ಒಳಗಡೆ ಷರ್ಟ್ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?
ಸೀತಾರಾಮ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಭರ್ಜರಿ ರೀಲ್ಸ್ ಮಾಡಿದ್ರೆ ಹೀಗೆಲ್ಲಾ ಹೇಳೋದಾ ನೆಟ್ಟಿಗರು?
ವೈಷ್ಣವಿ ಗೌಡ ಎಂದರೆ ಹೆಚ್ಚು ಮಂದಿಗೆ ಯಾರು ಎಂದು ಗೊತ್ತಾಗಲಿಕ್ಕಿಲ್ಲ. ಆದರೆ ಸೀತಾ ಎಂದರೆ ಸಾಕು... ಸೀರಿಯಲ್ ಪ್ರೇಮಿಗಳ ಕಣ್ಣಿಗೆ ಬರುವುದು ರಾಮಾಯಣದ ಸೀತೆಯಲ್ಲ, ಬದಲಿಗೆ ಸೀತಾರಾಮ ಸೀರಿಯಲ್ ಸೀತಾ. ಇವರ ನಿಜವಾದ ಹೆಸರೇ ವೈಷ್ಣವಿ ಗೌಡ. ಸದ್ಯ ಸೀರಿಯಲ್ನಲ್ಲಿ ಸೀತಾ ಮತ್ತು ರಾಮ ಹನಿಮೂನ್ ಮೂಡ್ನಲ್ಲಿದ್ದಾರೆ. ಇವರ ಮದುವೆ ಭರ್ಜರಿಯಾಗಿ ನಡೆದಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಯಶಸ್ವಿಯಾಗಿ ನೆರವೇರಿದೆ. ಇದರ ನಡುವೆಯೇ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದು, ಆಗಾಗ್ಗೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಕೆಲವೊಂದು ಟಿಪ್ಸ್ ಕೊಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿಯೂ ವೈಷ್ಣವಿ ಸಕತ್ ಆ್ಯಕ್ಟೀವ್. ಯೂಟ್ಯೂಟ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್ಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್ ಆಗಿ ರೀಲ್ಸ್ ಮಾಡುತ್ತಾರೆ.
ಇದೀಗ ವೈಷ್ಣವಿ ಅವರು ನಚಲೇ ನಚಲೇ ಹಾಡಿಗೆ ಸಕತ್ ಸ್ಟೆಪ್ ಹಾಕಿದ್ದಾರೆ. ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಉಫ್ ಬಿದ್ದೋಗಿ ಬಿಟ್ಟೆ ಕಣ್ರೀ ಎನ್ನುತ್ತಿದ್ದಾರೆ. ಆದರೆ ನಟಿಯರು ರೀಲ್ಸ್ ಮಾಡಿದ್ರೆ ಕಾಲೆಯುವ ದೊಡ್ಡ ವರ್ಗವೂ ಇದ್ಯಲ್ಲಾ? ಅದೇ ರೀತಿ ವೈಷ್ಣವಿ ಅವರಿಗೂ ಸದಾ ಕಾಲೆಳೆಯುತ್ತಲೇ ಇರುತ್ತಾರೆ. ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್, ಅರೆಬರೆ ಡ್ರೆಸ್ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ. ಅವರ ಡ್ರೆಸ್ ಬಗ್ಗೆ ಸಕತ್ ಕಮೆಂಟ್ಸ್ ಬರುತ್ತವೆ.
ಸೊಂಟ ಬಳಕಿಸುತ್ತಲೇ ಮೋಡಿ ಮಾಡಿದ 'ಸೀತಾ': ಬೆಲ್ಲಿ ಡಾನ್ಸ್ಗೆ ಉಫ್ ಬಿದ್ದೋದೆ ಅಂತಿರೋ ಫ್ಯಾನ್ಸ್
ಈ ರೀಲ್ಸ್ನಲ್ಲಿ ವೈಷ್ಣವಿ ಅವರು ಸ್ಕಿನ್ ಕಲರ್ ಷರ್ಟ್ ಹಾಕಿರುವ ಕಾರಣ, ಅದನ್ನೇ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಒಳಗಡೆ ಷರ್ಟ್ ಇದ್ಯಾ| ಗೊತ್ತೇ ಆಗ್ಲಿಲ್ಲ, ನಮಗೆ ಕಂಡಿದ್ದೇ ಬೇರೆ ಎಂದೆಲ್ಲಾ ತಮಾಷೆ ಮಾಡುತ್ತಿದ್ದಾರೆ. ಇನ್ನು ಹಲವರು ಹಾರ್ಟ್ ಇಮೋಜಿಗಳನ್ನು ಹಾಕುತ್ತಿದ್ದಾರೆ. ಮತ್ತೆ ಕೆಲವರು ನೀವು ಸೀರೆಯಲ್ಲಿ ಚೆನ್ನಾಗಿ ಕಾಣ್ತೀರಾ, ಈ ರೀತಿ ಪ್ರದರ್ಶನದ ಡ್ರೆಸ್ ಬೇಡ ಪ್ಲಿಸ್ ಎನ್ನುತ್ತಿದ್ದಾರೆ. ಇನ್ನು ನಟಿ ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸನ್ನಿಧಿ ಎಂದೇ ಫೇಮಸ್ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ.
ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ. ಬೆಲ್ಲಿ ಡ್ಯಾನ್ಸ್ನಲ್ಲಿಯೂ ಎಕ್ಸ್ಪರ್ಟ್ ಆಗಿರುವ ವೈಷ್ಣವಿ ಅದರದ್ದೇ ರೀಲ್ಸ್ ಮಾಡುತ್ತಾರೆ.
ಹುಟ್ಟುತ್ತ ಎಲ್ಲರೂ ಶೂದ್ರರೇ, ಬ್ರಾಹ್ಮಣರೂ ಮಾಂಸಾಹಾರ ತಿಂತಿದ್ರು... ಆದ್ರೆ... ವಿದ್ವಾನ್ ರಾಜೇಂದ್ರ ಭಟ್