Asianet Suvarna News Asianet Suvarna News

ಅರಿಯದೇ ಸೀತೆಯ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿದ ರಾಮ! ಸೀತಾರಾಮ ಕಲ್ಯಾಣ ಆಗೋಯ್ತು- ಮುಂದೇನು?

ಸೀತಾರಾಮ ಸೀರಿಯಲ್​ನಲ್ಲಿ ಅರಿವಿಗೆ ಬಾರದೇ ರಾಮ್​ ಸೀತೆಯ ಕುತ್ತಿಗೆಗೆ ಕರಿಮಣಿ ಕಟ್ಟಿದ್ದಾನೆ. ಸೀತಾರಾಮ ಕಲ್ಯಾಣ ನಡೆದಿದೆ. ಮುಂದೇನಾಗುತ್ತೆ?
 

Ram accidently tied mangalasootra to Seeta in Seetarama serial suc
Author
First Published Dec 21, 2023, 4:46 PM IST

ಮದುವೆ ಎನ್ನುವುದು ಸ್ವರ್ಗದಲ್ಲಿಯೇ  ನಡೆಯುತ್ತದೆ ಎನ್ನುವ ಮಾತಿದೆ. ಯಾರಿಗೆ ಯಾರು ಎಂಬುದನ್ನು ಮೊದಲೇ ಹಣೆಯಲ್ಲಿ ಬರೆದು ಕಳುಹಿಸಲಾಗಿರುತ್ತದೆ ಎನ್ನಲಾಗುತ್ತದೆ. ಇದೀಗ ಇದೇ ಮಾತಿಗೆ ಉದಾಹರಣೆಯಾಗಿ ನಿಂತಿದೆ ಸೀತಾರಾಮ ಸೀರಿಯಲ್​. ಸಿಂಗಲ್​ ಪೇರೆಂಟ್​ ಆಗಿರುವ ಸೀತಾಗೆ ಮಗಳೇ ಸ್ವರ್ಗ. ಇನ್ನೊಂದು ಮದುವೆಯ ಬಗ್ಗೆ ಅರೆ ಕ್ಷಣ ಚಿಂತೆ  ಮಾಡದ ಸೀತಾಳ ಬಾಳಲ್ಲಿ ಈಗ ಮದುವೆಯೆಂಬ ಬಿರುಗಾಳಿಯೇ ಬಂದು ಬಿಟ್ಟಿದೆ. ಅದೇ ಇನ್ನೊಂದೆಡೆ ಭಗ್ನಪ್ರೇಮಿಯಾಗಿರುವ ರಾಮ, ಸೀತಾಳ ಪ್ರೀತಿಯ ಬಲೆಗೆ ಸಿಲುಕಿದ್ದಾನೆ. ಇದರ ಕಿಂಚಿತ್​ ಅರಿವು ಸೀತಾಗೆ ಇಲ್ಲ. ಇನ್ನು ಸೀತಾಳ ಮಗಳು ಸಿಹಿಗೋ ರಾಮ್​ ಎಂದರೆ ಪಂಚಪ್ರಾಣ. ಆದರೆ ತನ್ನ ಪ್ರೀತಿಯನ್ನು ಸೀತಾಳಿಗೆ ಹೇಳದಷ್ಟು ಅಸಹಾಯಕನಾಗಿದ್ದಾನೆ ರಾಮ್​. ಒಲ್ಲದ ಮನಸ್ಸಿನಿಂದ ವಕೀಲ ರುದ್ರಪ್ರತಾಪ್‌ ಜತೆಗೆ ಮದುವೆಯಾಗುವಂತೆ ರಾಮ್​ ಒತ್ತಾಯಿಸಿದ್ದಾನೆ. ಮದುವೆ ಆಗುವುದೇ ಇಲ್ಲ ಎಂದು ಹಠ ಹಿಡಿದಿದ್ದ ಸೀತಾ ಇದೀಗ ರಾಮ್​ನ ಒತ್ತಾಸೆಗೆ ಮಣಿದು ರುದ್ರಪ್ರತಾಪ್​ ಜೊತೆ ಮದುವೆಗೆ ಒಪ್ಪಿದ್ದಾಳೆ. ರಾಮ ಮತ್ತು ಶಾಂತಮ್ಮಜ್ಜಿ ತಾತನ ಒತ್ತಾಯಕ್ಕೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದಾಳೆ.

ಅದೇ ಇನ್ನೊಂದೆಡೆ ಸೀತಾಳನ್ನು ಗಾಢವಾಗಿ ಪ್ರೀತಿಸುತ್ತಿರುವ ರಾಮ್​, ಪ್ರೀತಿಯನ್ನು ತ್ಯಾಗ ಮಾಡಿ ಮದುವೆಗೆ ಮುಂದೆ ನಿಂತು ಎಲ್ಲಾ ಸಿದ್ಧತೆ ಮಾಡುತ್ತಿದ್ದಾನೆ. ಅರೆ ಇದೇನಾಗೋಯ್ತು, ಸೀತಾ-ರಾಮ ಬೇರೆ ಬೇರೆಯಾಗಿ ಬಿಡ್ತಾರಾ? ರುದ್ರಪ್ರತಾಪ್​ ಜೊತೆ ಸೀತಾಳ ಮದ್ವೆ ಆಗಿಬಿಟ್ಟರೆ ಮುಂದೇನಪ್ಪಾ ಎಂದು ಫ್ಯಾನ್ಸ್​ ನೊಂದುಕೊಂಡು ಹೀಗೆ  ಮಾಡಬೇಡಿ ಎಂದು ಸೋಷಿಯಲ್​  ಮೀಡಿಯಾದಲ್ಲಿ ಕಮೆಂಟ್ಸ್​ಗಳ ಸುರಿಮಳೆಯನ್ನೇ ಹಾಕಿದ್ದರು. ಮದುವೆಗೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಬಂದಿದೆ. ತನಗೆ ಅರಿವಿಲ್ಲದೆಯೇ ಸೀತಾಳ ಕೊರಳಿಗೆ ರಾಮ್​  ಮಂಗಳಸೂತ್ರ ಕಟ್ಟಿದ್ದಾನೆ! ಇದನ್ನು ನೋಡಿ ಸಿಹಿ ಖುಷಿಯಿಂದ ಕೇಕೇ ಹಾಕಿದ್ದಾಳೆ...

ರಾಮ್​ಗೆ ಹುಟ್ಟುಹಬ್ಬದ ಸಂಭ್ರಮ: ವಿಶೇಷ ವಿಡಿಯೋ ರಿಲೀಸ್​- ಸೀತಾರಾಮ ನಾಯಕನ ರಿಯಲ್​ ಸ್ಟೋರಿ ಇಲ್ಲಿದೆ

