ಜೀ ಕನ್ನಡದ 'ಸೀತಾರಾಮ' ಧಾರಾವಾಹಿಯ ಎರಡು ವರ್ಷಗಳ ಕಥಾವಸ್ತುವನ್ನು ಮಕ್ಕಳ ನಾಟಕದ ಮೂಲಕ ಎರಡು ನಿಮಿಷಗಳಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ. ಸಿಹಿಯ ಸಾವಿಗೆ ಭಾರ್ಗವಿ ಕಾರಣ ಎಂಬುದನ್ನು ರಾಮ್‌ಗೆ ಮನವರಿಕೆ ಮಾಡಲು ಅಶೋಕ್ ಈ ನಾಟಕ ಆಯೋಜಿಸಿದ್ದಾನೆ. ಸತ್ಯ ಬಯಲಾದರೆ ಧಾರಾವಾಹಿ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಸೀರಿಯಲ್ ಎಂದರೆ, ಅದು ಐದಾರು ವರ್ಷಗಳ ಎಳೆಯುವಂಥದ್ದು ಎನ್ನುವುದು ಎಲ್ಲರಿಗೂ ತಿಳಿದದ್ದೇ. 5-10 ನಿಮಿಷಗಳಲ್ಲಿ ಹೇಳಿ ಮುಗಿಸಬಹುದಾದ ಕಥೆಯನ್ನು ಐದಾರು ವರ್ಷ ತೋರಿಸುವುದಕ್ಕೆ, (ಕೆಲವೊಮ್ಮೆ ಹತ್ತು ವರ್ಷಗಳೂ ಆದೀತು) ಧಾರಾವಾಹಿ ಎಂದು ಹೆಸರು. ಯಾವುದೇ ಸೀರಿಯಲ್ ಕಥೆಯನ್ನು ನಿಮಗೆ ಯಾರಾದರೂ ಕೇಳಿದರೆ, ನೀವು ಐದಾರು ವರ್ಷ ನೋಡಿದ್ದನ್ನು 2-3 ನಿಮಿಷಗಳಲ್ಲಿಯೇ ಹೇಳಿ ಮುಗಿಸುತ್ತೀರಿ ತಾನೆ? ಆದರೆ ಸೀರಿಯಲ್ ನೋಡುವಾಗ ಮಾತ್ರ ಎಷ್ಟೇ ವರ್ಷವಾದರೂ ಪ್ರತಿದಿನ ನೋಡಲೇಬೇಕು ಎನ್ನುವ ಚಟ ಹಲವರಿಗೆ ಇದ್ದೀತು. ಅದೇನೇ ಇದ್ದರೂ, ಇದೀಗ ಬಹಳ ಸೀರಿಯಲ್ ಪ್ರಿಯರ ಮನಸ್ಸನ್ನು ಗೆದ್ದಿರುವ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸ್ಟೋರಿಗೆ ಬರುವುದಾದರೆ, ಈ ಸೀರಿಯಲ್ ಶುರುವಾಗಿ ಎರಡು ವರ್ಷಗಳಾಗಿದೆ. ಆದರೆ ಎರಡೇ ನಿಮಿಷಗಳಲ್ಲಿ ಸಂಪೂರ್ಣ ಸ್ಟೋರಿಯನ್ನು ಮುಗಿಸಲಾಗಿದೆ!
ಸ್ವಲ್ಪ ಕನ್ಫ್ಯೂಸ್ ಆಯ್ತಲ್ವಾ? ಸೀತಾರಾಮ ಸೀರಿಯಲ್ ಶುರುವಾಗಿದ್ದು 2023ರ ಜುಲೈನಿಂದ. ಇನ್ನೇನು ಎರಡು ವರ್ಷ ಆಗುತ್ತಾ ಬಂದಿದೆ. ಇದರಲ್ಲಿ ಸೀತಾ ಮತ್ತು ರಾಮ ಕ್ಯಾರೆಕ್ಟರ್. ರಾಮನ ಬೆಸ್ಟ್ ಫ್ರೆಂಡ್ ಅಶೋಕ, ರಾಮನ ಮಲತಾಯಿ ಭಾರ್ಗವಿ ಜೊತೆಗೆ ಎಲ್ಲಕ್ಕಿಂತ ದೊಡ್ಡ ಪಾತ್ರ ಸಿಹಿಯದ್ದು. ಇಷ್ಟು ಸೀರಿಯಲ್ ಹೈಲೈಟ್. ಬಾಡಿಗೆ ತಾಯಿಯಾಗಿರುವ ಸೀತಾಳನ್ನು ರಾಮ್ ಮದುವೆಯಾಗ್ತಾನೆ. ರಾಮ್ ಮಲತಾಯಿಗೆ ಇದು ಇಷ್ಟ ಇರಲ್ಲ. ಸೀತಾ ಮತ್ತು ಸಿಹಿ ಎಂದರೆ ಆಕೆಗೆ ಆಗಲ್ಲ. ಆದರೆ ಸೀತಾ ರಾಮರನ್ನು ಎಷ್ಟೇ ದೂರಮಾಡಲು ನೋಡಿದ್ರೂ ಅದು ಸಾಧ್ಯವಾಗಲಿಲ್ಲ, ಸಿಹಿಯನ್ನು ದೂರ ಮಾಡುವ ಪ್ಲ್ಯಾನೂ ಫ್ಲಾಪ್ ಆಯ್ತು. ಕೊನೆಗೆ ಸಿಹಿಯನ್ನು ಸಾಯಿಸುವಲ್ಲಿ ಯಶಸ್ವಿಯಾದಳು. ಸೀತಾಳಿಗೆ ಇನ್ನೊಬ್ಬಳು ಮಗಳೂ ಇದ್ದಳು. ಅವಳೇ ಸುಬ್ಬಿ. ಇದು ಯಾರಿಗೂ ಗೊತ್ತಿಲ್ಲ. ಕಥೆ ಏನೇನೋ ತಿರುವು ಪಡೆದು ಸುಬ್ಬಿ ಸಿಹಿ ಜಾಗಕ್ಕೆ ಬಂದಿದ್ದಾಳೆ.
