ರಾಯರ ಭಕ್ತೆ ಮೈತ್ರಿ, ಪ್ರಿಯಕರನನ್ನು ಆತ್ಮದ ದ್ವೇಷದಿಂದ ರಕ್ಷಿಸಬೇಕು. "ನೂರು ಜನ್ಮಕೂ" ಧಾರಾವಾಹಿಯಲ್ಲಿ ಈ ಸಂಘರ್ಷದ ಕಥೆ ಬೆಟ್ಟದ ತುದಿಯ ದೃಶ್ಯದ ಚಿತ್ರೀಕರಣದ ತಂತ್ರಗಳನ್ನು ಬಳಸಲಾಗಿದೆ. ಧನುಷ್ ಗೌಡ ನಾಯಕ, ಶಿಲ್ಪಾ ಕಾಮತ್ ನಾಯಕಿ ಮತ್ತು ಚಂದನಾ ಗೌಡ ಆತ್ಮದ ಪಾತ್ರದಲ್ಲಿ ನಟಿಸಿದ್ದಾರೆ.

 ನಾಯಕನ ಮೇಲೆ ಆತ್ಮವೊಂದು ದ್ವೇಷ ಕಾರುತ್ತಿದೆ. ಆ ಆತ್ಮದಿಂದ ತನ್ನ ಪ್ರಿಯಕರನ ಕಾಪಾಡಿಕೊಳ್ಳುವುದು ರಾಯರ ಆಪ್ತೆ ಭಕ್ತೆಯಾಗಿರುವ ನಾಯಕಿ ಮೈತ್ರಿ ಕೆಲಸ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ದ್ವೇಷವಿರುತ್ತದೆ. ಆ ಆತ್ಮಕ್ಕೂ ಹಾಗೂ ನಾಯಕನಿಗೂ ಏನು ಸಂಬಂಧ? ನಾಯಕನ ತಪ್ಪೇನು ಎಂಬ ಸೀರಿಯಲ್ಲೇ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ನೂರು ಜನ್ಮಕೂ ಸೀರಿಯಲ್​ ಕಥೆ. ಇದು ಹಿಂದಿಯ ಸುಹಗಾನ್ ಚುಡೈಲ್ ಎಂಬ ಧಾರಾವಾಹಿಯ ರೀಮೇಕ್​ ಆಗಿದೆ. ಇದರಲ್ಲಿ ನಾಯಕಿ ಬೆಟ್ಟದ ತುದಿಯಲ್ಲಿ ಜೋತು ಬೀಳುವ ದೃಶ್ಯವಿದೆ. ಇದನ್ನು ನೋಡಿದ ಸೀರಿಯಲ್​ ಪ್ರೇಮಿಗಳಿಗೆ ಅರೆ ಕ್ಷಣ ಎದೆ ಝಲ್​ ಎನ್ನೋದು ಗ್ಯಾರೆಂಟಿ. ಶೂಟಿಂಗ್​ ವೇಳೆ ಏನಾದ್ರೂ ಹೆಚ್ಚೂ ಕಮ್ಮಿಯಾದ್ರೆ ಏನ್​ ಗತಿ? ಇಷ್ಟೊಂದು ರಿಸ್ಕ್​ ಯಾಕೆ ತಗೋಬೇಕು ಎಂದೆಲ್ಲಾ ಸೀರಿಯಲ್​ ಪ್ರೇಮಿಗಳು ಅಂದುಕೊಳ್ಳಬಹುದು. 

ಆದರೆ ಅಸಲಿಯತ್ತು ಇಲ್ಲಿದೆ ನೋಡಿ. ಒಂದು ಸಿನಿಮಾ ಅಥವಾ ಸೀರಿಯಲ್​ ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್​ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್​ ಶೂಟಿಂಗ್​ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.

