ಹುಟ್ಟುತ್ತ ಎಲ್ಲರೂ ಶೂದ್ರರೇ, ಬ್ರಾಹ್ಮಣರೂ ಮಾಂಸಾಹಾರ ತಿಂತಿದ್ರು... ಆದ್ರೆ... ವಿದ್ವಾನ್ ರಾಜೇಂದ್ರ ಭಟ್
ಬ್ರಾಹ್ಮಣರು ಮಾಂಸಾಹಾರ ಬಿಟ್ಟಿದ್ದೇಕೆ? ಸಂಸ್ಕೃತ- ವೇದ ಎಲ್ಲರೂ ಕಲಿಯಬಹುದಾ? ಇತ್ಯಾದಿ ಪ್ರಶ್ನೆಗಳಿಗೆ ರ‍್ಯಾಪಿಡ್ ರಶ್ಮಿ ಷೋನಲ್ಲಿ ಉತ್ತರಿಸಿದ್ದಾರೆ ವಿದ್ವಾನ್ ರಾಜೇಂದ್ರ ಭಟ್.
ಈಗ ಆಹಾರದ ವಿಷಯವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಬಹು ಚರ್ಚೆ ಶುರುವಾಗುತ್ತಿದೆ. ಮಾಂಸಾಹಾರ ಮತ್ತು ಸಸ್ಯಾಹಾರಿಗಳ ನಡುವೆ ಆಗಾಗ್ಗೆ ವಾಗ್ಯುದ್ಧಗಳು ನಡೆಯುತ್ತಲೇ ಇವೆ. ಸಸ್ಯಾಹಾರವೇ ಶ್ರೇಷ್ಠವೆಂದು ಒಂದು ವರ್ಗ ಬರೆದರೆ, ಅದು ಶುದ್ಧ ಸುಳ್ಳು... ಮಾಂಸಾಹಾರಿಗಳು ಕೂಡ ಏನೇನೋ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನಾನ್ ವೆಜಿಟೇರಿಯನ್ಸ್. ಮಾಂಸಾಹಾರದಲ್ಲಿ ತಾಮಸ ಗುಣ ಇರುವ ಕಾರಣ, ಮನಸ್ಸಿನ ಮೇಲೆ ಅದು ಕ್ರೌರ್ಯತೆಯನ್ನು ಬಿಂಬಿಸುತ್ತದೆ ಎನ್ನುವುದು ಒಂದು ವಾದವಾದರೆ, ಇದನ್ನು ಅಲ್ಲಗಳೆಯುವವರು, ಬರೀ ಸಸ್ಯಾಹಾರಗಳನ್ನೇ ತಿನ್ನುವವರು ಕ್ರೌರ್ಯ ಮಾಡುವುದೇ ಇಲ್ಲವೆ ಎಂದು ಪ್ರಶ್ನಿಸುತ್ತಿದ್ದಾರೆ. ಅಪರಾಧ ಚಟುವಟಿಕೆಗಳನ್ನು ಮಾಡುವ ಮುನ್ನ ಮಾಂಸಾಹಾರ, ಮದ್ಯ ಸೇವನೆ ಮಾಡುವುದು ಇದೇ ಕಾರಣಕ್ಕೆ, ಮನಸ್ಸಿನ ಮೇಲೆ ಮಾಂಸಾಹಾರ ಪ್ರಚೋದನೆ ಬೀರುವುದರಿಂದಲೇ ಇವುಗಳ ಸೇವನೆ ಮಾಡುತ್ತಾರೆಯೇ ವಿನಾ ಯಾರೂ ಇಡ್ಲಿ-ಸಾಂಬಾರ್ ತಿಂದು ಕೊಲೆ ಮಾಡಲು ಹೋಗುವುದಿಲ್ಲ ಎನ್ನುವ ವಾದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಾದ-ಪ್ರತಿವಾದ ಕೊನೆಗೆ ವಿವಾದನ್ನೂ ಉಂಟು ಹಾಕಿದ್ದುದು ಇದೆ.