ಬೆಟ್ಟದ ತುದಿಯಲ್ಲಿ 'ನೂರು ಜನ್ಮಕೂ' ನಟಿಗೆ ಕಾಡಿದ ಆತ್ಮ! ಶೂಟಿಂಗ್ನಲ್ಲಿ ಏನಾಯ್ತು ನೋಡಿ..
ಸಿಹಿ ಅವಳಿಗೆ ಮಾತ್ರ ಕಾಣಿಸ್ತಾ ಇದ್ದಾಳೆ. ಈಗ ಅಶೋಕನಿಗೂ ಸಿಹಿಯ ಆತ್ಮದ ಬಗ್ಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಸಿಹಿಯನ್ನು ಕೊಂದದ್ದು ಭಾರ್ಗವಿ ಚಿಕ್ಕಿಯೇ ಎಂದು ಮನವರಿಕೆ ಮಾಡಬೇಕಿದೆ. ಅದನ್ನು ರಾಮ್ ಅಷ್ಟು ಸುಲಭದಲ್ಲಿ ನಂಬಲ್ಲ ಎಂದು ಇದೇ ಕಥೆಯನ್ನು ಇಟ್ಟುಕೊಂಡು ಮಕ್ಕಳಿಂದ ನಾಟಕ ಮಾಡಿಸುತ್ತಿದ್ದಾನೆ. ಇಲ್ಲೇ ಇರುವುದು ಅಸಲಿ ವಿಷ್ಯ. ಇಷ್ಟು ಕಥೆಯನ್ನು ಹೇಳಲು ಇದಾಗಲೇ ಎರಡು ವರ್ಷ ಕಳೆದಾಗಿದೆ. ಇನ್ನೂ ಅಂತಿಮ ಹಂತ ತಲುಪಲು ಒಂದು ವರ್ಷ ಆದ್ರೂ ಆದೀತೇ. ಟಿಆರ್ಪಿ ಹೆಚ್ಚಿಗೆ ಬರುತ್ತಿದ್ದರೆ, ಮತ್ತೂ ಒಂದೆರಡು ವರ್ಷ ಎಳೆಯುವ ಸಾಧ್ಯತೆ ಇದೆ. ಆದರೆ ಈ ಸೀರಿಯಲ್ನಲ್ಲಿಯೇ ಸಂಪೂರ್ಣ ಕಥೆಯನ್ನು ಅಶೋಕ್ ಮಕ್ಕಳ ನಾಟಕದ ಮೂಲಕ ತೋರಿಸುತ್ತಿದ್ದಾನೆ.
2-3 ನಿಮಿಷಗಳ ನಾಟಕದಲ್ಲಿ ಸಂಪೂರ್ಣ ಸೀತಾರಾಮ ಸ್ಟೋರಿ ಹೇಳಲಾಗಿದೆ. ಇದನ್ನು ನೋಡಿ ರಾಮ್‌ಗೆ ಸಿಹಿಯ ಸಾವಿನ ಬಗ್ಗೆ ತಿಳಿಯಬೇಕು, ಇದರ ಹಿಂದೆ ಇರೋದು ಭಾರ್ಗವಿ ಚಿಕ್ಕಿ ಎನ್ನೋದು ಅರ್ಥ ಆಗಬೇಕು ಎನ್ನುವುದು ಅವನ ಆಸೆ. ಆದ್ದರಿಂದ ಮಕ್ಕಳನ್ನು ಕರೆದುತಂದು ನಾಟಕ ಮಾಡಿಸಿದ್ದಾನೆ. ಸಿಹಿಯ ಆ್ಯಕ್ಟಿಂಗ್ ಅಂತೂ ಹೇಳುವುದೇ ಬೇಡ. ಆದರೆ ಇಲ್ಲೊಂದು ಇಂಟರೆಸ್ಟಿಂಗ್ ವಿಷ್ಯ ಎಂದರೆ, ಎಲ್ಲಾ ಪುಟಾಣಿಗಳೂ ಸಕತ್ ಕ್ಯೂಟ್ ಆಗಿ ನಟನೆ ಮಾಡಿದ್ದಾರೆ. ಭಾರ್ಗವಿ ಚಿಕ್ಕಿಯ ಪಾತ್ರದಲ್ಲಿನ ಬಾಲಕಿಯೂ ಸೂಪರ್ ಆಗಿ ನಟಿಸಿದ್ದು, ಎಲ್ಲರಿಂದ ಶ್ಲಾಘನೆಗೆ ಒಳಗಾಗಿದ್ದಾಳೆ. ಒಟ್ಟಿನಲ್ಲಿ ಈ ನಾಟಕ ಮುಗಿದ ಮೇಲೆ ರಾಮ್‌ಗೆ ಸತ್ಯ ಗೊತ್ತಾದರೆ ಅಲ್ಲಿಗೆ ಸೀತಾರಾಮ ಸೀರಿಯಲ್ ಮುಗಿದಂತೆ.
ಗಂಡು ಎಂದ್ರೆ ಕೆಂಡಕಾರುವ ಝಾನ್ಸಿ ಹಾಟ್ ರೂಪ ನೋಡಿ! 50 ಕೋಟಿ ಒಡತಿ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ...
