿ ವೆಡ್ಡಿಂಗ್‌, ಅರಿಷಿಣ ಶಾಸ್ತ್ರ, ಮೆಹೆಂದಿ, ಸಂಗೀತದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇನ್ನಷ್ಟೇ ಮದುವೆ ಫೋಟೋ ಹಂಚಿಕೊಳ್ಳಬೇಕಿದೆ. ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಮೇಘನಾ ಅವರ ಮದುವೆ ವಿಡಿಯೋಗಳು ವೈರಲ್‌ ಆಗುತ್ತಿವೆ. ಅನೇಕರು ಮೇಘನಾಗೆ ಮದುವೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ರಿಯಲ್‌ ಲೈಫ್‌ನಲ್ಲಿ ಮದುವೆ ಸಂಭ್ರಮ; ಹಳದಿ ಕಾರ್ಯಕ್ರಮದಲ್ಲಿ ಮಿಂದೆದ್ದ Seetha Raama Serial ಮೇಘನಾ ಶಂಕರಪ್ಪ!

ಜಯಂತ್‌ ಯಾರು?
ಅಂದಹಾಗೆ ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು ಎನ್ನಲಾಗಿದೆ. ಪಕ್ಕಾ ಅರೇಂಜ್‌ ಮ್ಯಾರೇಜ್‌ ಇದು. ಮೇಘನಾ ಅವರು ಜಯಂತ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಜಯಂತ್‌ ಕೂಡ ಬೆಂಗಳೂರಿನವರಂತೆ. ಮೇಘನಾ ಪತಿ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 

ಸಂಗೀತ ಶಾಸ್ತ್ರ
ಮೇಘನಾ ಶಂಕರಪ್ಪ ಅವರು ಕುಟುಂಬದ ಜೊತೆಗೆ ಹಳದಿ ಶಾಸ್ತ್ರ ಆಚರಿಸಿಕೊಂಡಿದ್ದರು. ಇನ್ನು ಇವರ ಸಂಗೀತ ಕಾರ್ಯಕ್ರಮದಲ್ಲಿ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ, ಸಿಂಧು ರಾವ್‌, ಪೂಜಾ ಲೋಕೇಶ್‌, ರೀತು ಸಿಂಗ್‌ ಮುಂತಾದವರು ಭಾಗವಹಿಸಿ ಭರ್ಜರಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಫುಲ್‌ ವೈರಲ್‌ ಆಗಿದೆ. ಮೇಘನಾ ಶಂಕರಪ್ಪ ಹಾಗೂ ನಟಿ ಕಾವ್ಯ ಶೈವ ಅವರು ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ. 

ಫ್ಯಾನ್ಸ್​ ಆಸೆ ನೆರವೇರಿಸಿದ ಸೀತಾರಾಮ ಪ್ರಿಯಾ: ಭಾವಿ ಪತಿ ಜೊತೆಗಿನ ರೊಮಾನ್ಸ್​ ವಿಡಿಯೋ ಶೇರ್​ ಮಾಡಿದ ನಟಿ

ಬ್ಯಾಚುಲರ್‌ ಪಾರ್ಟಿ
ಮದುವೆಗೂ ಮುನ್ನ ಮೇಘನಾ ಅವರು ʼಸೀತಾರಾಮʼ ಧಾರಾವಾಹಿ ನಟಿ ಪೂಜಾ ಲೋಕೇಶ್‌, ವೈಷ್ಣವಿ ಗೌಡ, ಸಿಂಧು ರಾವ್‌ ಜೊತೆಗೆ ಬ್ಯಾಚುಲರ್‌ ಪಾರ್ಟಿ ಆಚರಿಸಿಕೊಂಡಿದ್ದರು. ಇನ್ನು ನಟಿ ಕಾವ್ಯ ಶೈವ ಜೊತೆಗೆ ಅವರು ಗೋಕರ್ಣಕ್ಕೆ ಹಾರಿದ್ದರು. ಒಟ್ಟಿನಲ್ಲಿ ಮದುವೆಗೂ ಮುನ್ನ ಮೇಘನಾ ಶಂಕರಪ್ಪ ಅವರು ಭರ್ಜರಿ ಬ್ಯಾಚುಲರ್‌ ಪಾರ್ಟಿ ಆಚರಿಸಿಕೊಂಡಿದ್ದಾರೆ. 

ʼಸೀತಾರಾಮʼ ಪ್ರಿಯಾ
ʼಸೀತಾರಾಮʼ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಮೇಘನಾ ಶಂಕರಪ್ಪ ಅವರು ನಟಿಸುತ್ತಿದ್ದಾರೆ. ಪ್ರಿಯಾ ತುಂಬ ಬಬ್ಲಿ ಹುಡುಗಿ, ಕ್ರೇಜಿ ಹುಡುಗಿ. ಕೆಲವು ದಿನಗಳಿಂದ ಪ್ರಿಯಾ ಪಾತ್ರ ಕಾಣಿಸ್ತಿಲ್ಲ. ಪ್ರಿಯಾ ರೀತಿ ಮೇಘನಾ ಕೂಡ ಬಬ್ಲಿ. ಯಾವಾಗಲೂ ನಗುತ್ತ, ತಮಾಷೆ ಮಾಡುವ ಮೇಘನಾ ಸಖತ್‌ ಆಗಿ ಡ್ಯಾನ್ಸ್‌ ಮಾಡ್ತಾರೆ. ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ʼ‌ ಶೋನಲ್ಲಿ ಮೇಘನಾ ಅವರು ಬೊಂಬಾಟ್‌ ಆಗಿ ನೃತ್ತ ಮಾಡಿದ್ದರು. ಇವರ ನೃತ್ಯಕ್ಕೆ ಶಿವರಾಜ್‌ಕುಮಾರ್‌, ರಕ್ಷಿತಾ ಪ್ರೇಮ್‌, ಚಿನ್ನಿ ಪ್ರಕಾಶ್‌, ವಿಜಯ್‌ ರಾಘವೇಂದ್ರ ಅವರು ಮೆಚ್ಚುಗೆ ಸೂಚಿಸಿದ್ದರು. 

ಕೆಲ ಧಾರಾವಾಹಿಗಳಲ್ಲಿ ನಟನೆ! 
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼನಮ್ಮನೆ ಯುವರಾಣಿ', ʼಕಿನ್ನರಿʼ ಧಾರಾವಾಹಿಯಲ್ಲಿ ಮೇಘನಾ ಶಂಕರಪ್ಪ ನಟಿಸುತ್ತಿದ್ದರು. ಅಷ್ಟೇ ಅಲ್ಲದೆ 'ಕೃಷ್ಣ ತುಳಸಿ', 'ದೇವಯಾನಿ', 'ಸಿಂಧೂರ', 'ರತ್ನಗಿರಿ ರಹಸ್ಯ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು. ಕನ್ನಡ ಕಿರುತೆರೆಯಲ್ಲಿ ಪಾಸಿಟಿವ್‌, ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ ನಟಿ ಅಂದ್ರೆ ಅದು ಮೇಘನಾ ಶಂಕರಪ್ಪ.