Asianet Suvarna News Asianet Suvarna News

ಮದುವೆ ಹುಡುಗೀನ ಎತ್ಹಾಕ್ಕೋಂಡು ಹೋಗೋದು ಸಿನಿಮಾದಲ್ಲಿ ಮಾತ್ರ ಅಂತಿದಾನೆ ಅಶೋಕ! ರಾಮನ ಗತಿ?

ಸೀತಾರಾಮ ಸೀರಿಯಲ್‌ನಲ್ಲಿ ಸ್ನೇಹಿತ ಅಶೋಕ ರಾಮನಿಗೆ ಎಷ್ಟೇ ಸಹಾಯ ಮಾಡಿದರೂ ರಾಮನಿಗೆ ಶೋಕವೇ ಎಲ್ಲ ಅನ್ನೋ ಹಾಗಾಗಿದೆ. ಸೀತಾ ಮದುವೆ ಫಿಕ್ಸ್ ಆಗಿದೆ. ತನ್ನ ಹುಡುಗೀನ ರಾಮ ಹಾರಿಸ್ಕೊಂಡು ಹೋಗ್ತಾನಾ?

Seetarama Serial: seetha marriage fixed and what is rama going to do
Author
First Published Dec 23, 2023, 5:26 PM IST

ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಕತೆ ಇಂಟರೆಸ್ಟಿಂಗ್ ಆಗಿ ಸಾಗುತ್ತಿದೆ. ಈ ನಡುವೆ ರಾಮನ ತಾತ ಸೂರ್ಯ ಪ್ರಕಾಶ್ ಹಾಗೂ ರಾಮನ ಸ್ನೇಹಿತ ಅಶೋಕನ ಜೊತೆಗೆ ಒಂದು ಮಹತ್ವದ ಡಿಸ್‌ಕಶನ್ ಆಗಿದೆ. ಈ ಇಬ್ಬರೂ ರಾಮನ ಶ್ರೇಯೋಭಿಲಾಷಿಗಳು. ರಾಮನಿಗಾಗಿ ತಮ್ಮಿಂದಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸೂರ್ಯ ಪ್ರಕಾಶ್ ದೇಸಾಯಿ ಅವರನ್ನು ಸೂರಿ ಅಂತ ಕರೆದು ಏಕವಚನದಲ್ಲಿ ಮಾತಾಡುವ ರಾಮನ ಸ್ನೇಹಿತ ಅಶೋಕ್‌ ಈ ಬಾರಿ ತಾತಾನಿಗೆ ಚೆನ್ನಾಗೇ ಬಿಸಿ ಮುಟ್ಟಿಸಿದ್ದಾನೆ. ಆದರೆ ಈ ಜೋಡಿಯ ಮಾತುಕತೆ ಈ ಸೀರಿಯಲ್ ನೋಡುವವರಿಗೆ ಸಖತ್ ಮಜಾ ಕೊಡುತ್ತೆ. ಇಬ್ಬರೂ ಕಾಲೆಳೆಯುತ್ತಾ ತಮಾಷೆಯಾಗಿ ಮಾತನಾಡುತ್ತಿದ್ದರೆ ವೀಕ್ಷಕರು ಅದನ್ನು ಎನ್‌ಜಾಯ್ ಮಾಡುತ್ತಾರೆ. ಇಲ್ಲೀಗ ಸೀರಿಯಸ್‌ ಆಗಿ ಅಶೋಕ ಸೂರಿ ಎದುರು ಬಂದು ನಿಂತಿದ್ದಾನೆ. ತಾತ ಎಂದಿನ ಕೀಟಲೆಯಲ್ಲಿ ಆತನತ್ತ ನೋಡಿದರೆ ಅಶೋಕ ಗಂಭೀರವಾದ ವಿಷಯವನ್ನು ಬಾಂಬ್ ಎಸೆದವನ ಹಾಗೆ ತಾತನೆದುರು ಹೇಳಿಕೊಂಡಿದ್ದಾನೆ. ಇವರಿಬ್ಬರ ಮಜಾ ಸಂಭಾಷಣೆ ಹೀಗಿದೆ.

ಅಶೋಕ: ನಿನ್ ಮೊಮ್ಮಗ ಯಾವ ಹುಡುಗೀನ ಇಷ್ಟ ಪಡ್ತಿದ್ನೋ ಅವಳ ಮದುವೆ ಫಿಕ್ಸ್ ಆಗಿದೆ. ಅದಕೆ ಅವನು ಹಾಗೆ ಆಡೋದು. 

ತಾತ: ಏನ್ ಹೇಳ್ತಿದ್ಯೋ? ಇದನ್ನು ನೀನು ನನಗೆ ಮೊದಲೇ ಯಾಕೆ ಹೇಳಲಿಲ್ವೋ ರಾಸ್ಕಲ್? ಮದುವೆ ಫಿಕ್ಸ್ ಆಗಿದೆ ಅಂದರೆ ಟೈಮ್‌ ಬಾಂಬ್ ಫಿಕ್ಸ್ ಆದಂಗೆ. ಅದನ್ನು ಸರಿಯಾದ ಟೈಮಿಗೆ ಕಟ್‌ ಮಾಡಿಲ್ಲ ಅಂದರೆ ಅವರ ಜೀವನಾನೇ ಸಿಡಿಯುತ್ತೆ! 

ಅಶೋಕ: ಕಟ್ ಮಾಡೋದು ಅಂದರೆ ಏನು ಸೂರಿ?