ಗಂಡು ಎಂದ್ರೆ ಕೆಂಡಕಾರುವ ಝಾನ್ಸಿ ಹಾಟ್​ ರೂಪ ನೋಡಿ! 50 ಕೋಟಿ ಒಡತಿ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಕೆಲವೊಂದು ಸೀನ್​ಗಳನ್ನು ಬಹಳ ಶ್ರಮ ಪಟ್ಟು ತೆಗೆದರೆ, ಮತ್ತೆ ಕೆಲವನ್ನು ಇರುವಲ್ಲಿಯೇ ಸನ್ನಿವೇಶ ಕ್ರಿಯೇಟ್​ ಮಾಡಿ ಶೂಟ್​ ಮಾಡಲಾಗುತ್ತದೆ. ಅಂಥದ್ದೇ ಒಂದು ದೃಶ್ಯ ಬೆಟ್ಟದ ತುದಿಯ ಮೇಲಿನದ್ದು. ಹಲವು ಸೀರಿಯಲ್​ಗಳಲ್ಲಿ ನಟನೋ, ನಟಿಯೋ ಅಥವಾ ಇನ್ನಾರೋ ಬೆಟ್ಟದ ತುದಿಗೆ ಹೋಗಿ ಮೇಲಿನಿಂದ ಕೆಳಕ್ಕೆ ನೋಡುವ ದೃಶ್ಯ ನೋಡಿದರೆ ವೀಕ್ಷಕರ ಮೈ ಝುಂ ಎನ್ನುತ್ತದೆ. ಅಬ್ಬಬ್ಬಾ ಅವರಿಗೆ ತಲೆ ತಿರುಗಿ ಬಿಟ್ಟರೆ ಗತಿಯೇನು ಎನ್ನಿಸುವುದು ಉಂಟು. ಒಂದು ಶೂಟಿಂಗ್​ಗೆ ಅಷ್ಟೆಲ್ಲಾ ಶ್ರಮ ಪಡುತ್ತಾರಾ ಎಂದೂ ಅನ್ನಿಸುವುದು ಉಂಟು. ಆದರೆ ಅಸಲಿಗೆ ಎಲ್ಲಾ ಸಂದರ್ಭದಲ್ಲಿ ಬೆಟ್ಟ- ಗುಡ್ಡವನ್ನು ಹುಡುಕಿಯೇ ಶೂಟಿಂಗ್​ ಮಾಡುವುದಿಲ್ಲ. 

ಬದಲಿಗೆ ನಟರಿಗೆ ಎತ್ತರ ಪ್ರದೇಶದಲ್ಲಿ ನಿಲ್ಲಿಸಿ ಕೆಳಗೆ ಬೆಟ್ಟದ ತುದಿಯಲ್ಲಿ ನಿಂತಾಗ ನೋಡುವಂತೆ ಹೇಳಲಾಗುತ್ತದೆ. ಶೂಟಿಂಗ್​ ಮಾಡುವ ಮನೆಗಳಲ್ಲಿಯೇ ಬೇಕಿದ್ದರೆ ಈ ದೃಶ್ಯವನ್ನು ಕ್ರಿಯೇಟ್​ ಮಾಡಲಾಗುತ್ತದೆ. ಬೆಟ್ಟದ ತುದಿಯಲ್ಲಿ ಇರುವಂತೆ ಭಾಸವಾಗುವ ರೀತಿಯಲ್ಲಿ ನಟರು ಆ್ಯಕ್ಟ್​ ಮಾಡಬೇಕು ಅಷ್ಟೇ. ಬಳಿಕ ಗ್ರೀನ್​ ಅಥವಾ ಬ್ಲೂ ಸ್ಕ್ರೀನ್​ ತಂತ್ರವನ್ನು ಬಳಸಿ ಅದನ್ನು ಬೆಟ್ಟಕ್ಕೆ ಜೋಡಿಸಿ, ನಟರು ಬೆಟ್ಟದ ಮೇಲೆ ಇರುವಂಥ ದೃಶ್ಯವನ್ನು ಕ್ರಿಯೇಟ್​ ಮಾಡಲಾಗುತ್ತದೆ. ನೂರು ಜನ್ಮಕೂ ಸೀರಿಯಲ್​ನಲ್ಲಿಯೂ ಇದನ್ನೇ ಬಳಸಲಾಗಿದೆ. ಇನ್ನು ಈ ಸೀರಿಯಲ್​ ಕುರಿತು ಹೇಳುವುದಾದರೆ, 'ಗೀತಾ'ದಲ್ಲಿ ನಾಯಕನಾಗಿ ಕಾಣಸಿಕೊಂಡಿದ್ದ ಧನುಷ್ ಗೌಡ ಇಲ್ಲಿ ನಾಯಕ ಆಗಿದ್ದಾರೆ. ಮಿಸ್ ಮಂಗಳೂರು ಪಟ್ಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿಯಾಗಿ ನಟಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನನ್ನು ಕಾಡುವ ಆತ್ಮವಾಗಿ ಚಂದನಾ ಗೌಡ ಕಾಣಿಸಿಕೊಂಡಿದ್ದಾರೆ. ಅವರು ಈ ಹಿಂದೆ ಕನ್ಯದಾನ ಸೀರಿಯಲ್‌ನಲ್ಲಿ ನಟಿಸಿದ್ದರು. ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ರಿಯಾಲಿ ಶೋನಲ್ಲೂ ಭಾಗವಹಿಸಿದ್ದರು.


ಕಪ್ಪು ಹಚ್ಚಿದಷ್ಟೂ ಎಲ್ಲಾ ಕಡೆ ಬೆಳ್ಳಗಾಗತ್ತೆ- ಶೂಟಿಂಗ್​ನಲ್ಲಿ ದೃಷ್ಟಿ ಪಡೋ ಕಷ್ಟ ನೋಡಿ!

View post on Instagram