ಜೀ ವಾಹಿನಿ ಇದರ ಪ್ರೊಮೊ ರಿಲೀಸ್​ ಮಾಡಿದೆ. ಮದುವೆಯ ಸಿದ್ಧತೆಯಲ್ಲಿರುವ ಸೀತಾ ರಾಮ್​ನನ್ನು ಕರೆದುಕೊಂಡು ಮಂಗಳಸೂತ್ರ ಖರೀದಿಗೆ ಹೋಗಿದ್ದಾಳೆ. ಅಲ್ಲಿ ಮಂಗಳಸೂತ್ರ ಧರಿಸಿ ನೋಡುವಾಗ ಅವಳ ಕೂದಲಿಗೆ ಅದು ಸಿಕ್ಕಿಬಿದ್ದಿದೆ. ಅರಿವಿಲ್ಲದೆಯೇ ರಾಮ್​ ಆಕೆಯ ಕೂದಲು ಸರಿಸಿ ಮಂಗಳಸೂತ್ರವನ್ನು ಸರಿ ಮಾಡಿದ್ದಾನೆ. ಅಲ್ಲಿಗೆ ಮಂಗಳಸೂತ್ರ ಕಟ್ಟಿದಂತೆ ಆಗಿದೆ. ಇದನ್ನು ಖುಷಿಯಿಂದ ನೋಡುತ್ತಿದ್ದ ಸಿಹಿ ಸೀತಮ್ಮಾ ಮತ್ತು ರಾಮ್​ಗೆ ಮದ್ವೆ ಆಗೋಯ್ತು ಎಂದು ಜೋರಾಗಿ ಕೂಗಿದ್ದಾಳೆ. ಸೀತಾಳ ಜೊತೆ ಅಂಗಡಿಗೆ ಬಂದಿದ್ದ ಅಪ್ಪ-ಅಮ್ಮನೂ ಕಂಗಾಲಾಗಿದ್ದಾರೆ. ಜೊತೆಗೆ ಸೀತಾ ಮತ್ತು ರಾಮ ಬೆಚ್ಚಿಬಿದ್ದಿದ್ದಾರೆ. ಮದ್ವೆ ಆಗೋಯ್ತು ಎಂದು ಸಿಹಿ ಹೇಳಿದಾಗಲೇ ತಾನು ಏನು ಮಾಡಿದ್ದು ಎಂದು ರಾಮ್​ಗೆ ಅರಿವಾಗಿದೆ. ಮುಂದೇನಾಗುತ್ತೆ ಎನ್ನುವುದು ಸದ್ಯಕ್ಕಿರುವ ಕುತೂಹಲ. 

ಈ ಪ್ರೊಮೋಗೆ ಥಹರೇವಾರಿ ಕಮೆಂಟ್​ಗಳು ಬಂದಿವೆ. ಸೀತಾರಾಮರ ಕಲ್ಯಾಣ ಆಗಿರುವುದಕ್ಕೆ ಫ್ಯಾನ್ಸ್​ ತುಂಬಾ ಖುಷಿ ಪಟ್ಟುಕೊಂಡಿದ್ದರೆ, ಇನ್ನು ಕೆಲವರು ಅದು ಮಂಗಳಸೂತ್ರ ಎನ್ನುವುದು ಪುಟಾಣಿ ಸಿಹಿಗೆ ಗೊತ್ತಾಯ್ತು, ಸೀತಾ ಮತ್ತು ರಾಮರಿಗೆ ಗೊತ್ತಾಗದೇ ಇರುವುದು ವಿಚಿತ್ರ ಎನಿಸುತ್ತಿದೆ ಎಂದಿದ್ದಾರೆ. ಎಷ್ಟೆಂದರೂ ಇದು ಸೀರಿಯಲ್​. ಅದನ್ನು ಸೀರಿಯಲ್​ ಆಗಿ ಮಾತ್ರ ನೋಡಿ ಎಂದು ಇದಕ್ಕೆ ಇನ್ನು ಕೆಲವರು ರಿಪ್ಲೈ ಮಾಡಿದ್ದಾರೆ. ಇನ್ನು ಹಲವರು ರಾಮ ಸೀತಾಳ ಕುತ್ತಿಗೆಗೆ ಕರಿಮಣಿ ಕಟ್ಟಿದ್ದನ್ನು ನೋಡಿ ತುಂಬಾ ಖುಷಿಯಾಯಿತು, ಸಮಾಧಾನವಾಯ್ತು ಎನ್ನುತ್ತಿದ್ದಾರೆ. ಈಗ ಮುಂದೇನು ಎನ್ನುವ ಕುತೂಹಲ ಎಲ್ಲರದ್ದೂ. 

ಸೀತಾರಾಮ ಸೀರಿಯಲ್​ ಸೆಟ್ ಹೇಗಿದೆ? ಶೂಟಿಂಗ್​ ಹೇಗೆ ಮಾಡ್ತಾರೆ? ವಿಡಿಯೋ ಮೂಲಕ ವೈಷ್ಣವಿ ಮಾಹಿತಿ

Follow Us:
Download App:
  • android
  • ios