ಸೀತಾರಾಮ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಬೆಲ್ಲಿ ಡಾನ್ಸ್​ ಮಾಡಿದ್ದಾರೆ. ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. 

ಸೀತಾರಾಮ ಕಲ್ಯಾಣ ಭರ್ಜರಿಯಾಗಿ ನಡೆದಿದೆ. ಮದುವೆ ನಿರ್ವಿಘ್ನವಾಗಿ ಮುಗಿದಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಯಶಸ್ವಿಯಾಗಿ ನೆರವೇರಿದೆ. ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ನಿರುಮ್ಮಳಾಗಿದ್ದಾಳೆ. ಮದುವೆ ಮುಗಿಯುವವರೆಗೆ ಇದ್ದ ಆತಂಕವೂ ದೂರವಾಗಿದೆ. ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್​ ಆಗುತ್ತಲೇ ಇದೆ. ಕೊನೆಯ ಘಳಿಗೆಯಲ್ಲಿ ಸೀತಾಳ ಹೈಡ್ರಾಮಾದಿಂದಾಗಿ ಮದುವೆಯ ಬಗ್ಗೆ ಅನುಮಾನ ಕಾಡಿತ್ತು. ದೇಸಾಯಿಯವರು ಒಂದು ವರ್ಷದಲ್ಲಿ ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಸಂಬಂಧಿಕರ ಎದುರು ಹೇಳಿದಾಗ, ಸಿಹಿ ಬಿಟ್ಟು ಬೇರೆ ಮಗು ನನ್ನ ಜೀವನದಲ್ಲಿ ಬರಬಾರದು ಎಂದುಕೊಂಡಿರೋ ಸೀತಾಳಿಗೆ ಆಘಾತವಾಗಿ ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಳು. ಈಗ ಎಲ್ಲವೂ ಬಗೆಹರಿದು ಮದುವೆ ನಡೆದಿದೆ. ಅವರಿಬ್ಬರಿಂದ ಸಿಹಿಯನ್ನು ದೂರ ಮಾಡಲು ಭಾರ್ಗವಿ ಪ್ಲ್ಯಾನ್​ ಮಾಡುತ್ತಲೇ ಇದ್ದಾಳೆ. ಗಂಡ-ಹೆಂಡತಿ ಕೋಣೆಯಲ್ಲಿ ಸಿಹಿ ಮಲಗಬಾರದು ಎಂದಿದ್ದಾಳೆ. ಆದರೆ ರಾಮ್​ ಸಿಹಿಯನ್ನು ತನ್ನದೇ ಕೋಣೆಯಲ್ಲಿ ಮಲಗಿಸಿಕೊಂಡಿದ್ದಾನೆ. ಹೀಗೆ ಸೀತಾ-ರಾಮ ಪಯಣ ಮುಂದುವರೆದಿದೆ.

ಇದರ ನಡುವೆಯೇ, ಸೀತಾ ಮದುವೆಯಾದ ಖುಷಿಯಲ್ಲಿ ಭರ್ಜರಿ ರೀಲ್ಸ್​ ಒಂದನ್ನು ಮಾಡಿದ್ದಾರೆ. ಅಂದಹಾಗೆ ಸೀತಾ ಪಾತ್ರಧಾರಿಯ ಹೆಸರು ವೈಷ್ಣವಿ ಗೌಡ. ಬೆಲ್ಲಿ ಡ್ಯಾನ್ಸ್​ನಲ್ಲಿಯೂ ಎಕ್ಸ್​ಪರ್ಟ್​ ಆಗಿರುವ ವೈಷ್ಣವಿ ಅದರದ್ದೇ ರೀಲ್ಸ್​ ಮಾಡಿದ್ದಾರೆ. ಸೀತಾರಾಮ ಶೂಟಿಂಗ್​ನ ಬಿಡುವಿನ ಸಮಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್​ ಮಾಡುವ ವೈಷ್ಣವಿ ಇದೀಗ ರೀಲ್ಸ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿಯೂ ವೈಷ್ಣವಿ ಸಕತ್​ ಆ್ಯಕ್ಟೀವ್​. ಯೂಟ್ಯೂಟ್​, ಇನ್​ಸ್ಟಾಗ್ರಾಮ್​ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್​ಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್​ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್​ ಆಗಿ ರೀಲ್ಸ್​ ಮಾಡುತ್ತಾರೆ. ಸೀತಾರಾಮ ಸೀರಿಯಲ್​ನಲ್ಲಿ ಮದುವೆಯ ಸಂಭ್ರಮದ ನಡುವೆಯೇ ಇದೀಗ ರೀಲ್ಸ್​ ಮಾಡಿದ್ದಾರೆ. 

6 ದಿನಗಳ ಸೀತಾ-ರಾಮ ಮದ್ವೆ ಶೂಟಿಂಗ್​ನಲ್ಲಿ ಮೋಜು ಮಸ್ತಿ! ಹನಿಮೂನ್ ಯಾವಾಗ ಕೇಳಿದ ಫ್ಯಾನ್ಸ್​

ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಉಫ್​ ಬಿದ್ದೋಗಿ ಬಿಟ್ಟೆ ಕಣ್ರೀ ಎನ್ನುತ್ತಿದ್ದಾರೆ. ಅಷ್ಟಕ್ಕೂ ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್​ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್​ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್​, ಅರೆಬರೆ ಡ್ರೆಸ್​ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ.

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ, ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.

ನಿಮ್​ ಮಗಳಿಗೂ ಸಿಹಿ ಅಂತಾನೇ ಹೆಸರಿಡ್ತೀರಾ? ಇವಳನ್ನೇ ದತ್ತು ತಗೋತೀರಾ? ನಟಿ ವೈಷ್ಣವಿಗೆ ಥಹರೇವಾರಿ ಪ್ರಶ್ನೆ

View post on Instagram