ಇವುಗಳ ನಡುವೆಯೇ, ಜಾತಿ, ಧರ್ಮದ ಬಗ್ಗೆಯೂ ಸಾಕಷ್ಟು ಚರ್ಚೆಗಳು ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ. ಇದೀಗ ಜಾತಿ ಹಾಗೂ ಆಹಾರದ ಕುರಿತು ವಿದ್ವಾನ್ ರಾಜೇಂದ್ರ ಭಟ್ ಅವರು, ರ‍್ಯಾಪಿಡ್ ರಶ್ಮಿ ಷೋನಲ್ಲಿ ಮಾತನಾಡಿದ್ದಾರೆ. ಗರುಡ ಪುರಾಣ ಸೇರಿದಂತೆ ಹಲವು ಪುರಾಣಗಳ ಕುರಿತು ಈ ಷೋನಲ್ಲಿ ವಿವರಣೆ ನೀಡಿರುವ ಅವರು ಆಹಾರದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಳಿದಂತೆ, ಹುಟ್ಟುತ್ತ ಎಲ್ಲರೂ ಶೂದ್ರರೇ. ಅವನ ಕರ್ಮ, ಜ್ಞಾನದಿಂದ ಬ್ರಾಹ್ಮಣತ್ವ ಬರುತ್ತದೆ. ಜ್ಞಾನ ಅವರಿಗೆ ಇವರಿಗೆ ಎಂದು ಇಲ್ಲ. ಎಲ್ಲರ ಹಕ್ಕು ಇದು. ಹಿಂದೆಲ್ಲ ಬ್ರಾಹ್ಮಣರೂ ಮಾಂಸಾಹಾರ ತಿನ್ನುತ್ತಿದ್ದರು. ಆದರೆ ಕಲಿಯುಗದಲ್ಲಿ ಅದನ್ನು ನಿಷೇಧ ಮಾಡಿದ್ರು. ಏಕೆಂದರೆ, ಮಾಂಸಾಹಾರದಲ್ಲಿ ತಾಮಸ ಗುಣ ಹೆಚ್ಚಿಗೆ ಇರುವ ಕಾರಣ, ತಾಮಸ ಗುಣ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಎಂದಿದ್ದಾರೆ ರಾಜೇಂದ್ರ ಭಟ್ ಅವರು. ನಮ್ಮ ಗುಣಗಳು, ಮಾತುಕತೆ, ಚಟುವಟಿಕೆ, ನಡವಳಿಕೆ... ಹೀಗೆ ಎಲ್ಲವೂ ಆಹಾರಕ್ಕೆ ಕನೆಕ್ಟ್ ಆಗಿರುವಂಥದ್ದು. ಏಕೆಂದರೆ ಆಹಾರ ಶುದ್ಧಿ ಎಂದರೆ ಅದು ಸತ್ವ ಶುದ್ಧಿ. ನಮ್ಮ ಆಹಾರ ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟೇ ಶುದ್ಧವಾದದ್ದು ನಮ್ಮ ಮನಸ್ಸು. ಆಹಾರ ಶುದ್ಧವಾಗಿದ್ದಷ್ಟೂ ನಮ್ಮ ಮನಸ್ಸು ಶುದ್ಧವಾಗಿರುತ್ತದೆ. ಬುದ್ಧಿ ಪ್ರಚೋದನೆಯಾಗಲೂ ಆಹಾರವೇ ಕಾರಣ ಎಂದಿದ್ದಾರೆ ಅವರು.
7 ಕೋಟಿ ಖರ್ಚು ಮಾಡಿ ಮದ್ವೆ ಮಾಡ್ದೆ, ಅಯ್ಯೋ... ಅನ್ನೋಕಾಗತ್ತಾ? ಡಿವೋರ್ಸ್ ಕುರಿತು ಅನು ಮನದ ಮಾತು
ಇದಕ್ಕೆ ಗ್ರಹದ ಕಲ್ಪನೆಯನ್ನು ನೀಡಿರುವ ವಿದ್ವಾನ್ ರಾಜೇಂದ್ರ ಭಟ್ ಅವರು, ನಮ್ಮ ಉದರದಲ್ಲಿ ಇರುವ ಅಗ್ನಿಗೆ ಜಠರಾಗ್ನಿ ಎಂದು ಹೇಳುತ್ತೇವೆ. ಈ ಜಠರಾಗ್ನಿಗೆ ದೇವತೆ ಬುಧ. ಆದ್ದರಿಂದ ನೀವು ಯಾವ ರೀತಿಯ ಆಹಾರ ಕೊಡುತ್ತೀರೋ ಆ ರೀತಿಯಾದಂಥ ಬುದ್ಧಿ ಪ್ರಚೋದನೆಯಾಗುತ್ತದೆ. ಎಲ್ಲಾ ಗ್ರಹಗಳ ಪ್ರಭಾವ ನಮ್ಮ ಮೇಲೆ ಬೀಳುತ್ತಾ ಹೋಗುತ್ತದೆ. ನಮ್ಮ ಮನಸ್ಸು ಯಾವ ಷಟ್ಚಕ್ರ ಇದೆಯೋ ಮೂಲಾಧಾರದಲ್ಲಿ ಇರುವಾಗ ಆ ಮನಸ್ಸು ನೀವು ಏನು ಸಂಕಲ್ಪ ಮಾಡುತ್ತೀರೋ ಅವೆಲ್ಲವೂ ಕೈಗೊಳ್ಳುತ್ತದೆ. ಇದನ್ನೇ ಇಂದಿನ ದಿನಗಳಲ್ಲಿ ಮ್ಯಾನಿಫೆಸ್ಟೇಷನ್ ಎಂದು ಹೇಳುತ್ತಾರೆ. ಈ ಎಲ್ಲರೂ 84 ಲಕ್ಷ ಜಂತುಗಳಲ್ಲಿ ಪುನಃ ಹುಟ್ಟು-ಸತ್ತು ಬರುವಂಥವರೇ. ಈ ಒಂದು ಸರ್ಕಲ್ ಕೂಡ ಗ್ರಹಗತಿಗಳಿಗೆ ಸಂಬಂಧಿಸಿದ್ದು ಎಂದಿದ್ದಾರೆ ಅವರು.
