ಕಣ್ಣು ಮುಚ್ಚಿಕೊಂಡು ಮೇಕಪ್ ಮಾಡಿಕೊಂಡ ಸೀತಾರಾಮ ಸೀತಾ: ವೈಷ್ಣವಿ ಗೌಡ ಹೊಸ ಲುಕ್ ಹೇಗಿದೆ?
ಸೀತಾರಾಮ ಸೀರಿಯಲ್ ನಾಯಕಿ ವೈಷ್ಣವಿ ಗೌಡ ಅವರು ಕಣ್ಣು ಮುಚ್ಚಿಕೊಂಡು ಮೇಕಪ್ ಮಾಡಿದ್ದಾರೆ. ಅವರು ಹೇಗೆ ಮೇಕಪ್ ಮಾಡಿದ್ದಾರೆ ನೋಡಿ...
ಹಲವರಿಗೆ ಮೇಕಪ್ ಇಲ್ಲದೇ ಹೊರಗಡೆ ಹೋಗುವುದು ಅಸಾಧ್ಯ ಎನಿಸುವುದು ಉಂಟು. ಇನ್ನು ಕೆಲವರಿಗೆ ಮೇಕಪ್ ಅನಿವಾರ್ಯ. ಸೆಲೆಬ್ರಿಟಿಗಳು ಅದರಲ್ಲಿಯೂ ಚಿತ್ರ ತಾರೆಯರಿಗೆ ಮೇಕಪ್ ಅವರ ಜೀವನದ ಅವಿಭಾಜ್ಯ ಅಂಗ ಎನಿಸಿದೆ. ಮಳೆ, ಬಿಸಿಲು, ಚಳಿ ಏನೇ ಇದ್ದರೂ ಚಿತ್ರಕ್ಕಾಗಿ ಇಲ್ಲವೇ ಸೀರಿಯಲ್ಗಾಗಿ ಮೇಕಪ್ ಮಾಡುವ ಅನಿವಾರ್ಯತೆ ಇದ್ದೇ ಇದೆ. ಇನ್ನು ಕೆಲವರು ಸುಂದರವಾಗಿ ಕಾಣಲು ಇನ್ನಿಲ್ಲದಂತೆ ಮೇಕಪ್ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಮೇಕಪ್ ಅನ್ನುವುದು ನಟ-ನಟಿಯರ ಅವಿಭಾಜ್ಯ ಅಂಗ ಎನಿಸಿಬಿಟ್ಟಿದೆ.
ಇದೀಗ ಸೀತಾರಾಮ ಸೀರಿಯಲ್ ಖ್ಯಾತಿಯ ಸೀತೆ ಯಾವ ರೀತಿ ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಈ ಹಿಂದೆಯೇ ತಿಳಿಸಿದ್ದರು. ಈ ಹಿಂದೆ ಅಗ್ನಿಸಾಕ್ಷಿಯಲ್ಲಿ ಮಿಂಚಿ ಇದೀಗ ಸೀತೆಯಾಗಿರುವ ವೈಷ್ಣವಿ ಗೌಡ ಅವರು ಈ ಹಿಂದೆ ತಾವು ಯಾವ ರೀತಿ ಮೇಕಪ್ ಮಾಡಿಕೊಳ್ಳುತ್ತೇವೆ ಎಂದಿದ್ದರು. 'ಯಾವ ಮೇಕಪ್ ಮಾಡಿಕೊಳ್ಳುವ ಮುನ್ನ ನಾವು ಮೊದಲು ತ್ವಚೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮೊದಲು ಕ್ರೀಮ್ ಮೊದಲು ಬಳಸಿ ಆನಂತರ ಸನ್‌ಸ್ಕ್ರೀನ್ ಬಳಸಬೇಕು ಎಂದು ಹೇಳಿದ್ದರು. ಅದಾದ ಬಳಿಕ ತಾವು ಬಳಸುವ ಬ್ರ್ಯಾಂಡ್ಗಳ ಬಗ್ಗೆಯೂ ವಿವರಣೆ ನೀಡಿದ್ದರು. ಸೀತಾ ಪಾತ್ರ ಹೆಚ್ಚಿಗೆ ಮೇಕಪ್ ಬೇಡ. ಅದಕ್ಕಾಗಿ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ ಎನ್ನುತ್ತಲೇ, ಕಡಿಮೆ ಮೇಕಪ್ ಮಾಡಿಕೊಂಡು ಪಿಂಪಲ್ ಕವರ್ ಮಾಡಿಕೊಳ್ಳುತ್ತೇನೆ ಎಂದಿದ್ದರು. ಯಾವ ಪಾತ್ರಕ್ಕೆ ಯಾವ ರೀತಿ ಮೇಕಪ್ ಬೇಕು ಹಾಗೆ ಮೇಕಪ್ ಮಾಡಿಕೊಳ್ಳುವೆ. ನಾನು ಹೆಚ್ಚಿಗೆ ಮೇಕಪ್‌ನ ಕೈಯಲ್ಲಿ ಮಾಡಿಕೊಳ್ಳುವುದು. ಲೈಟ್ ಬ್ರೌನ್ ಅಥವಾ ಗ್ಲಿಟರ್ ಇರುವ ಐ ಶ್ಯಾಡೋ ಹಾಕಿಕೊಳ್ಳುವೆ. ಉಬ್ಬು ಬರೆದುಕೊಂಡು ಸ್ವಲ್ಪ ಲಿಪ್‌ಸ್ಟಿಕ್ ಹಾಕಿಕೊಳ್ಳುವೆ' ಹೀಗೆ ಒಂದಾದ ಮೇಲೊಂದು ಹಾಕಿಕೊಂಡು ಮೇಕಪ್ ಮುಗಿಸುವೆ ಎಂದಿದ್ದರು.
ಸಂಕ್ರಾಂತಿ ಸಂಭ್ರಮದ ಶೂಟಿಂಗ್ನಲ್ಲಿ ಏನೇನಾಯ್ತು? ವಿಡಿಯೋ ಮೂಲಕ ರೋಚಕ ಅನುಭವ ಹೇಳಿದ 'ಸೀತಾ'
ಇದೀಗ ನಟಿ, ಕಣ್ಣುಮುಚ್ಚಿಕೊಂಡು ಮೇಕಪ್ ಮಾಡಿಕೊಂಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೇಕಪ್ ಮಾಡಬೇಕು. ಆದರೆ ಮಸ್ಕಾರಾ ಎಲ್ಲಾ ಕಣ್ಣಿಗೆ ಹಚ್ಚಿಕೊಳ್ಳುವ ಕಾರಣ, ಕಣ್ಣುಮುಚ್ಚಿಕೊಂಡೇ ಮೇಕಪ್ ಮಾಡಿಕೊಳ್ಳುವೆ ಎಂದ ನಟಿ, ಮೇಕಪ್ ಮಾಡಿಕೊಂಡಿದ್ದಾರೆ. ಅವರು ಕಣ್ಣುಮುಚ್ಚಿಕೊಂಡು ಫಟಾಫಟ್ ಮೇಕಪ್ ಮಾಡಿಕೊಂಡಿದ್ದರೂ ಹೇಳಿಕೊಳ್ಳುವಂಥ ವ್ಯತ್ಯಾಸವೇನೂ ಆಗಲಿಲ್ಲ. ಮಸ್ಕಾರಾ ಒಂದನ್ನು ಬಿಟ್ಟು ಉಳಿದವೆಲ್ಲವೂ ಚೆನ್ನಾಗಿಯೇ ಮೂಡಿ ಬಂದಿದೆ ಎಂದು ಆ ಬಳಿಕ ಕನ್ನಡಿ ನೋಡಿಕೊಂಡ ನಟಿ ಹೇಳಿದ್ದಾರೆ. ಇವರ ಮೇಕಪ್ಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ನಿಮಗೆ ಸೀತೆಯ ಈ ಮೇಕಪ್ ಹೇಗೆ ಅನ್ನಿಸಿತು?
ಅಂದಹಾಗೆ ನಟಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಶೇಷ ಎನಿಸುವುದನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಶೂಟಿಂಗ್ ಸೆಟ್ ಆಗಿರಬಹುದು, ಶೂಟಿಂಗ್ ಮಾಡುವ ಬಗೆ, behind the screen ಇವುಗಳನ್ನೆಲ್ಲಾ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಮೇಕಪ್ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.
ಮದುಮಗಳಾಗಿ ಕಂಗೊಳಿಸುತ್ತಲೇ ಅಗ್ನಿಸಾಕ್ಷಿಯನ್ನು ನೆನಪು ಮಾಡಿಕೊಂಡ ಸೀತಾರಾಮ ನಟಿ ವೈಷ್ಣವಿ!