ತಾತ: ಏನು ಅಂದರೆ ನಮ್ಮ ದೇಶದಲ್ಲಿ ದಿಲ್‌ವಾಲೆ ದುಲ್ಹನಿಯಾ ಲೇಜಾಯೇಂಗೆ ಸಿನಿಮಾ ಐದು ವರ್ಷ ಓಡ್ತಂತಲ್ಲಪ್ಪಾ.. 

ಅಶೋಕ: ಅದು ಸಿನಿಮಾ ಸೂರಿ, ಮದುವೆ ಮಂಟಪದಿಂದ ಹುಡುಗೀನ ಎತ್ಹಾಕ್ಕೊಂಡು ಹೋಗೋದಕ್ಕೆ ಸಾಧ್ಯ ಆಗೋದು ಸಿನಿಮಾದಲ್ಲಿ ಮಾತ್ರ.

ತಾತ: ನೋಡೋ ಭಡವಾ! ಪ್ರೀತಿ ನಿಜವಾದ್ರೆ ಆ ಪ್ರೀತಿ ಉಳಿಯುತ್ತೆ. ನಿಜವಾದ ಪ್ರೀತಿಗೆ ಆ ಶಕ್ತಿ ಇದೆ. ಇಲ್ಲದಿದ್ರೆ ಅದು ಪ್ರೀತಿನೇ ಅಲ್ಲ. ನಿನ್ ಫ್ರೆಂಡ್‌ದು ನಿಜವಾದ ಪ್ರೀತಿನಾ?

ಅಶೋಕ: ಅವನು ಮನಸ್ಸು ಶುದ್ಧ, ಅವನ ಪ್ರೀತಿನೂ ಶುದ್ಧನೇ! 

ಅರಿಯದೇ ಸೀತೆಯ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ ರಾಮ! ಸೀತಾರಾಮ ಕಲ್ಯಾಣ ಆಗೋಯ್ತು- ಮುಂದೇನು?

ಈ ಸಂಭಾಷಣೆ ನೋಡ್ತಿದ್ರೆ ಈ ಇಬ್ಬರೂ ಸೀತಾ ಮದುವೆ ಅನ್ನೋ ಬಾಂಬಿನ ವಯರನ್ನು ಕಿತ್ಹಾಕೋದಕ್ಕೆ ಪ್ಲಾನ್ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಇನ್ನೊಂದು ಕಡೆ ಆಫೀಸ್‌ನಲ್ಲಿ ರಾಮ್‌ನ ಹುಡುಕಿದ ಸೀತಾ, ಬಾಸ್‌ ಬಳಿ ಹೋಗಿ ರಾಮನ ಬಗ್ಗೆ ವಿಚಾರಿಸಿದ್ದಾಳೆ. ಅಲ್ಲೇ ನಿಮ್ಮ ಪಕ್ಕದಲ್ಲೇ ಕೂತಿರ್ತಾನೆ? ಅವನು ಏನು ಅಂತ ನಿಮಗೆ ಅರ್ಥಾನೇ ಆಗಿಲ್ವ? ಅವನು ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಸೀತಾಳ ಮುಂದೆ ಹೇಳಿಕೊಂಡಿದ್ದಾನೆ ಅಶೋಕ. ಈ ಖುಷಿಯ ವಿಚಾರ ತಿಳಿದು ರಾಮನ ಬಳಿ ಬಂದು ನಿಂತಿದ್ದಾಳೆ ಸೀತಾ. ಲವ್ವಲ್ಲಿ ಬಿದ್ದಿದ್ದೀರಾ? ಎಂದೂ ಕೇಳಿದ್ದಾಳೆ. ಅದಕ್ಕೆ ಯೆಸ್‌ ಎಂದಿದ್ದಾನೆ ರಾಮ್.‌ ಹಾಗಾದರೆ, ಆ ಹುಡುಗಿ ಯಾರೆಂದು ಹೇಳ್ತಾನಾ ರಾಮ್ ಅನ್ನೋದು ಸದ್ಯದ ಕುತೂಹಲ. ಏಕೆಂದರೆ ತಾನೇ ಮುಂದಾಗಿ ನಿಂತು ತಾನು ಪ್ರೀತಿಸುವ ಹುಡುಗಿಗೆ ಮದುವೆ ಮಾಡಲಿಕ್ಕೆ ಹೊರಟಿದ್ದಾನೆ ರಾಮ. ಈಗ ಆ ಹುಡುಗಿ ಬಂದು ಪ್ರೀತಿ ಬಗ್ಗೆ ಕೇಳಿದರೆ ಇರೋ ವಿಷಯ ಹೇಳ್ತಾನಾ? ಖಂಡಿತಾ ಇಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ. ಬಿಗ್‌ಬಾಸ್ ದೆಸೆಯಿಂದ ಈ ಸೀರಿಯಲ್ ಟಿಆರ್‌ಪಿ ಕಡಿಮೆ ಆದರೂ ಸದ್ಯ ಕತೆ ಇಂಟರೆಸ್ಟಿಂಗ್ ಆಗಿದೆ ಅಂತಿದ್ದಾರೆ ವೀಕ್ಷಕರು.

ಮೈ ತುಂಬಾ ಬಟ್ಟೆ ಹಾಕಮ್ಮ; 'ಸೀತಾರಾಮ' ಪ್ರಿಯಾ ಮೇಲೆ ನೆಟ್ಟಿಗರು ಗರಂ 

Follow Us:
Download App:
  • android
  • ios