ಇದೇ ವೇಳೆ ಸಂಸ್ಕೃತ, ವೇದ ಕೇವಲ ಬ್ರಾಹ್ಮಣ ಸಮುದಾಹಕ್ಕೆ ಮೀಸಲೇ ಎನ್ನುವ ಪ್ರಶ್ನೆಗೂ ಉತ್ತರ ನೀಡಿರುವ ರಾಜೇಂದ್ರ ಅವರು, ಹಿಂದಿನಿಂದಲೂ ಸಂಸ್ಕೃತವನ್ನು ಯಾರು ಬೇಕಾದರೂ ಕಲಿಯಬಹುದಿತ್ತು. ಅದಕ್ಕೆ ಜಾತಿ-ಧರ್ಮದ ಹಂಗು ಇರಲಿಲ್ಲ. ಆದರೆ ಕೆಲವೊಂದು ಕಾರಣಕ್ಕೆ ವೇದವನ್ನು ಬ್ರಾಹ್ಮಣರಿಗೆ ಮೀಸಲು ಎಂದು ಇರಿಸಲಾಗಿತ್ತು. ಆದರೆ ಇದು ಬದಲಾಗಿ ಎಷ್ಟೋ ದಶಕಗಳೇ ಕಳೆದಿವೆ. ಸಂಸ್ಕೃತ, ವೇದ ಎನ್ನುವುದು ಯಾರ ಸ್ವತ್ತಲ್ಲ. ಯಾರು ಬೇಕಾದರೂ ಕಲಿಯಬಹುದು. ಆದರೆ ಇದನ್ನು ಕಲಿಯಲು ಬ್ರಾಹ್ಮಣೇತರರು ಮುಂದೆ ಬರದೇ ಇರುವುದಕ್ಕೂ ಕಾರಣವಿದೆ. ಅದೇನೆಂದರೆ, ಇವುಗಳನ್ನು ಕಲಿಯುವುದು ಸುಲಭದ ಮಾತಲ್ಲ, ಅಂದರೆ ದಿನಯಲ್ಲಿ, ಉಚ್ಛಾರಣೆಯಲ್ಲಿ ಸ್ಪಷ್ಟತೆ ಬರಲು ತುಂಬಾ ಶ್ರಮ ವಹಿಸಬೇಕು. ಬ್ರಾಹ್ಮಣರ ಮನೆತನದಲ್ಲಿ ಹುಟ್ಟುತ್ತಲೇ ಅದನ್ನು ಮಕ್ಕಳು ಕೇಳುವ ಕಾರಣ ಅವರಿಗೆ ಅದು ಸುಲಭವಾಗಿ ಒಲಿಯುತ್ತಿದೆಯೇ ವಿನಾ, ಯಾರು ಏನನ್ನಾದರೂ ಕಲಿಯಬಹುದು ಎಂದಿದ್ದಾರೆ. ಈ ವಿಡಿಯೋಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ.
15 ದಿನದಿಂದ ಮಕ್ಕಳನ್ನೂ ಮಾತನಾಡಿಸ್ಲಿಲ್ಲ! 'ತಾಲೀಬಾನ್'ನಲ್ಲಿ ಕಾಣಿಸಿಕೊಂಡ ಆರ್ಯವರ್ಧನ್ ಗುರೂಜಿ ಪತ್ನಿ ಕಣ್ಣೀರು